ಎಂದು ಪೇಳಯ್ಯ ಕಂದಗೆಂದು ಪೇಳಯ್ಯ ಹರಿ
ಯೆಂದು ಪೇಳಯ್ಯ ಮಂದಮತಿ ನಿವಾರಣೋದಯ ಪ
ಜಡಭವದ ಜಡರು ಕಡಿದು
ದೃಢತರದ ಜ್ಞಾನ ಕೊಡುವ
ಒಡೆಯ ನಿಮ್ಮ ಪುಣ್ಯ ನಾಮ
ಕಡು ಪಾಪಿ ಜಿಹ್ವೆಗುದಯ 1
ಸೂತ್ರಧಾರ ನಿನ್ನ ಪಾದ
ಖಾತ್ರಿಗೊಳಿಸಿ ನಿಜ ಸುಖದ
ಪಾತ್ರನೆನಿಪ ಸತತ ಎನ್ನ
ನೇತ್ರಕೆ ನಿನ್ನ ದರ್ಶನೋದಯ 2
ಅಧಮತನ ದೂರಮಾಡಿ
ಸದಮಲ ಮತಿಯಿತ್ತು
ವಿಧ ವಿಧದಿ ಕಾಯ್ವ ಸದಾಯೆನ್ನ
ಹೃದಯದಿ ಶ್ರೀರಾಮೋದಯ 3