ಬಾರಯ್ಯ ಬಾ ಬಾ ಬುಧಜನಗೇಯಾ | ಹೇ ಗುರರಾಯಾಸಾರಿ ಬರುವ ಭಕುತರೊಡೆಯ | ಕಾಯಯ್ಯ ಜೀಯಾ ಪ
ವಾರಿಜನಾಭನ ವಾರಿಧಿಮಥನನವೈರದಿ ಭಜಿಸಿದ ಪುರಟ ಕಶ್ಯಪನ |ವರ ಉದರೋದ್ಭವ ಹರಿ ಪ್ರಿಯ ಭಕುತನೆಶರಣರ ಪೊರೆಯಲು ತ್ವರ್ಯದಿ ಬಾರೋ ಅ.ಪ.
ದಿತಿಸುತ ದೊರೆಯೇ | ಬಾಹ್ಲೀಕ ದೊರೆಯೇ |ಚತುರ ಚಂದ್ರಿಕೆ ಗುರು ಮಂತ್ರಾಲಯ ಗುರುವೇ | ದೊರೆಬಲು ಮೊರೆಯೇ |ವ್ಯಥೆಯಾಕೆನ್ನುತ | ಹಸ್ತವ ಚಾಚುತಹುತ ವಹ ನೊಳು ಬಲಾ | ಜತನಾಗಿರಿಸಿಹ ರತುನವ ಹಾರವ | ಪ್ರೀತಿಲಿ ಕೊಡುತಅತಿಶಯ ತೋರಿದ | ಯತಿ ರಾಘವೇಂದ್ರ 1
ಸುಧೀಂದ್ರರ ಕರಜ ಮಂತ್ರಾಲಯ ನಿಲಯ | ಬಲು ಮಂತ್ರಗಳೊಡೆಯಾ |ಬಧಿರ ಮೂಕರ ಅಂಧರ ಹೊರೆಯಾ | ಪರಿಹರಿಸುವ ದೊರೆಯಾ |ಮಧ್ವಾಂತರ್ಗತ ಮಧು ಕೈಟ ಭಾರಿಯಸಿದ್ಧಾಂತದ ಸವಿ ಹೃದ್ಗತ ಮಾಡಿದ |ವಿದ್ವನ್ಮಣಿಗಳ ಸದ್ವøಂದದ ಖಣಿಸದ್ವಿದ್ಯದ ಸವಿ ಮೋದದಿ ಉಣಿಸಲು 2
ಮನ್ರೋವಿನ ಮನ ತಿಳಿಯುತಲಿನ್ನೂ | ಮುನಿವರ ತಾನೂ |ಸಾನುರಾಗದಿ ತನುವ ತೋರಿದನೂ | ಘನ ಕರುಣಿಯು ತಾನೂ |ಜ್ಞಾನಿಗಮ್ಯ ಗುರುಗೋವಿಂದ ವಿಠಲನಧ್ಯಾನಿಸೆ ಪೊಗುತಲಿ ವೃಂದಾವನವ |ಆನತ ಜನ ಮನದಿಷ್ಟವ ಸಲಿಸುತಮೌನಿವರೇಣ್ಯನೆ ತುಂಗೆಯ ತೀರಗ 3