ಬಾರೊ ಭಾಗ್ಯದ ನಿಧಿಯೆ, ದಯಾಂಬುಧಿಯೆ ಪ
ಸಾರಿದವರ್ಗಿತ್ತೆ ಸುಧೆವಾರಿಜಾರಿ ಕೌಮುದಿವಾರಿಜಧರ ಮುದದಿಸಾರಸ ಹೃದಯದಿಕೇರಿ ಕೇರಿಯಲಿ ಶೃಂಗಾರದಿ ಮೆರೆವ ಅಪಾರ ದಯಾನಿಧಿ ಅ
ಪಾದ ಸಾರಥಿ ಪರ ರವಿಜನ ನೀ ಸೋಲಿಸಿತ್ರಿಜಗ ವಿಜಯ ವೇಷ ವಿಜಯಗಿತ್ತು ಮೆರೆದೆವಿಜಯ ಮೂರುತಿಯೆ 1
ದಶಶಿರ ಸಂಹರದಶರೂಪದಲಿ ಖಳದಶನ ಮೂರುತಿಯೆಂದುಹೆಸರು ಹೇಳುವರು2
ಪದುಮನಾಭ ಪದ್ಮೇಶ ಪದುಮಮಾಲಿ ಪದ್ಮಾಕ್ಷಪದುಮ ಪಾಣಿ ಪದ್ಮಾಂಘ್ರಿ ಪದುಮಸಖ ತೇಜಿಪದುಮ ಕಲ್ಪದಿ ನಾಭಿ ಪದುಮದಿ ಚತುರ್ಮುಖಪದುಮ ಜನ ಪಡೆದು ಪದುಮಜಾಂಡವಡೆದಿಪದುಮ ಪೀಠನ ಹೃತ್ಪದುಮದಿ ನಿನ್ನಪದುಮ ತೋರುತ ಬಾರೊ ಕಾಗಿನೆಲೆಯಾದಿಕೇಶವಹದುಳದಿಂದ ಬಾರೊ ಭಾಗ್ಯದ ನಿಧಿಯೆ 3