ಜಯ ಜಯ ಶ್ರೀ ನರಕೇಸರಿ
ಜಯ ಜಯ ಲೋಕೋಪಕಾರಿ
ಜಯಜಯ ದೈತೇಯ ವೈರಿ
ಜಯ ಜಯ ನೃಹರೀ ಪ
ಜಯ ಜಯ ಜಯತು ಹರಿಶೌರೀ
ಜಯ ಜಯ ಜಯತು ಚಕ್ರಧಾರಿ
ಕಶಿಪು ಸಂಹಾರಿ
ಜಯ ಕಾರುಣ್ಯ ಲಹರೀ ಅ.ಪ
ಯಾದವಾದ್ರಿ ನಿಲಯ ನೃಹರೀ
ಖಾದ್ರಿನಗರವಾಸ ನೃಹರೀ
ವೇದರೂಪ ನೃಹರೀ ಸಾವ
ನಾದುರ್ಗವಾಸ ಧೀರ ನೃಹರೀ 1
ಭಾನುಕೋಟಿ ತೇಜ ನೃಹರೀ
ದೀನ ಭಕ್ತಪಾಲ ನೃಹರೀ
ದಾನವಾರಿ ಯೋಗ ನೃಹರೀ
[ಗಾನಲೋಲ ಹಂಪೀ ನೃಹರೀ] 2
ಸ್ಥಂಭಜಾತ ನಾರಸಿಂಹ [ಕನ್ನ
ಡಾಂಬೆಯೂರೂರನಾರಸಿಂಹ
ತುಂಬುರನುತ ನಾರಸಿಂಹ]
ಶಂಭುವಿನುತ ನಾರಸಿಂಹ 3
ಶೀಬಿನಗರ ನಾರಸಿಂಹ
ನಾಭಿಕಮಲ ನಾರಸಿಂಹ
ಅಭಯಂಕರ ನಾರಸಿಂಹ
ಪ್ರಭುಮಾಂಗಿರಿ ನಾರಸಿಂಹ 4