ಶ್ರೀಕಾಂತನನ್ನೊಲಿಸುವಾ ಬಗೆಯಾನೊರೆವೆ
ಮಾನವ ಪ.
ಶ್ರೀಕರಗುಣಯುತ ಪಾಕಶಾಸನವಿನುತ
ಲೋಕೈಕ ವೀರನನ್ನೊಲಿಸುವಾ ತೆರನ ಪೇಳ್ವೆನಾಲಿಸು ಅ.ಪ.
ಶಕ್ತಿ ಸಾಹಸಗಳಿಗೆ ಸೋಲುವನಲ್ಲ ರಕ್ಕಸಾಂತಕಮಲ್ಲ
ಯುಕ್ತಿಮಾರ್ಗಕೆ ಮನವ ಸಿಲುಕಿಪನಲ್ಲ ಭಕ್ತವತ್ಸಲ ಸಿರಿನಲ್ಲ
ವಿತ್ತ ಮೂಲಕದಿಂದ ಚಿತ್ತ ಚಲಿಸುವುದಲ್ಲ
ಮುಕ್ತಿದಾಯಕನ ಮೆಚ್ಚಿಸಲ್ ವಿರಕ್ತಿಯಿಂ ಫಲವಿಲ್ಲ
[ಮತ್ತ] ಖಿಲಾಂಡಕೋಟಿ ಬ್ರಹ್ಮಾಂಡನಾಯಕನ ಮೆಚ್ಚಿಸಲ್
ಭಕ್ತಿಯೊಂದೇ ಉತ್ತಮೋಪಾಯ ಕೇಳೆಲೈ1
ದೃಢದಿ ಶೈಶವದೊಳೇ ಅಡವಿಯನಾರಯ್ಯುತೆ
ಪೊಡವೀಶನಡಿಗಿತ್ತ ತೊಡವಾವುದದ ಪೇಳ್
ಕಡು ಭಕ್ತನಾ ವಿದುರ ಪಡೆದನಸುರಾರಿಯಾಲಿಂಗನದ ಸುಖಮಂ
ಮಡದಿಮಣಿ ಪಾಂಚಾಲಿ ಪಡೆದಳಕ್ಷಯಪ್ರದಾನಮಂ
ತಡೆಯೇನು ಪೇಳಾ ಪರಮಾತ್ಮನೊಲ್ಮೆಗಿನ್ನು
ದೃಢಭಕ್ತಿಗಿಂ ಮಿಗಿಲು ತೊಡವಾವುದಿರ್ಪುದೈ 2
ದಾನವವಂಶದಲಿ ಜನಿಸಿದನಾ [ಸು]ಜ್ಞಾನಿ ಪ್ರಹ್ಲಾದನು
ಸಾನುರಾಗದಿ ಹರಿಯ ಭಕ್ತಿಯಿಂ ಧ್ಯಾನಿಸೆ ಕಂಬದಿಂ
ನುನಿಸಿಯಾಕ್ಷಣದಲ್ಲಿ ಮನುಜಕೇಸರಿಯಾಗಿ
ಘನದಾಕೋಪವನು ತಾಳಿ ದನುಜನ ಉರವ ಸೀಳಿ
ಮನ್ನಿಸುತೆ ಭಕ್ತನಂ ನನ್ನಿಯಿಂ ಮೈದಡಹಿ
ಉನ್ನತೋನ್ನತ ಪದವನಿತ್ತನಾಖಲಕುಠಾರಿಶೌರಿ
ಮುನ್ನ ಭಕ್ತಿಯಿದುವೇ ಮುಖ್ಯಸಾಧನ ಕೇಳೈ 3