ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀರಾಮಸ್ತುತಿಗಳು ರಾಮನ ನೆನೆ ಮನವೆ ಹೃದಯಾರಾಮನ ನೆನೆ ಮನವೆ ಪ ಸದ್ಗುಣಧಾಮನ ಸೀತಾ ಅ.ಪ ದಶರಥ ನಂದನನಾ ಧರಣಿಯೊಳಸುರರÀ ಕೊಂದವನ ವಸುಮತೀಸುತೆಯಂ ಒಲಿದೊಡಗೂಡಿ 1 ತಂದೆಯಮಾತಲಿವನಕೈತಂದುಸರಾಗದಲಿಬಂದವಿರಾಧನ ಕೊಂದು ನಿಶಾಚರಿಯಂದವಳಿದು ಖಳವೃಂದವ ಸವರಿದ 2 ಸೀತೆಯನರಸುತಲಿ ಕಬಂಧನ ಮಾತನನುಸರಿಸುತ ಸುತನ ಘಾತಿಸಿ ದಾತನ 3 ವಿಲಾಸದಿಂದ ತರುಣಿಯನರಸಲು ಮರುತನ ಮಗನಿಗೆ ಬೆರಳುಂಗುರವನು ಗುರುತಾಗಿತ್ತನ 4 ಧರಣಿಜೆಯನುಕಂಡುವನವನುಮುರಿದುಗುರುತುಗೊಂಡು ಅರಿಪುರವನು ಸುಟ್ಟುರುಹಿದ ವಾನರವರನಿಗೆ ಸೃಷ್ಟಿಪ ಪದವಿತ್ತಾತನ 5 ಶರಣನ ಲಂಕೆಗೆ ದೊರೆಯನು ಮಾಡಿ ಸಿರಿಯನಯೋಧ್ಯೆಗೆ ಕರೆತಂದಾತನ6 ಧರಣಿಯ ಪಾಲಿಸುತ ಧರ್ಮದ ಸರಣಿಯ ಲಾಲಿಸುತ ವರದವಿಠಲದೊರೆ ಪರಮೋದಾರನ 7
--------------
ವೆಂಕಟವರದಾರ್ಯರು
(ಶ್ರೀ ವಿಷ್ಣುತೀರ್ಥರು) ಮೋದ ಬೀರುತ ತಾ ಮೋದಪುರಕೆ ಬಂದವನ್ಯಾರೆಪೇಳಮ್ಮಯ್ಯಾ ಪ ಶುಕಮುನಿ ಪೇಳಿದ ಶಾಸ್ತ್ರದ ಸಾರವ ಸುರಿಸಿದ ಧೀರ ಶ್ರೀ ವಿಷ್ಣುತೀರ್ಥಾರ್ಯ ಕಾಣಮ್ಮಾಅ.ಪ. ಶುದ್ಧವೃತ್ತಿಗಳಿಂದನುಭೋಗಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಜೀವರತಾ ಬುದ್ಧಿ ಭೇದಿಪನ್ಯಾರೆ ಪೇಳಮ್ಮಯ್ಯಾ ಶುದ್ಧ ಶೂನ್ಯರುಪದ್ರವ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಶುದ್ಧ ಶೃತಿ ಸ್ಮøತಿ ಪದ್ಧತಿ ತಪ್ಪದೆ ಇರುವೋ ಯತೀಶ್ವರರೇ 1 ಮರೆಪೊಕ್ಕವರನು ಮರೆಯದೆ ಪೊರೆವನದಾರೆ ಪೇಳಮ್ಮಯ್ಯಾ ಮೋರೆಯ ತೋರೆಂದು ಮಾರನಯ್ಯ ಮುರಾರಿಗೆ ಪೇಳ್ವವನಾರೆ ಪೇಳಮ್ಮಯ್ಯಾ ಮೋರೆ ಮೋಹಿಸಿ ಮೂಲೋಕವ ಸುತ್ತಿದನ್ಯಾರೆ ಪೇಳಮ್ಮಯ್ಯಾ ಮೋರೆ ಒಂದು ಮೂರು ಕಣ್ಣುಳ್ಳ ಬೊಮ್ಮನ ಪ್ರೀತಿಯ ಮಗನಮ್ಮ 2 ಬಂದು ಸೇವಿಸೆ ಘನ ಬಂಧನ ಬಿಡಿಸುವನ್ಯಾರೆ ಪೇಳಮ್ಮಯ್ಯಾ ಹಿಂದು ಮುಂದು ತನ್ನ ನಂಬಿದವರ ಮನಮಂದಿರ ದಿಪ್ಪುವನ್ಯಾರೆ ಪೇಳಮ್ಮಯ್ಯಾ ಇಂದುಧರ ಖಳವೃಂದ ಮೋಹನ ಗುರು ನಂದಿವಾಹನನೇ ಪೇಳಮ್ಮಯ್ಯಾ ಇಂದಿರೇಶ ತಂದೆವರದಗೋಪಾಲವಿಠಲನ ಸೇವಿಪ ನೀಲಕಂಠ ಕಾಣಮ್ಮಾ 3
