ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಖಗವರಧ್ವಜ ವಿಠಲ ಪೊರೆಯ ಬೇಕಿವನ ಪ ಭಾಗವತ ಸುಶ್ಲೋಕ್ಯ ಬಗೆಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯತಾನೆಂಬ ಉ | ತ್ಕøಷ್ಟಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವದಾಸ್ಯವನು | ಅರ್ಥಿಸುವ ಹರಿಯೇ 1 ಪೋರನಾ ಮಯಕಳೆದು | ತಾರತಮ್ಯ ಜ್ಞಾನ ಮೂರೆರಡು ಭೇದಗಳ | ಸಾರವನೆ ಅರುಹೀಕಾರಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ 2 ಅನೇಕ ಜನ್ಮದಲಿ | ಹೀನಯೋನಿಲಿ ನೊಂದುಜ್ಞಾನ ಸಾಧನ ವಿರದೆ | ದೀನ ನಾದವಗೇಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ 3 ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನ_ನೇಕ ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ 4 ಪದ್ಮನಾಭನೇ ಹೃ | ತ್ಪದ್ಮದಲಿ ತವರೂಪಸಿದ್ಧಿಸುತ ಸಂಚಿತವ | ಪ್ರಧ್ವಂಸ ಗೈದೂಅದ್ವೈತ ತ್ರಯದರಿವು | ಬುದ್ದಿಗೆ ನಿಲುಕಿಸೆನೆಹೃದ್ಯ ಗುರು ಗೋವಿಂದ ವಿಠಲ ಬಿನ್ನವಿಪೇ 5
--------------
ಗುರುಗೋವಿಂದವಿಠಲರು
ಜ್ಞಾನಪ್ರದ ನರಸಿಂಹ ವಿಠಲ ನೀ ಸಲಹೊ ಪ ಧೇನು ವತ್ಸದ ಧ್ವನಿಗೆ ತಾನೇವೆ ಬರುವಂತೆ ಅ.ಪ. ಕರ್ಮ ಪೂರ್ವಾರ್ಜಿತವ ನಿರ್ಮಲವ ಗೊಳಿಸುತ್ತಭರ್ಮ ಗರ್ಭನ ಜನಕ ಪೇರ್ಮೆಯಲಿ ಇವನಧರ್ಮ ಮಾರ್ಗದಿ ನಡೆಸು ಸುಜ್ಞಾನ ಮತಿಯಿತ್ತುಕರ್ಮನಾಮಕ ಹರಿಯೆ ಶರಣಜನ ಧೊರೆಯೆ 1 ಹರಿಯು ಸರ್ವೋತ್ತಮನು ಶಿರಿಯು ಆತನರಾಣಿಗುರು ವಾಯು ಸುರರೆಲ್ಲ ಹರಿಭೃತ್ಯರೆಂಬವರಮತಿಯನಿತ್ತವಗೆ ಸಂಸ್ಕøತಿಯ ಕ್ಲೇಶಗಳಪರಿಹರಿಸಿ ಪಾಲಿಪುದು ಪರಮ ಕರುಣಿಕಾ 2 ಪತಿ ಇರುವೆ ಮೂಕ ಪುರುಷರ ನೀನು ವಾಕ್ಪತಿಯ ಮಾಳ್ಪೆನಾಕೇಳ್ಪುದರಿದೇನೊ ಪಂಚ ಮುಖ ಭವವಂದ್ಯತೋಕನಿವ ಶರಣಗಿಹ ವ್ಯಾಕುಲವ ಕಳೆಯೋ 3 ಮಗುವಿನೊಚನವ ಕೇಳಿ ಜಿಗಿವೆ ಕಂಬದಲಿಂದನಗೆ ಮೊಗನೆ ತರಳೆಯಾ ಹಗರಣವ ಕಳೆದೇಖಗವರಧ್ವಜ ನಿನ್ನ ಬಗೆಬಗೆಯ ಲೀಲೆಗಳಮಿಗಿಲಾಗಿ ತೋರಿವಗೆ ನಗಧರನೆ ಹರಿಯೇ 4 ನಿತ್ಯತವ ಸ್ಮøತಿಯಿತ್ತು ಭೃತ್ಯನತಿ ಕಷ್ಟಗಳಕಿತ್ತೊಗೆದು ಮಧ್ವಮತ ತತ್ವ ತಿಳಿಸುತ್ತಾಗುಪ್ತ ಮಹಿಮನೆ ಗುರುಗೋವಿಂದ ವಿಠ್ಠಲನೆಭಕ್ತನುದ್ಧರಿಸೆಂದು ಪ್ರಾರ್ಥಿಸುವೆ ನಿನ್ನಾ 5
--------------
ಗುರುಗೋವಿಂದವಿಠಲರು
ಪನ್ನಗ ನಗಾಧೀಶ ಅಗಣಿತ ಗುಣಾನಂದ ಚಿದ್ಘನ ಪರೇಶ ಪ. ಜಗದ ಜೀವರಿಗೆ ಬಗೆ ಬಗೆ ವೇಷವ ತೊಡಿಸಿ ಸೊಗಸಿನಿಂದಲಿ ನೋಡಿ ನಗುತಲಿಹೆಯೊ ತ್ರಿಗುಣಮಾನಿನಿಯೊಡನೆ ಹಗಲಿರುಳು ಕ್ರೀಡಿಸುತ ಮಿಗೆ ಹರುಷದಿಂದಿರುವ ಖಗವರಧ್ವಜ ಹರಿಯೆ 1 ನಾನಾವತಾರದಲಿ ನಂಬಿದ ಸುರಾದಿಗಳಿ- ಗಾನವಾರಿಧಿಯ ಸ್ನಾನ ಮಾಡಿಸುವಿ ದೀನತ್ವದಲಿ ನಿನ್ನ ಧ್ಯಾನವೇ ಗತಿಯೆಂದು ನಾನಿದಿರು ಬಂದೆರಗೆ ಮಾನಿಸದೆ ಮರುಳಾಗಿ 2 ಅಂತರಾತ್ಮಕನಾಗಿ ಚಿಂತನಾದಿಗಳ ಬಲ ವಂತದಲಿ ನೀನೆ ಮಾಡಿಸಿದ ಮೇಲೆನ್ನ ಇಂತು ಬಳಲಿಸುವ ದುರಂತ ಮಹಿಮನೆ ನಿನಗೆ ಕಂತು ಬ್ರಹ್ಮರ ಜನಕ 3 ನಾನು ನನ್ನದು ಎಂಬ ಮಾನವಿತ್ತದರಿಂದ ಈ ನಳಿನಜಾಂಡವದೊಳು ನಾನು ಸಿಲುಕಿಹೆನು ಮಾನಾಭಿಮಾನಿಗಳ ನೀನೀವುದರಿಂದ ದೀನತನ ಕಳದು ಸನ್ಮಾನ ಪಾಲಿಸು ದೇವ 4 ತಂದೆತಾಯಿಗಳು ನಿಜ ಬಂಧುಬಳಗಗಳೆಲ್ಲ ಒಂದೊಂದು ಜನ್ಮದಲಿ ಬ್ಯಾರೆಬ್ಯಾರಹರು ಎಂದೆಂದಿಗೂ ನೀನೆ ತಂದೆ ನಿನ್ನರಸಿ ತಾ- ಯ್ಯೆಂದು ತಿಳಿಹೆನು ಮುಚಕುಂದ ರಕ್ಷಕ ಸ್ವಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಸುಮತೀಶ ವಿಠ್ಠಲನೇ ನೀನಿವಗೆ | ಎಸೆವ ಜ್ಞಾನವನಿತ್ತುಹಸನಾಗಿ ಕಾಪಾಡಬೇಕೊ ಹರಿಯೆ ಪ ಕುಸುಮ ಸಂಭವ ಪಿತನೆ | ವಾಸುದೇವನೆ ಕೃಷ್ಣನಸು ನಗೆಯಲೀ ನಿನ್ನ ಉಪಾಸನವ ಕೊಡೊ ಹರಿಯೆ ಅ.