ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜ್ಯಾಕೆ ಎಲೆ ಮನುಜ ಭಯವಿಲ್ಲ ನಿನಗೆ ಕಂಜನಾಭನ ಧ್ಯಾನವಿರಲಿ ಮನದೊಳಗೆ ಪ ತಾಪತ್ರ ಬಂದೊದಗೆ ಪಾಂಡುಪ್ರಿಯನೆಂದೆನ್ನು ಶಾಪವೊದಗಲು ಅಂಬರೀಷನ್ವರದೆನಲೋ ಭೂಪತಿಗಳು ಮುನಿಯೆ ಪಾಂಚಾಲಿಪಾಲಕನೆನ್ನು ಆಪಾರ ಕಷ್ಟದಲಿ ಕರಿವರದೆನೆನಲೋ 1 ಮಾತೃ ವೈರ್ಯಾದರೆ ಧ್ರುವಪಾಲನೆನಲೋ ಭ್ರಾತೃವೈರ್ಯಾದರೆ ಸುಗ್ರೀವಸಖನೆನ್ನು ಖಾತ್ರಿಯಿಂ ಸತತದಿ ಸೂತ್ರಧಾರೆನಲೋ 2 ಸೆರೆಮನೆಯು ಒದಗಿರಲು ಪಿತಮಾತೆರ್ವರದೆನ್ನು ಧುರದೊಳಗೆ ಪೊಕ್ಕಿರಲು ನರಸಹಾಯನೆನಲೋ ಬರಿ ಮಳೆಯೊಳ್ಸಿಕ್ಕಿರಲು ಗಿರಿಯೆತ್ತಿದವನೆನ್ನು ದುರುಳರ್ಹಾವಳಿಯೊಳಗೆ ದನುಜಹರನೆನಲೋ 3 ಕವಿಯಲು ವೈರಿಗಳು ಕಂಸಮರ್ದನನೆನ್ನು ಶಿವನ ಕಾಯ್ದವನೆನ್ನು ಉರಿಹತ್ತಿಸುಡಲು ಭವಿಜನುಮ ಬಂದಿರಲು ಭವರೋಗಹರನೆನ್ನು ದಿವನಿಶೆಯು ಎಡೆಬಿಡದೆ ಭಯದೂರನೆನಲೋ 4 ಸ್ಥೂಲಭ್ರಷ್ಟನಾದರೆ ಬಲಿದ್ವಾರಪಾಲಕನೆನ್ನು ಕುಲಭ್ರಷ್ಟನಾದರಜಮಿಳನ್ವರದನೆನಲೋ ಇಳೆಮೂರು ಸಂರಕ್ಷ ಚೆಲುವ ಶ್ರೀರಾಮನಂ ಹಲವು ವಿಧದಲಿ ಭಜಿಸಿ ಫಲಗಳಿಸು ಬಿಡದೆ 5
--------------
ರಾಮದಾಸರು
ಪಂಥವ್ಯಾಕೋ ಪ್ರತಿಜ್ಞೆ ಯಾಕೋ ಪ ಸಂತಸದಿ ನಿನ್ನಂತರಂಗದಿ ಕಂತುಪಿತ ನೀನೆನಲು ಸಾಕೊ ಅ.ಪ ಕೋಪವ್ಯಾಕೊ ತಾಪವ್ಯಾಕೋ ತಾಪತ್ರಯಗಳ ಲೋಪ ಸಿರಿವರ ಕಾಪಾಡೆನಲದೊಂದೆ ಸಾಕೊ 1 ಕುಂದು ಯಾಕೋ ನಿಂದೆ ಯಾಕೋ ಸಿಂಧುಶಯನಗೋವಿಂದಗರ್ಪಿ ತೆಂದು ನೋಡ್ಹೆಚ್ದಿಂದ್ಯಾಕೆ ಬೇಕೊ 2 ಕ್ಷೇತ್ರ ಯಾಕೋ ಯಾತ್ರವ್ಯಾಕೋ ಖಾತ್ರಿಯಿಂದ ಜಗತ್ರಯಕೆ ಸು ಸೂತ್ರಾಧಾರಿಯೆಂದ ಮಾತ್ರ ಸಾಕೊ 3 ಸ್ನಾನವ್ಯಾಕೋ ಸಂಧ್ಯಾನವ್ಯಾಕೋ ಜ್ಞಾನವಿಡಿದು ಭಕ್ತಪ್ರಾಣನಾಥನ ಧ್ಯಾನಗೈಯಲದೊಂದೆ ಸಾಕೊ 4 ಜಪವು ಯಾಕೋ ತಪವು ಯಾಕೋ ಕಪಟನೀಗಪರಿಮಿತ ಹರಿಯ ಗುಪಿತದಿಂದರ್ಚಿಸಲು ಸಾಕೊ 5 ಮಂತ್ರವ್ಯಾಕೋ ತಂತ್ರವ್ಯಾಕೋ ಮಂತ್ರಮೂರ್ತಿ ಸರ್ವಾಂತರ್ಯಾಮಿಯ ಅಂತರಂಗ ತಿಳಿಯೆ ಸಾಕೊ 6 ನೇಮವ್ಯಾಕೋ ನಿತ್ಯವ್ಯಾಕೋ ಸ್ವಾಮಿಯೆನುತ ಪ್ರೇಮಿಯ ಶ್ರೀ ರಾಮನ ನಂಬಿಕೊಳ್ಳಲು ಸಾಕೊ 7
--------------
ರಾಮದಾಸರು