ಆವುದು ಖರೆಯೆಲೊ ಜೀವನೆ ಆವುದು ನಿಜವೆಲೊ ಪ
ಆವುದು ಖರೆಯಲೋ ಜೀವ ಜಗದ ಸುಖ
ಮಾಯದೆಲ್ಲನು ಭಾವಿಸಿ ನೋಡೋಅ.ಪ
ಬಡತನ ನಿಜವೇನೋ ನಿನಗೀ ಕಡುಸಿರಿ ಸ್ಥಿರವೇನು
ಮಡದಿ ಮಕ್ಕಳು ನಿನ್ನ ಸಂಗಡ ಕಡೆತನಕಿಹ್ಯರೇನೊ
ಹೆಡತಲೆ ಮೃತ್ಯು ಬಂದು ಪಿಡಿದು ಎಳೆಯುವಾಗ
ಅಡರಿಕೊಂಡು ನಿನ್ನ ಬಿಡಿಸಿಕೊಂಬುರೇನು 1
ರಾಜ್ಯ ಭಂಡಾರವೆಲ್ಲ ನಿನಗೆ ಸಹಜವಾದದ್ದಲ್ಲ
ಗೋಜುಪ್ರಪಂಚ ನಿಖಿಲವಂ ದಿನಮಾಜಿಹೋಗುವುದೆಲೊ
ಸೋಜಿಗವಾಗಿ ಮಿಂಚು ತೇಜದಡಗುವಂತೆ
ಈ ಜಗ ಸಮಾಜ ನಿಜವಿನಿತಿಲ್ಲೆಲೊ 2
ಕತ್ತೆಯಂತೆ ಕೂಗಿ ಜನ್ಮವ್ಯರ್ಥ ಕಳೆಯಬೇಡೊ
ಉತ್ತಮರಿಗೆ ಬಾಗಿ ಸತ್ಯಪಥಕೆ ಹೊಂದು ಪಾಡೊ
ನಿತ್ಯ ನಿರ್ಮಲ ಸರ್ವೋತ್ತಮ ಶ್ರೀರಾಮಪಾದ
ಭಕ್ತಿಯಿಂ ಪಾಡಿ ಮುಕ್ತಿಯ ಪಡೆಯೊ3