--------------
ತಂದೆವರದಗೋಪಾಲವಿಠಲರು
ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ ನರಸಿಂಹಾರ್ಯ ಶೇವಿತಗೆ ಅ.ಪ ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ ಮಾರುತಾತ್ಮಜಗೆ 1 ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ ಛಂದದಲಿ ಪಡೆದಂಥ ಭೀಮಗೆ 2 ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ ಪಾತ್ರನಿಗೆ 3
--------------
ಕಾರ್ಪರ ನರಹರಿದಾಸರು
ರಾಮನ ನೆನ ಮನವೇ-ಹೃದಯಾ-ರಾಮನನೆನೆ ಮನವೇ ಪ ಸದ್ಗುಣ ಧಾಮನಾ ಸೀತಾ ಅ.ಪ. ದಶರಥ ನಂದನನಾ-ಧರಣಿಯೊಳಸುರರ ಕೊಂದವನ ಪಶುಪತಿ ಚಾಪವ ಖಂಡಿಸಿಮುದದಿಂ ವಸುಮತಿ ಸುತೆಯಂ ಒಲಿದೊಡಗೂಡಿದ-ರಾಮನ 1 ತಂದೆಯ ಮಾತಿನಲಿ-ವನಕೈತಂದು ಸರಾಗದಲಿ ಬಂದ ವಿರಾಧನ ಕೊಂದು ನಿಶಾಚರಿ ಯಂದವಳಿದು ಖಳವೃಂದವ ಸವರಿದ 2 ಸೀತೆಯನರಸುತಲಿ-ಕಬಂಧನ ಮಾತನು ಸರಿಸುತಲಿ ವಾತನಮಗನೊಳು ಪ್ರೀತಿಯಿಟ್ಟು ಪುರುಹೂತನ ಸುತನಂ ಘಾತಿಸಿ ದಾತನ-ರಾಮನ 3 ತರಣಿ ತನಯನಿಂದ-ಕಪಿಗಳ ಕರೆಸಿ ವಿಲಾಸದಿಂದ ತರುಣಿಯನರಸಲು ಮರುತನ ಮಗನಿಗೆ ಬೆರಳುಂಗುರವನು ಗುರುತಾಗಿತ್ತನ-ರಾಮನ4 ಗುರುತು ಕೊಂಡು ಅರಿಪುರವನು ಸುಟ್ಟುರುಹಿದ ವಾನರ- ವರನಿಗೆ ಸೃಷ್ಠಿಪಪದವಿತ್ತಾತನ-ರಾಮನ 5 ಶರನಿಧಿಯನು ಕಟ್ಟಿ-ಶತ್ರುನಿಕರವನು ಹುಡಿಗುಟ್ಟಿ ಶರಣನ ಲಂಕೆಗೆ ಧೊರೆಯನು ಮಾಡಿ ಸಿರಿಯನಯೋಧ್ಯಗೆ ಕರೆತಂದಾತನ-ರಾಮನ 6 ಸರಣಿಯ ಲಾಲಿಸುತ ಶರಣಾಭರಣ ಪುಲಿಗಿರಿಯೊಳು ನೆಲೆಸಿದವರದವಿಠ್ಠಲ ಧೊರೆ ಪರಮೋದಾರನ-ರಾಮನ 7
--------------
ಸರಗೂರು ವೆಂಕಟವರದಾರ್ಯರು