ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ದಯಾಸಂಪನ್ನ ಭಕ್ತ ಪ್ರಸನ್ನಾ ಪ ಕಂದನಿನ್ನಯ ದಿವ್ಯಾನಂದ ಮೂರುತಿಯ ನಾ ಕುಂದದೇ ಭಜಿಸಲು ಮರುಗಿ ಬೇಗಾ ಇಂದಿರೇ ಅಜಭವರೆಂದೂ ಕಾಣದ ನಿಜ ವೆಂದೆಂಬೋ ರಾಜ್ಯದೊಳಿದ್ದ ಕಾರಣದಿಂದ 1 ಹರಿಸರ್ವೋತ್ತಮನೆಂದು ಪಿತನಾಜ್ಞೆಯ ಮೀರಲು ಹರಿರೂಪತಾಳ್ದು ದೈತ್ಯನ ಶಿರವಾ ಹರಿದು ಬಾಲನನೆತ್ತಿ ಸಲಹಿದ ಬಗೆಯಿಂದ ಕರುಣಾಕರನೆಂದು ಶ್ರುತಿಯು ಪೇಳುತ್ತಿರಲೂ 2 ಪಾತಕದಿಂದ ಗೌತಮಸತಿ ಶಿಲೆಯಾಗೆ ಭೂತಳದೊಳು ಪರಬೊಮ್ಮನೆಂಬೋ ಸೀತಾರಾಮಾವತಾರರಿಂದ ಸೌಂದರ್ಯ ನೂತನಪದ ಸೋಕಲು ನಿಜಸತಿಯಾದಳೋ 3 ಗುರುತನೂಜನ ಮಂತ್ರಶಕ್ತಿ ವೇದನೆ ತಡೆದೆ ಹರಿಯೆಂದು ಕರೆದ ಉತ್ತರೆಗೆ ಬೇಗಾ ವರಚಕ್ರವನು ಮರೆಮಾಡಿ ಪರೀಕ್ಷಿತನ ಪೊರೆಯೆ ತ್ರಿಜಗದೊಳು ಕೀರ್ತಿಯಾಹುದರಿಂದ 4 ಹರನಿಂದ ಉರಿಯ ಹಸ್ತವ ಪಡೆದು ಭಸ್ಮಾ ಸುರನು ಫಾಲಕ್ಷನ ಖತಿಗೊಳಿಸೆ ಸಿರಿವೇಲಾಪುರ ಚನ್ನಕೇಶವನಾವೇಶದಿಂ ಪರಿದಸುರನ ಕೊಂದು ಸ್ಥಿರವಾದಕಾರಣ 5
--------------
ಬೇಲೂರು ವೈಕುಂಠದಾಸರು