ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸದ್ಗುರು ದಯಾ ಸಾಧ್ಯವಾಗದೇ ಜ್ಞಾನವಿಲ್ಲಾ | ಸದ್ಗತಿ ಕೀಲರಿತವನೇ ಬಲ್ಲಾ ಪ ಖಟಪಟ ವೃತದೊಳಿಲ್ಲಾ | ಘಟಮಟ ಶಬ್ದದೊಳಿಲ್ಲಾ | ಥಟ್ಟನೆ ಸಂಸಾರ ತೊರೆದರಿಲ್ಲಾ 1 ಬಹೂನಾಂ ಜನ್ಮನಾ ಜಾಯಂತೆ | ಜ್ಞಾನವಾನ್ ಮಾಂ ಪ್ರಪದ್ಯತೆ | ಶ್ರೀ ಹರಿ ಹೇಳಿದ ಗಾದಿಮಾತೆ 2 ವಸುಧಿಯೊಳೆಲ್ಲಾ ಜನಕೆ | ಹಿಂಗಾದರ ಸಾಧನ ಬೇಕು | ಋಷಿಮುನಿಗಳು ಸಾಹಸಬಡುವರ್ಯಾಕ 3 ಮನುಷ್ಯಣಾಂ ಸಹಸ್ರೇಷು | ವೆಂಬಾ ಗೀತೆಯ ನುಡಿಲೇಸು | ಜನದಲಿ ಗರ್ವಾಭಿಮಾನಿಗೆ ಬಿರುಸು 4 ಅಂಬು ತಾನು | ಎರಗುದೇ ಗುರಿಯಾ ಸ್ಥಳವನು | ಗುರುಮಹಿಪತಿ ನಂದನು ಸಾರಿದ ನಿಜನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು