ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದನ ಕಂದ ಬಂದ ಗೋವಿಂದ ಇಂದಿರಾನಂದ ರಾಧೆ ಮುಕುಂದ ಪ ವೃಂದಿತ ಬೃಂದಾರಕ ಖಗವೃಂದ ಸುಂದರ ಮುರಳೀ ನಾದಾನಂದ ಅ.ಪ ಘಣಿಮಣಿ ಭೂಷಣ ಮುನಿತೋಷಣ ಗಣಿಕಾಗಣ ಮನಮೋಹನ ತರುಣ ಝಣ ಝಂಝಣರವ ಕಿಣಿಕಿಣಿಚರಣ ಕುಣಿ ಕುಣಿವನು ಮಾಂಗಿರಿರಂಗ ಕರುಣ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಲ್ಲಿ ನೋಡಿದರಲ್ಲಿ ಚನ್ನಕೇಶವನು ಪುಲ್ಲಲೋಚನನಾದ ಶ್ರೀ ಕೃಷ್ಣನು ಪ ಭೂತಳ ಪಾತಾಳ ಸಕಲ ಲೋಕಗಳಲ್ಲಿ ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ ಮಾತು ಚೇಷ್ಟಗಳಲ್ಲಿ ಕೆರೆ ಭಾವಿ ವನದಲ್ಲಿ ಕೋತಿ ಖಗವೃಂದ ಪಶುವರ್ಗಂಗಳಲ್ಲಿ 1 ವೇದ ಶಾಸ್ತ್ರಗಳಲ್ಲಿ ಸರ್ವ ಧರ್ಮಗಳಲ್ಲಿ ಬೋಧಕ ಮೊದಲಾದ ಗುರು ವರ್ಗದಲ್ಲಿ ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ ವಾದ್ಯ ಮೃದಂಗಾಗಿ ನಾದಂಗಳಲ್ಲಿ 2 ಕಣ್ಣುಗಳಿಗೆಸೆಯುವ ಸಕಲ ವಸ್ತುಗಳಲ್ಲಿ ಮಣ್ಣಿನಲಿ ಸರ್ವತ್ರ ಘನ ಸೃಷ್ಟಿಯಲ್ಲಿ ಬಣ್ಣಿಸಲ್ಕಾಗದ ಹರಿ ಕೀರ್ತನೆಗಳಲ್ಲಿ ಹೆಣ್ಣು ಹೊನ್ನು ಮಣ್ಣು ತ್ರಿವರ್ಗದಲ್ಲಿ 3 ಸಕಲ ಚರ ಪ್ರಾಣಿಯಲಿ ಅಚರ ಜೀವಗಳಲ್ಲಿ ಸಕಲ ಸ್ತ್ರೀ ಪುರುಷರಲಿ ಸುರದನುಜರಲ್ಲಿ ಸಕಲ ಧಾನ್ಯಗಳಲಿ ತಿಂಡಿ ತಿನಸುಗಳಲ್ಲಿ ಸುಖ ದುಃಖ ಬಹಿರಂಗ ಅಂತರಂಗದಲಿ 4 ದಿನದಲ್ಲಿ ನಿಶೆಯಲ್ಲಿ ಅನ್ನಪಾನಗಳಲ್ಲಿ ಅಣುರೇಣು ತೃಣಕಾಷ್ಟ ಸರ್ವ ದಿಕ್ಕಿನಲೀ ಕನಸಿನಲಿ ಮನಸಿನಲಿ ಪಂಚ ಭೂತಗಳಲ್ಲಿ ಜನನ ಮರಣಾತೀತ ಚನ್ನಕೇಶವನು 5
--------------
ಕರ್ಕಿ ಕೇಶವದಾಸ
ಮಲಗಯ್ಯ ಕೇಶವಾಮಲಗಯ್ಯ ಮಾಧವಾ ಮಲಗಯ್ಯ ಚನ್ನಕೇಶವ ರಂಗರಾಯಾ ಪ ಶ್ರೀಲೋಲ ಮಲಗಯ್ಯ ಪಾಡಿ ತೂಗುವೆನಯ್ಯ ಬಾಲನ ಸಲಹಯ್ಯ ಕೂಡಿ ಪರಮ್ಮಾತ್ಮಾ ಅ.ಪ. ಜಗವೆಲ್ಲ ಕತ್ತಲೆಯಿಂದ ಮಸುಕಿಹುದಯ್ಯ ಖಗವೃಂದ ಪಶುವರ್ಗವೆಲ್ಲ ನಿದ್ರಿಪುದೂ ಜಗವೆಲ್ಲ ನಿಃಶಬ್ದವಾಗಿದೆ ಶ್ರೀಹರಿ ಗಗನದಿ ಗೂಗೆಯು ತೂಗುತಿದಯ್ಯ 1 ಜನರೆಲ್ಲ ಹರಿ ನಿಂನ ಸೇವೆ ಮಾಳ್ದುದ ಬಿಟ್ಟು ಘನನಿದ್ರಾಂಗನೆಯನ್ನು ಅಪ್ಪಿ ಕೊಳ್ಳುವರೊ ಪ್ರಣವ ಸ್ವರೂಪನೇ ಮಲಗು ನೀ ಬೇಗದಿ ತನುವೆಂಬ ತೊಟ್ಟಿಲದಿ ತೂಗುವೆನಯ್ಯಾ 2 ಪನ್ನಗಶಯನನೆ ಆದ್ಯಾಂತರಹಿತನೇ ಮನ್ನಿಸಿ ಭಕ್ತರ ಪೊರೆವ ಮಾದವನೇ ಬಿನ್ನರೂಪವ ತಾಳಿ ಕಾಯವು ದಣಿದಿದೆ ಇನ್ನು ನಿದ್ರೆಗೆ ಪೋಗು ತೂಗುವೆನಯ್ಯ 3
--------------
ಕರ್ಕಿ ಕೇಶವದಾಸ