ನಾರಾಯಣ ನಾರಾಯಣ ನಾರಾಯಣನಾರಾಯಣ ಪ.
ಭಕ್ತಿಬೇಕು ಪರಮ ವಿರಕ್ತಿ ಬೇಕು ಹರಿ ಸ-ರ್ವೋತ್ತಮವೆಂಬೊ ನೆನವಿರಬೇಕು1
ಅರಿಷಡ್ವರ್ಗದ ವಿಜಯ ಬೇಕು ಗುರುಕುಲತಿಲಕಗುರುಮಧ್ವಮತ ಬೇಕು ಗುರುಭಕ್ತಿ ಬೇಕು 2
ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ-ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು 3
ವೇದದಭ್ಯಾಸವು ಬೇಕು ಅದರರ್ಥ ಹರಿಯೆಂಬಬೋಧವಿರಲುಬೇಕು ಖಳರಳಿಯಲುಬೇಕು4
ವಾದಿರಾಜನೊಡೆಯ ಹಯವದನನ್ನ ದಿವ್ಯ-ಪಾದ ನಂಬಿಯಿರಬೇಕು ವರಾದಿಗಳ ಬಯಸುವೋರು 5