ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರದಿ ನಿಲಿಸಯ್ಯ ರಂಗಯ್ಯ ದೂರದಿ ನಿಲಿಸಯ್ಯ ನಿನ್ನ ನೀರಜಪಾದವ ಈಕ್ಷಿಸುವಷ್ಟೇ ಪ ಸಾರಸಭವ ವಾಲ್ಮೀಕಿ ಪುರಂದರ ನಾರದರೆಲ್ಲ ನಿನ್ನ ಬಳಿಯೊಳೆ ಇರಲೀ ಅ.ಪ ಹನುಮ ಖಗೇಶ್ವರ ದನುಜ ವೈರಿಗಳೆಲ್ಲ ನಿತ್ಯ ಸೂರಿಗಳು ಘನ ವೇದಾಂತ ಸಂಗೀತ ಕೋವಿದರು ವನಜನಾಭನೆ ನಿನ್ನ ಸೇವಿಸುತಿರಲಿ 1 ಮಣಿದು ಮಣಿದು ನಿನ್ನ ಗುಣಗಳ ಬಣ್ಣಿಸಿ ಕುಣಿ ಕುಣಿದೆರಗುವ ಭಕ್ತರ ಬಳಿ ನಾ ತೃಣಕೆ ಸಮ ನಾನಿಣುಕಿ ಬಾಗಿ ಮಣಿವಂತೆ ಮಾಡೋ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಲತಾಂಗಿಯ ವಲ್ಲಭಾ|ಎನ್ನ| ಪಾಲಿಸೋ ಭಕ್ತರ ಸುಲಭಾ ಪ ಇಂದೀವರದಳ ನಯನಾ ಮು| ಕುಂದ ಉರಗರಾಜ ಶಯನಾ| ಮಂದರೋದ್ಧರ ಪಾಪ ಶಮನಾ|ಗೋ| ವಿಂದ ಖಗೇಶ್ವರ ಗಮನಾ 1 ಶರಣ ಜನರಾಭರಣಾ|ಮುರ| ಹರ ಜಗದೀಶನೇ ಕರುಣಾ| ಪರಮಾನಂದ ಜೀತ-ದೂಷಣಾ|ಮ| ಕರಕುಂಡಲ ಸುಭೂಷಣಾ 2 ಸರಸಿಜ ಭವನುತ ಸ್ವಾಮಿನ್ನಾ|ಶ್ರೀ| ಹರಿ ಪೂರಿತ ಮನೋಕಾಮನ| ಶರಧಿ ಕೀಲನಾ|ಗುರು| ವರ ಮಹಿಪತಿ ಸುತ ಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು