ನಮೋ ನಮಸ್ತೇ ನರಸಿಂಹ ದೇವಾ
ಸ್ಮರಿಸುವವರ ಕಾವಾ ಪ
ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ
ಉಮೆಯರಸನ ಹೃತ್ಕಮಲದ್ಯುಮಣಿ ಮಾ
ರಮಣ ಕನಕ ಸಂಯಮಿ ವರವರದಾ ಅ
ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ
ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ
ಚಿತ್ರ ಮಹಿಮನಕ್ಷತ್ರನೇಮಿಸ
ರ್ವತ್ರಮಿತ್ರ ಸುಚರಿತ್ರ ಪವಿತ್ರ 1
ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ
ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ
ಶಿಪುಸುತನ ಕಾಯ್ದಪೆನೆನುತಲಿ ನಿ
ಷ್ಕಪಟ ಮನುಜಹರಿವಪುಷ ನೀನಾದೆ 2
ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ
ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ
ಕೃಪಣಬಂಧು ತವ ನಿಪುಣತನಕೆ ನಾ
ನುಪಮೆಗಾಣೆ ಕಾಶ್ಯಪಿವರವಾಹನಾ 3
ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತರಾರಾಧ್ಯಾ
ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ
ತ್ಯೋದಯ ಮಂಗಳ ಪಾದಕಮಲಕೆ 4
ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ
ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ
ಕ್ಷಣಕೆ ಕಥಾಮೃತ ಉಣಿಸು ಕರುಣದಿ 5