ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣನ್ನೋಡೀರೇ ಮುಖ್ಯ ಪ್ರಾಣನ್ನೋಡಿರೇ ಪ ಕ್ಷೋಣಿಯೊಳಗ ಸುಖ ಬೀರುವ ಪಾದನ ಚರಿತಾ ಸದ್ಗುಣ ಭರಿತಾ ಅ.ಪ. ನರಲೀಲೆಯಲವ - ತರಿಸದ ಅಂಜನಿ ಸುತ-ನೊ ಮಹಾದ್ಬುತನೋ ಮಲೆಯೊ ವಿಕ್ರಮ ಸ್ಥಿತಿಯೋ 1 ಸುರರಾಯುಧವನೆ ಲೆಕ್ಕಿಸ ಕಪಿ ಯಾಗ್ರಣಿಯೊ ವಜ್ರದ ಖಣಿಯೋ ಶರಣರ ವಾಂಛಿತ ಪೂರಿಪ ಮೂಲೋಕ ಗುರುವೋ ಕಲ್ಪ ತರುವೋ2 ರಾಮ ಪದಾಂಬುಜ ಕೊಂಬ ಪರಾಗ ಮಧುಪನೋ ದೇವಾಧಿ ಪನೋ ಪ್ರೇಮದಿ ರಣದಲಿ ಹರಿರಥವಾದ ಮೂರುತಿಯೋ ಪುಣ್ಯ ಮೂರುತಿಯೋ3 ತಾಮಸ ರಾವಣ ನೆದಿಗೊತ್ತದ ಕರಮೋ ಸಿಡಿಲದ ಧರಮೋ ಮ್ಯೋಮಕ ಮೀರುವ ಹನುಮನ ಬಾಲದ ಸರುಳೋ ದೈತ್ಯರ ಉರುಳೋ4 ಕ್ಷಣದಲಿ ಸಂಜೀವನ ಗಿರಿ ತಂದಿಹ ಪದವೋ ಸಾಧುರ ಮುದಮೋ ವನಜ ಭವನ ಪದವಿಯ ಪಡಕೊಂಡಾ ತಪಮೋ ತಾ ಅಪರೂಪಮೋ 5 ದುರಿತ ನಿವಾರಿಪ ಕರುಣಾ ನಿಧಿಯೋ ಭಕ್ತರ ಸುಧೆಯೋ ಅನುದಿನ ಮಹಿಪತಿ ನಂದನ ಸಲಹುವ ದಯಮೋ ಗತಿ ಆಶ್ರಯಮೋ ||6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭವೀವ ನಿರುತದಲಿ ಮಂದಹಾಸಾ ಪ ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಅ.ಪ. ಧೇನಿಪರ ಮನ ಚಿಂತಾಮಣಿಯೋ | ದೇವ | ನೀನೆ ಗತಿಯೆಂಬುವರ ಧಣಿಯೋ || ಜ್ಞಾನಮಯ ಸುಖದ ಸಂದಣಿಯೋ | ಪುಣ್ಯ | ಕಾನÀನವಾಸ ಸುರರ ಖಣಿಯೋ 1 ವಜ್ರ ಪಂಜರನೋ | ದೇವ | ದುರುಳರಿಗೆ ವೀರ ಜರ್ಝರನೋ || ದುರಿತಕದಳಿಗೆ ಕುಂಜರನೋ | ವರಕಲ್ಪ ಕಲ್ಪ ವಿಚಲನೋ 2 ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ | ಮರುತನ್ನ ಹೆಗಲೇರಿ ಬಪ್ಪಾ || ಶರಣರಿಗೆ ವರವೀಯುತಿಪ್ಪಾ | ಸಿರಿ ವಿಜಯವಿಠ್ಠಲ ತಿಮ್ಮಪ್ಪಾ 3
--------------
ವಿಜಯದಾಸ
ಸಂತ ಚರಣಕೆ ಭಾವದಿ ಮಣಿಯೋ | ಅಂತ ರಂಗದಿ ಬಹಯದುಕುಲಮಣಿಯೋ ಪ ಬಿಡದೇ ಮಾಡಲು ಅವರನುಸರಣಿಯೋ | ಕೊಡುವನು ನಾಮದಿ ಕನಿಭರಣಿಯೋ 1 ವರವರದ್ಹೇಳಲು ಬೋಧಕ ಹಣಿಯೋ | ದೊರೆವುದು ಸುಜ್ಞಾನತನದ ಖಣಿಯೋ 2 ಗುರುಮಹಿಪತಿ ಪ್ರಭು ವಶವರ್ತಣಿಯೋ | ಕರುಣಿಸಿ ಪುನರಪಿ ಭವದಲ್ಲಿ ದಣಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು