ವಿವಿಧ ದೈವ ಸ್ತುತಿ
ಜಲರುಹ ಮೋಹನ ವಿಶಾಲ ನೇತ್ರ ಪ
ಗಾನಾನಂದ ಲೋಲ ಬಂಧುರ ಗಾನಾನಂದ ಲೋಲಾ
ಗೋಪಾಲ ವನಮಾಲ ಗೋಕುಲ ಗೋಪಾಲ ವನಮಾಲ ಅ.ಪ
ದಶರಥ ನಂದನ ವಿಶಾಲಹೃದಯ
ಸತ್ಯಧರ್ಮಶೀಲ ರಾಘವ ಸತ್ಯಧರ್ಮಶೀಲ
ಖಲಾಳಿಕುಲಶೂಲ ರಾಘವ ಖಲಾಳಿಕುಲಶೂಲಾ 1
ಪುರಹರ ಶಂಕರ ಕೃಪಾ ಸಮುದ್ರ
ನಾಟ್ಯನಾದ ಚತುರ ಶ್ರೀಕರ ನಾಟ್ಯನಾದ ಚತುರ
ಪಿನಾಕ ಶಶಿಶೇಖರ 2
[ಶ್ರೀರಾಮಪ್ರಿಯ ಭಕ್ತಾಗ್ರೇಸರ]
ಪವನಾತ್ಮಜ ಶೂರ ಹನುಮಾನ್ ಪವನಾತ್ಮಜ ಶೂರ
ಮರಕತ ಮಣಿಹಾರ ಮಾರುತಿ ಮರಕತ ಮಣಿಹಾರ 3
ಶರಣ ಜನಾನುತ ಗಿರೀಶ ಸದೃಶ
ಸತ್ಯಸಾಯಿಬಾಬ ಪಾಲಯ ಸತ್ಯಸಾಯಿಬಾಬ
ಪರಮದಯಾಹೃದಯಾ ಸವಿನಯ ಪರಮದಯಾಹೃದಯ 4