ದೇವ ಕರುಣಾಳು ನೀ ಕಾವಲಾಗಿರುವುದಕೆ
ಆವ ವೇತನ ಕೊಡುವೆ ಶ್ರೀ ವರನೆ ನಿನಗೆ ಪ.
ರೂಢ ಕೈಪಿಡಿದು ಕಾಪಾಡುತಿಹ ಬಿರುದ
ಪಾಡಿ ಪೊಗಳುತ ನಮಿಸಿ ಬೇಡಿಕೊಂಬುವೆನು ನಾ
ಮಾಡಿದಪರಾಧಗಳು ನೋಡಲದ್ಭುತವು 1
ನಡೆ ತಪ್ಪು ನುಡಿ ತಪ್ಪು ನಿಂತಲ್ಲಿ ಬಹು ತಪ್ಪು
ಖಡುಮೋಹ ಕೃತ ತಪ್ಪು ಕಾಮಕೃತ ತಪ್ಪು
ಮಾಡದಿ ಮನೆ ಮಿತ್ರ ಧನ ಒಡವೆಯಾಶೆಯು ತಪ್ಪು
ಒಡೆಯನೀ ಕ್ಷಮಿಸೆಂದು ವಂದಿಸುವೆ ನಿಂದು 2
ಯುಕ್ತಾಯುಕ್ತವನರಿಯೆ ಎನ್ನಹಂಕೃತಿ ಮರೆಯೆ
ಭಕ್ತಿ ಮುಕ್ತಿದ ಸರ್ವ ಶಕ್ತಿ ಶ್ರೀ ಹರಿಯೆ
ಭಕ್ತವತ್ಸಲ ವೆಂಕಟಾದ್ರಿ ಶೇಖರ ಸಿರಿಯೆ
ಯುಕ್ತಿಯಿಂದಲಿ ಎನ್ನ ಪಾಲಿಸುವ ದೊರೆಯೆ 3