ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾನವ ಮಾಡುವೆನು ನಾಮನದಣಿಯ ನಾಮಾಮೃತವ ಪಾನವ ಮಾಡುವೆನು ಪ. ಶ್ರೀನಿವಾಸನ ನಾಮಸುಧಾರಸಏನುರುಚಿಯೋ ಕಾಣೆ ಜೇನುತುಪ್ಪದಂತೆ1 ಸಕ್ಕರೆ ಬೆರೆಸಿದ ಚೊಕ್ಕಪಾನಕವನ್ನುಮಿಕ್ಕು ಮೀರುತಲಿದೆ ರಕ್ಕಸಾರಿಯ ಧ್ಯಾನ 2 ಕದಳಿ ಖರ್ಜುರ ದ್ರಾಕ್ಷಿ ಅಡಕೆಯಿಮ್ಮಿಗಿಲಾಗಿಮುದಕೊಡುವುದು ಜಿಹ್ವೆಗೊದಗಿದ ತತ್‍ಕ್ಷಣ 3 ಕಾಸಿದ ಕೆನೆಹಾಲ ದೂಷಿಸುವಂತಿದೆಏಸುರುಚಿಯೋ ಹರಿದಾಸರೆ ಬಲ್ಲರು 4 ಹಯವದನನ ನಿರ್ಭಯದಿಂ ಭಜಿಸಲುದಯಮಾಡುವ ಸಾಯುಜ್ಯಪದವನಿತ್ತು5
--------------
ವಾದಿರಾಜ
ಫಲಾಹಾರವ ಮಾಡೊ ಪರಮಪುರುಷನೆ ಲಲನೆ ಲಕುಮಿಯ ಕರಕಂಜದಿಂದ ಪ. ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು ಮಧುರಮಾವು ಮಾದಳ ತೆಂಗಿನಕಾಯಿ ತುದಿಮೊದಲಾದ ಪರಿಪರಿ ಫಲಗಳು 1 ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ ಮತ್ತಾದ ತುಮರೆ ಪರಗಿ ಕಾರೆ ಕವಳಿ ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು 2 ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು ಸಾಲುರಸಾಯನ ಸವಿಯೆಳನೀರು ಮೂಲೋಕದೊಡೆಯ ಹಯವದನ ವೆಂಕಟರೇಯ ಪಾಲಿಸೊ ಲಕುಮಿಯ ಕರಕಂಜದಿಂದ 3
--------------
ವಾದಿರಾಜ