ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗಾಯಿತು ಏಳಿ ಪಾದ ನಳಿನ ಸೇವಕರು ಪ ಉದಯ ಕಾಲದೊಳೆದ್ದು ಹೃದಯ ನಿರ್ಮಲರಾಗಿ ಮಧುಸೂದನನ ಪಾಡಿ ಸ್ತುತಿಸುತಲಿ ಮುದದಿಂದ ಮಾಧವನ ವಿಧವಿಧದಿ ಪೂಜಿಸಿ ಪದುಮನಾಭನ ಪಾಡಿ ಪೊಗಳುವ ಜನರು 1 ರಂಗನ ಮಹಾದ್ವಾರದ ಮುಂದೆ ಕಾಣುವ ಗಜ ಸಾಲುಗಳ ನೋಡುತ ಬಂಗಾರ ಕೋಡುಳ್ಳ ಗೋವ್ಗಳಿಗೆರಗುತ್ತ ಅಂಗಜ ಜನಕನ ಪಾಡಿ ಪೊಗಳುವರು2 ರಂಭೆ ಊರ್ವಶಿ ಮೇನಕೆಯರೆಲ್ಲರು ಕೂಡಿ ಸಂಭ್ರಮದಲಿ ನಾಟ್ಯವಾಡುತಿರೆ ಗಂಗೆ ಗೋದಾವರಿ ಕೃಷ್ಣ ತುಂಗಭದ್ರೆ ಯಮುನೆಯರು ಇಂಬಿಲ್ಲದೆ ಪಾಡುತಿಹರೊ ಶ್ರೀ ಹರಿಯ 3 ಅತ್ರಿ ವಸಿಷ್ಠ ಗೌತಮ ಭಾರದ್ವಾಜರು ಅರ್ಥಿಯಲ್ಲಿ ಜಮದಗ್ನಿ ಋಷಿಗಳೆಲ್ಲ ಸ್ತೋತ್ರಮಾಡುತ ಪುರುಷೋತ್ತಮನನು ಪಾಡಿ ವಿಶ್ವಾಮಿತ್ರರು ಬಹು ಭಕ್ತಿಯಲಿ 4 ಸುತ್ತ ಸನಕಾದಿ ನಾರದರೆಲ್ಲ ಪಾಡಲು ನೃತ್ಯಗಾಯನದಿಂದ ಶ್ರೀ ಕೃಷ್ಣನ ಅರ್ತಿಯಿಂದ ಅಜಭವ ಸುರರೆಲ್ಲ ಸ್ತುತಿಸಲು ಸ್ತೋತ್ರಮಾಡಲು ದುರ್ಗದೇವಿಯರು5 ಗಜರಾಜ ಗೋಮಾತೆ ಮೊದಲಾದವರು ಬಂದು ಮಧುಸೂದನನ ನೋಡೆ ನಿಂತಿಹರು ಮದಗಜಗÀಮನೇರು ಮುದದಿ ಕಲಶ ಕನ್ನಡಿಗಳ ಪಿಡಿದು ನಿಂತಿಹರು ಬೇಗದಲಿ 6 ಮುತ್ತಿನ ಕದಗಳು ತೆಗೆವ ವ್ಯಾಳ್ಯದಲಿ ನೌಬತ್ತು ನಗಾರಿ ವಾದ್ಯಗಳಾಗಲು ಸಪರ್Àನ್ಹಾಸಿಕೆಯಲ್ಲಿ ಮಲಗಿರುವ ದೇವನ ಅರ್ಥಿವೈಭವ ನೋಡೊ ವೇಳೆ ಮೀರುವದು7 ಗಂಗಾಜನಕನ ಚರಣಂಗಳು ನೋಡುವ ಬಂಗಾರ ಕಿರುಗಂಟೆಗಳ ನಡುವನು ನೋಡುವ ರಂಗು ಕೇಸರಿಯ ಪೀತಾಂಬರ ನೋಡುವ ಶೃಂಗಾರ ವೈಜಯಂತಿಯ ನೋಡುವ 8 ವಕ್ಷ ಸ್ಥಳದಲ್ಲಿ ಶ್ರೀ ಲಕ್ಷ್ಮಿಯ ನೋಡುವ ಹಸ್ತದ ಆಭರಣಂಗಳ ನೋಡುವ ಮುತ್ತಿನ ಭುಜ ಕೀರ್ತಿ ರತ್ನದ್ಹಾರಗಳಿಂದ ಒಪ್ಪುವ ಉರದಿ ಶ್ರೀವತ್ಸನ ಸ್ತುತಿಸೆ 9 ಕೋಟಿ ಸೂರ್ಯರ ಕಾಂತಿ ಸೋಲಿಪ ನಗುಮುಖ ಲಲಾಟದಿ ಕಸ್ತುರಿ ತಿಲಕ ಒಪ್ಪಿರಲು ಮಾಟದ ಕರ್ಣಕುಂಡಲಗಳು ಹೊಳೆಯುತ್ತ ನೋಟದಿ ಜಗವ ಮೋಹಿಪ ದೇವನನು ನೋಡೆ10 ಅಂದದ ಮುಗುಳು ನಗೆಯು ದಂತ ಪಂಙÉ್ತಯು ಪಾದ ಕದಪುಗಳಂದವು ಇಂದ್ರ ನೀಲದಮಣಿ ಖಚಿತ ಕಿರೀಟದ ಮಂದಹಾಸದ ನಗೆÀಮುಖ ನೋಡುವ 11 ಕಡೆಗಣ್ಣ ನೋಟದಿ ಜಗವ ಸೃಷ್ಟಿಪದೇವ ಖಗವಾಹನನು ಸಂರಕ್ಷಿಪ ಲೋಕವ ಅಗಣಿತ ಮಹಿಮ ಅತಿಶಯದಿ ಲಯವ ಮಾಳ್ಪ ಸುಗುಣ ಸುಂದರನ ಗುಣ ಪೊಗಳುವ ಜನರು12 ನಿಖಿಳ ವ್ಯಾಪಕ ಕೃಷ್ಣ ಶುಕಮುನಿ ವಂದಿತ ದಿವ್ಯ ಚರಣನ ರುಕುಮಿಣಿ ಅರಸನ ಭಕುತರ ಪೋಷನ ಸಖ್ಯದಿಂದ ಪ್ರಿಯನ ನೋಡುವ ಸುಜನರು13 ಅನಿರುದ್ಧ ದೇವ ಶ್ರೀ ಪ್ರದ್ಯುಮ್ನ ಮೂರ್ತಿಯ ಸಂಕರುಷಣ ವಾಸುದೇವೇಶನ ನವನೀತ ಚೋರನ ನಾರಾಯಣನ ನಾಮ ಸ್ಮರಿಸುವ ಸುಜನರು 14 ಕವಿಜನ ಪ್ರಿಯನ ಕಮನೀಯ ರೂಪನ ಕಮಲನಾಭವಿಠ್ಠಲನ ಪಾಡುವ ಕಮಲಸಖನ ಸೋಲಿಸುವ ಮುಖಕಾಂತಿಯಕಮಲಾಕ್ಷಿಯರಸನ ಪೊಗಳುವ ಸುಜನರು15
--------------
ನಿಡಗುರುಕಿ ಜೀವೂಬಾಯಿ
ರಂಗ ಬಾರ ಬಾಲೆ ಕುರಂಗನಯನೆ ಕೇಳೆ ಪ ಹೀಂಗಿರಲಾರೆ ಶ್ರೀಹರಿಯ ಸಂಗ ಬಿಟ್ಟಮೇಲೆಈ ತಂಗಾಳಿಯ ದಾಳೆ ಬೆಳದಿಂಗಳಿÀನ ಢಾಳೆಗಿಳಿ ಭೃಂಗನ ಸ್ವರಗಳೆ ದೇವಾಂಗನಾ ಗಾಯನಗಳೆಅನಂಗಗಿದು ಪೇಳೆಅ.ಪ. ಪರ ಹೆಣ್ಣುಗಳನೆ ಕೂಡಿಬಲು ಬಣ್ಣಗೆಟ್ಟೋಡ್ಯಾಡಿ ಕಲಿಯನ್ನು ಸಂಹಾರಮಾಡಿ 1 ಯುಗಳಸ್ತನಗಳ ಮೇಲೆ ಒಳ್ಳೆ ಮುಗುಳು ಮಲ್ಲಿಗೆ ಮಾಲೆಬಗೆ ಬಗೆ ಅಲಂಕಾರದಿ ಸೊಗಸಿಲಿದ್ದ ವೇಳೆಖಗವಾಹನನು ಬಂದ ಎನ್ನ ಬಿಗಿದಪ್ಪುವೆನೆಂದನಗುತ ಮಾತನಾಡಳಿವಳು ಸುಗುಣೆಯಲ್ಲವೆಂದನಿಗಮ ಚೋರನ ಕೊಂದ ನಗವ ಬೆನ್ನಿಲಿ ತಂದಜಗವ ನೆಗಹುವೆನೆಂದ ಜಿಗಿದು ಕಂಭದಿ ಬಂದಮಗುವಿನಂದದಿ ನಿಂದ ಯಾತ್ರೆಗಳ ಮಾಡುವೆನೆಂದಅನ್ನಗಳ ಒಲ್ಲೆನೆಂದ ಬೆಣ್ಣೆಗಳ ಕದ್ದುತಿಂದನಗುತ ಬತ್ತಲೆನಿಂದ ತಾ ಸಿಗದೆ ಓಡುವೆನೆಂದ 2 ನಾರಿ ಈಗ ನಾನು ಮುರಾರಿಯ ಕಂಡೆನುವಾರಿಜಾಕ್ಷ ಬಾಯೆನ್ನಲು ಶಿರವ ಬಾಗಿದೆನೆಮಾರನಯ್ಯನು ಜಾಣೆ ಎನ್ನ ಮೋರೆಯ ನೋಡಿದನೆಜಾರನಾರಿ ಇವಳೆಂದು ಸೇರದೆ ಪೋದನೆನೀರೊಳಡಗಿದನೆ ಮೋರೆ ಮುಚ್ಚಿದನೆಕೋರೆ ತೋರಿದನೆ ಆ ಘೋರ ರೂಪಾದನೆಬ್ರಹ್ಮ-ಚಾರಿಯೆಂತೆಂದನೆ ಕ್ಷತ್ರಿಯರ ಸವರಿದನೆವಾರಿಧಿಯ ದಾಟಿದನೆ ಬಹುಜಾರನೆನಿಸಿದನೆನಾರೇರ ವ್ರತವಳಿದನೆ ಕುದುರೆ ಏರಿದ ಶ್ರೀಕೃಷ್ಣನೆ 3
--------------
ವ್ಯಾಸರಾಯರು