ಪ. ತರತಮವು ಪಂಚಭೇದದ ಜ್ಞಾನ | ನಿರತಿಶಯ ಹರಿಭಕ್ತಿಗುರುಭಕ್ತಿಗಳ ಕರುಣಿಸೀ ಕಾಪಾಡಬೇಕೊ ಹರಿಯೇ |ವರ ಪ್ರದಾಯಕ ಸ್ವಾಮಿ ವೈರಾಗ್ಯ ಭಾಗ್ಯಗಳ ನೀನಿವರಿಗಿತ್ತುಕರುಣದಿಂ ಕಾಪಾಡಬೇಕೊ ಹರಿಯೇ 1 ನಿನ್ನ ಮೊರೆ ಹೊಕ್ಕವನ | ಇನ್ನು ಕೈ ಪಿಡಿಯುವುದುನಿನ್ನ ಧರ್ಮವಲ್ಲವೆ ಸ್ವಾಮಿ ರಾಮಚಂದ್ರ |ನನ್ನೆಯಿಂದಲಿ ಇವನ ಪಾಪಗಳ ಪರಿಹರಿಸಿನಿನ್ನ ಪದ ಸೇವಕನ ಮಾಡೊ ವೈಕುಂಠ ಪತಿಯೇ 2 ಖಗವರಧ್ವಜ ದೇವ ಜಗಜ್ಜನ್ಮಾದಿ ಕಾರಣನೆಬಗೆಬಗೆಯ ಮಹಿಮೆಗಳ ತೋರಿ ಕಾಪಾಡೊ ಹರಿಯೇ |ಸುಗುಣ ಮೂರುತಿ ದೇವ ತ್ರಿಗುಣ ವರ್ಜಿತ ಸ್ವಾಮಿಹಗರಣಗಳೀಯದಲೆ ಕಾಪಾಡೊ ಹರಿಯೇ 3 ಇಷ್ಟಮೂರುತಿ ದೇವ ಸೃಷ್ಟ್ಯಾದಿ ಕಾರ್ಯಗಳದೃಷ್ಟಿಯಿಂದಲಿ ಮಾಳ್ಪ ಮಹಮಹಿಮ ಹರಿಯೇ |ಕೃಷ್ಣಮೂರುತಿ ಹೃದಯ ಅಷ್ಟದಳ ಮಧ್ಯದಲಿದೃಷ್ಟಿಗೋಚರನಾಗಿ ಕಾಪಾಡೊ ಹರಿಯೇ 4 ಮೂರ್ತಿ ಹಯ ಮೊಗಾತ್ಮಕನೇ |ವೇದಾಣಿ ವಂದ್ಯ ಗುರುಗೋವಿಂದ ವಿಠ್ಠಲನೇನೀ ದಯದಿ ಕೈ ಪಿಡಿದು ಕಾಪಾಡೊ ಹರಿಯೇ 5
--------------
ಗುರುಗೋವಿಂದವಿಠಲರು
ಹನುಮೇಶ ವಿಠ್ಠಲನೆ ಸಲಹ ಬೇಕಿವಳಾಗುಣಪೂರ್ಣ ನಿರ್ದೋಷ ಚಿದ್ಭವನೆ ಹರಿಯೇ ಪ ನಾಗಕಾಳೀಯ ಮದ ಭಂಜನನೆ ಶಿರಿಕೃಷ್ಣನೀಗಿ ಹೃದ್ರೋಗವನು ಆಗು ಹೋಗುಗಳಾ |ನಾಗಶಯನನೆ ನೀನೆ ಮಾಳ್ಪುದನೆ ತಿಳಿಸುತ್ತಾಭೋಗ ವಿಹ ಪರಧ್ವಂಸ ಭೋಗ ತಿಳಿಸುವುದೋ1 ಮಧ್ವ ಶಾಸ್ತ್ರಜ್ಞಾನ ಉದ್ಭೋಧ ಕೊಟ್ಟಿವಳಶುದ್ಧ ತರತಮ ಭೇದ ಪಂಚಕವ ತಿಳಿಸಿ |ಅದ್ವಿತೀಯನೆ ಭಾವ ದ್ರವ್ಯ ಕ್ರಿಯಗಳು ಎಂಬಅದ್ವೈತ ತ್ರಯಜ್ಞಾನವಿತ್ತು ಪಾಲಿಪುದು 2 ಖಗವರಧ್ವಜದೇವ ಗೋವಿಂದ ಮೂರುತಿಯೆಬಗೆಬಗೆಯ ತವಲೀಲೆ ಮಿಗಿಲು ಸ್ಮøತಿಯಿತ್ತು |ಹಗರಣದ ಸಂಸಾರ ಸಾಗರವ ದಾಟಿಸುತನಿಗಮ ವೇದ್ಯನೆ ತೋರೊ ಹೃದ್ಗುಹದಿ ಹರಿಯೇ 3 ಪತಿಸೇವೆಯಿತ್ತಿವಳ ಕೃತಕಾರ್ಯಳೆಂದೆನಿಸೊಪಿತೃ ಮಾತೃ ಬಂಧುಗಳು ಹಿತ ಜನಾಂತಸ್ಥಕೃತಿ ಪತಿಯೆ ನಿನವ್ಯಾಪ್ತಿ ಮತಿಯಿತ್ತು ಪಾಲಿಸುತಹಿತದಿ ಸಾಧನಗೈಸೊ ವಾತಾತ್ಮ ಹರಿಯೇ 4 ನಿರುತ ತವ ದಾಸತ್ವ ಅರ್ಥಿಯಲಿ ಇರುವಂಥತರಳೆಯನು ಸ್ವೀಕರಿಸಿ ದಾಸಳೆಂದೆನಿಸೊಶರಣ ಜನ ವತ್ಸಲನೆ ಕರುಣಿ ಭಿನ್ನಪ ಸಲಿಸೊಮರುತಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು