ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲಿ ಬಾರೋ ಹರಿ ತಾತ್ಸಾರ ಥರ ಪರಿ ಪ. ಬಿಲ್ಲಹಬ್ಬದ ನೆವನದಿಂದತಿ ಮಲ್ಲಕಂಸಾದಿಗಳ ಮಡುಹಿದ ಬಲ್ಲಿದನೆ ಲೋಕದಲಿ ಸರಿ ನಿನ- ಗಿಲ್ಲ ಶ್ರೀ ಭೂನಲ್ಲ ಕೃಪೆಯಿಂದ ಅ.ಪ. ಶ್ರೀ ಪಯೋಜಭವ ಶಿವ ಶಕ್ರಾದಿಗಳನ್ನು ಕಾಪಾಡಿ ಖಳಕುಲವ ಖಂಡಿಪ ಸರ್ವ ಭೂಪತಿ ತವ ಪಾದವ ನಂಬಿರಲೆನ್ನ ದುರಿತ ಮ- ಹಾಪಯೋಧಿಯೊಳಿಳಿಸಿದರೆ ಸುಜ- ನಾಪವಾದವು ಬಿಡದು ನಿನ್ನ ಪ- ದೇ ಪದೇ ಇನ್ನೆಷ್ಟು ಪೊಗಳಲಿ 1 ಕರ್ಮ ಕೊಡುವುದು ಫಲವೆಂಬ ನುಡಿಯನುಭವಸಿದ್ಧವು ಆದರು ಜಗ ದೊಡೆಯಗಾವದಸಾಧ್ಯವು ನೀ ಮಾಳ್ಪ ಚೋದ್ಯವು ನುಡಿ ಮನೋಗತಿಗಳುಕವೆಂಬೀ ಸಡಗರವು ವೇದ ಪ್ರಸಿದ್ಧವು ನಡೆಯಲೇಳಲು ಶಕ್ತಿ ಕುಂದಿದ ಬಡವನನು ಕೈಪಿಡಿದ ತವಕದೊಳ್ 2 ಬೆಟ್ಟದೊಡೆಯ ವೆಂಕಟೇಶ ನೀ ಗತಿ ಎಂದು ಘಟ್ಯಾಗಿ ನಂಬಿರುವ ದಾಸನ ಕೈಯ ಬಿಟ್ಟರೆ ಸರಿಯೆ ದೇವ ಸಜ್ಜನರ ಕಾವ ಸಟ್ಟಸ ಶಿಗಡಿ ನೀರ ಸುರಿಸುತ ಕಟ್ಟಿಕಟ್ಟಿಸುತದರ ಛಾಯ ದೊ - ಳಿಟ್ಟ ಗದ್ದಿಗೆಯಲ್ಲಿ ಕುಳಿತು ಸ- ಮೃಷ್ಟ ಸುಖವುಂಬರಸನಂದದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ನಾರಾಯಣ ಸನ್ನುತ ಸುಗುಣ ಗುಣಾರ್ಣವ ಸುಮನಪತಿ ಶ್ರೀ ಭೂದುರ್ಗಾರಮಣ ಮಾಂಪಾಹಿ ಪ ಲೋಕೇಶ ವಿಧಾತಜನಕ ರ ತ್ನಾಕರಮಥನ ಜಗದಾಘಪಹ ಶ್ರೀಕಂಠ ಪಿತಾಮಹ ಮದನನೇಕ ಸುಲಾವಣ್ಯ ಆಕಾಶ ತರಂಗಿಣಿ ಪಿತ ಕರುಣಾಕರ ಕೌಮೋದಕಿಧರ ಧರಣಿ ಕುವರಾಂತಕ ಕರುಣದಿ ಚಿತ್ತೈಸು ನೀ ಹಸಿಗೆ ಶೋಭಾನೆ 1 ಅರದೂರಾಬ್ಜ ಭವಾಂಡೋದರ ಶರಣಾಗತ ಸವಿ ಪಂಜರ ಅಂ ಬರ ಭೂ ಪಾತಾಳದಿ ವ್ಯಾಪ್ತಾ ಜರಮೃತ್ಯು ವಿದೂರ ಕರಿವರ ಪ್ರಭಂಜನ ಪೀತಾಂ ಬರಧರ ಖಳಕುಲವನ ವೈಶ್ವಾ ನರ ನಾರದನುತ ಮಹಿಮನೆ ಚಿತ್ತೈಸು [ಹಸೆಗೆ] 2 ಸತ್ವರಜಸ್ತಮ ಜೀವರ ತತ್ ಸಾಧನವರಿತವರಗತಿ ಗ ಳಿತ್ತು ಪೊರೆವ ವಿಬುಧವರದ ವರಸತ್ಯವತಿ ಸೂನು ಉತ್ತಮ ಪುರುಷನೆ ಚೇತನ ಜಡದ ತ್ಯಂತವಿಭಿನ್ನ ವಿಜಯ ಸಖ ಸತ್ಯಸುಕಾಮ ಕಮಲನಯನನೆÉ ಚಿತ್ತೈಸೊ [ಹಸೆಗೆ]3 ವಾಸವತನುಸಂಭವ ಸಾರಥಿ ವೀಶುದ್ಭುಜ ವಿಧೃತ ಸುದರ್ಶನ ದಶಾರ್ಹ ದಿವಕರನಿಭ ಸಂಕಾಶÀ ಸುಭದ್ರಾತ್ಮಾ ವಾಸುಕಿ ಪರ್ಯಂಕಶಯನ ಹರಿ ವ್ಯಾಸಕಪಿಲ ದತ್ತಾತ್ರಯ ಮಹಿದಾಸ ವೃಷಭರೂಪ ರಮೆಯರಸ ಚಿತ್ತೈಸು [ಹಸೆಗೆ]4 ಪಾಂಡವ ಸಖ ಪತಿತ ಸುಪಾವನ ಚಂಡಾಂಶು ನಿಶಾಕರ ಪಾವಕ ಮಂಡಲದೊಳಗತಿ ಬೆಳಗುವ ಕೋದಂಡ ಧೃತ ಕರಾಬ್ಜ ಕುಂಡಲ ಮಂಡಿತ ಗಂಡಸ್ಥಳ ಖಂಡಮಹಿಮ ಖೇಚರ ಪುರಹರ ಗಂಡುಗಲಿ ಜಗನ್ನಾಥ ವಿಠಲ ಚಿತ್ತೈಸೋ [ಹಸೆಗೆ]5
--------------
ಜಗನ್ನಾಥದಾಸರು
ನೀ ಮನಒಲಿಯುತೆ ಬಾರಮ್ಮ ಪ ನಲಿನಲಿದಾಡುತ | ಒಲುಮೆಯದೋರುತ | ನಲವಿನಿಂದ ಸ | ಜ್ಜನರಿಗೊಲಿವಳೇ ಅ.ಪ ಖಳಕುಲವಳಿಸುತಲಿ | ಶರಣರಿಗೊಲಿಯುತ ಹರುಷದಲಿ || ಇಳೆಯೊಳು ಮೆರೆಯುವ | ನಂದಿನಿ ನದಿಯೊಳು | ನೆಲೆಯಾಗಿರುತಿಹ | ಜಲದುರ್ಗಾಂಬಿಕೆ1 ಕರುಣವ ಬೀರುತಲಿ | ತವ ಪದ | ಶರಣರ ಪೊರೆಯುತಲಿ || ಪರಿಪರಿವಿಧದಲಿ | ಧರಣಿಯ ಭಾರವ | ಪರಿಹರಿಸಿದ ಶ್ರೀ | ಪರಮೇಶ್ವರಿಯೆ2 ಅಂಬುಜದಳನಯನೆ | ನಿನ್ನನು | ನಂಬಿದೆ ಗುಣಸದನೆ || ಶಂಭುಮನೋಹರೆ | ಶಾಂಭವಿ ಶಂಕರಿ | ನಂಬಿದ ಭಕುತರಿ | ಗಿಂಬು ಗೊಡಲು ನೀ 3 ದೇಶ ದೇಶದೆಲ್ಲ | ನಿನ್ನಾ | ಶ್ರೈಸುವ ಜನಕೆಲ್ಲ || ತೋಷವ ಪಡಿಸುತ | ಆಸೆಯ ನೀವೆ | ನ್ನಾಸೆಯ ಸಲ್ಲಿಸು | ಕಟಿಲಪುರೇಶ್ವರಿ4
--------------
ವೆಂಕಟ್‍ರಾವ್
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು