ವಂದಿಸುವೆ ಗುರುವರಾ ವಂದಿಸುವೆ ಗುರುವರಾವಂದಿಸುವೆ ಗುರುವರಾ ಮಂದಮತಿಯ ಪಾಲಿಸೆಂದು ಪ.
ತ್ರಿವಿಧ ಫಲವ ಕೊಡಿಸುವವನೇ 1
ಜಲಧಿ ದಾಟಿಮಾತೆಗುಂಗುರವಿತ್ತು ಪ್ರೇಮ ವಾರ್ತೆಯನ್ನು ಪೇಳಿದವಗೆ 2
ಭೀಮನಾಮದಿಂದ ಕರೆಸಿ ಭೂವಿಯಲ್ಲಿ ಮೆರೆವ ಖಳರಧಾಮವನ್ನೆ ಸೀಳಿ ಸಾರ್ವಭೌಮಕೃಷ್ಣಗರ್ಪಿಸಿದಗೆ 3
ಅದ್ವೈತ ಮತವನ್ನೆಲ್ಲ ಕೆಡಹಿಶುದ್ಧಮತವ ಸ್ಥಾಪಿಸಿದ ಮಧ್ವಮುನಿರಾಯನಿಗೆ 4
ತಂದೆವರದವಿಠಲನ್ನ ಒಂದೆ ಮನದಿ ಜಪಿಸುತಿರುವಇಂದುಶೇಖರಾದಿ ಸುರವೃಂದ ವಂದ್ಯನಾಥವಹಗೆ 5