ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದೆನ್ನ ಮನಮಂದಿರದಲಿ ನಿಲ್ಲೊ | ಹೇ ಶ್ರೀನಿವಾಸ ಬಂದೆನ್ನ ಮನಮಂದಿರದಲಿ ನಿಲ್ಲೊ ಪ. ಇಂದಿರೇಶ ವೈಕುಂಠದಿಂದ ನೀ ಬಂದು ಈಗ ಎನ್ನ ಹೃದಯ ಕಮಲದಿ ಅ.ಪ. ಜಗದಂತರಾತ್ಮ ನಿರ್ಮಲಾತ್ಮ | ನಿರ್ಗತ ದುರಿತಾತ್ಮ ನಿಗಮಾದಿಗಳೊಂದ್ಯ ನೀ ನಿತ್ಯಾತ್ಮ | ಜೀವಂತರಾತ್ಮ ಸುಗುಣವಂತ ನಿನ್ನ ಬಗೆ ಬಗೆ ಮಹಿಮೆಯ ಪೊಗಳಬಲ್ಲೆನೆ ನಾ ಖಗವಾಹನನೆ 1 ಅರಿಯೇನೋ ಅನ್ಯರ ಹರಿ ಸರ್ವೇಶ | ಹೃತ್ಕಮಲದಿ ವಾಸ ಪರಿಹಾರಗೈಸೊ ಈ ಭವಕ್ಲೇಶ | ನಂಬಿದೆ ಸರ್ವೇಶ ಅರಘಳಿಗೆ ನಿನ್ನಗಲಿರಲಾರೆನೊ ಸಿರಿಸಹಿತದಿ ನಿನ್ನರಮನೆಯಿಂದಲಿ 2 ಇಂದು | ನೀ ರಕ್ಷಕನೆಂದು ಕರಕರೆಗೊಳಿಪುದು ಧರ್ಮವೆ ನಿಂದು | ನೀ ಕಾಯಲಿಬೇಕಿಂದು ಸರಿಯಲ್ಲವು ಈ ತೆರದಲಿ ತೊರೆವುದು ಶರಣ ರಕ್ಷಕನೆಂಬೊ ಬಿರುದು ಪೊತ್ತಿಲ್ಲವೆ 3 ಎಂತೆಂತು ಸಹಿಸಲಿ ಈ ಭವಕ್ಲೇಶ | ಜೀವಾಂತರವಾಸ ಕಂತುಪಿತ ಎಣಿಪರೆÀ ಎನ್ನಯ ದೋಷ | ಸರಿಯಲ್ಲ ಸುರೇಶ ಇಂತು ನಿನಗೆ ಒಪ್ಪಿಸಿದರೊ ಗುರುಗಳು ಚಿಂತಿತಾರ್ಥ ನಿನಗೆನ್ನ ತರ ತಿಳಿಯದೆ 4 ಬೆಟ್ಟದ ಒಡೆಯ ಬೇಗನೆ ಬಾರೊ | ಹೃತ್ಕಮಲದಿ ತೋರೊ ಶ್ರೇಷ್ಠ ಶ್ರೀ ಗುರುಗಳ ಕರುಣವ ಬೀರೊ | ಸಲಹುವರಿನ್ಯಾರೊ ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಪದಂಗಳ ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಮಂಗಳಂ ಜಯ ಮಂಗಳಂ ಪ ಆದಿನಾರಾಯಣನೆನಿಸಿದಗೆ ಪಾದದಿ ಗಂಗೆಯ ಪಡೆದವಗೆ ಸಾಧುಸಜ್ಜನರನ್ನು ಸಲುಹುವ ದೇವಗೆ ವಿ ನೋದ ಮೂರುತಿಯಾದ ವೆಂಕಟಗೆ 1 ಶಂಖ ಚಕ್ರಧರಿಸಿಪ್ಪವU ಪಂಕಜ ಹಸ್ತವ ತೋರ್ಪವಗೆ ಬಿಂಕದೊಳಸುರರ ಕೆಡಹಿದ ಧೀರಗೆ ಮೀ ನಾಂಕನ ಪಿತನಾದ ವೆಂಕಟಗೆ 2 ಪೀತಾಂಬರಧರನೆನಿಸಿದಗೆ ನೂತನ ನಾಮದಿ ಮೆರೆವವಗೆ ಪಾತಕನಾಶನ ಪರಮಪಾವನಗೆ ಅ ತೀತ ಮಹಿಮನಾದ ವೆಂಕಟಗೆ 3 ಖಗವಾಹನನೆಂದೆನಿಸಿದಗೆ ನಗಧರನಾಗಿಹ ಅಘಹರಗೆ ಮೃಗಧರರೂಪಗೆ ಮುಂಚಕಲಾಪಗೆ ಜಗದಾಧಾರಕ ವೆಂಕಟಗೆ 4 ಲೋಕನಾಯಕನಾದ ಕೇಶವಗೆ ಶೋಕಭಂಜನನಾದ ಮಾಧವಗೆ ಸಾಕಾರ ರೂಪಗೆ ಸರ್ವಾತ್ಮಕನಿಗೆ ಶ್ರೀಕರನೆನಿಸುವ ವೆಂಕಟಗೆ 5 ಆಲದ ಎಲೆಯೊಳ್ವೊರಗಿದಗೆ ಆ ಕಾಲದಿ ಅಜನನು ಪೆತ್ತವಗೆ ನಿಗಮ ವಿದೂರಗೆ ಕಾಲಕಾಲಾಂತಕ ವೆಂಕಟಗೆ 6 ಸ್ವಾಮಿ ಪುಷ್ಕರಣಿಯ ವಾಸನಿಗೆ ಭೂಮಿ ವರಾಹತಿಮ್ಮಪ್ಪನಿಗೆ ಪ್ರೇಮದಿ ಜಗವನು ಸಲುಹುವ ನಾಮದ ಸೋಮ ಸನ್ನಿಭನಾದ ವೆಂಕಟಗೆ 7
--------------
ವರಹತಿಮ್ಮಪ್ಪ
ಯಾದವ ನೀ ಬಾ ಯದುಕುಲನಂದನಮಾಧವಮಧುಸೂದನ ಬಾರೋಪಸೋದರ ಮಾವನ ಮಥುರಿಲಿ ಮಡುಹಿದ ಯಶೋದೆಯ ನಂದನ ನೀ ಬಾರೋ ಅ.ಪಕಣಕಾಲಂದುಗೆ ಗಣಗಣಕೆನುತಲಿತನನನವೇಣುನಾದದಲಿ ||ಚಿಣಿಕೋಲು ಚಂಡು ಬುಗುರಿಯನಾಡುತಸಣ್ಣ ಸಣ್ಣ ಗೋವಳರೊಡಗೂಡಿ 1ಶಂಖ ಚಕ್ರವು ತೋಳಲಿ ಹೊಳೆಯುತಬಿಂಕದ ಗೋವಳ ನೀ ಬಾರೋ ಅಕ- ||ಳಂಕ ಮಹಿಮನೆ ಆದಿನಾರಾಯಣಬೇಕೆಂಬ ಭಕ್ತರಿಗೊಲಿಬಾರೋ 2ಖಗವಾಹನನೆ ಬಗೆ ಬಗೆ ರೂಪನೆ |ನಗೆ ಮೊಗದರಸನೆ ನೀ ಬಾರೋ ||ಜಗದೊಳು ನಿನ್ನಯ ಮಹಿಮೆಯ ಪೊಗಳುವೆ |ಪುರಂದರವಿಠಲ ನೀ ಬಾರೋ3
--------------
ಪುರಂದರದಾಸರು