ನಾರಾಯಣ ಹರಿ ನಾಮವ ಭಜಿಪಗೆ ನರಕದ ಭಯವುಂಟೆ
ನಾರದ ಸನಕ ಸನಂದನ ಸುರನರ ಪಾಲಿತ ಕರುಣಾಕರನರಹರಿ ಎಂದು ಪ
ಖಗರಾಜಗಳುಕದ ಉರಗನುಂಟೆ ದೊಡ್ಡ
ಮೃಗರಾಜ ಗಳುಕದ ಆನೆಯುಂಟೆ
ನಿತ್ಯ ಜಗದುದರನೆ
ಜಗದೊಡೆಯ ಜಾಹ್ನವಿಪಿತ ತ್ರಿಗುಣ ನಿರ್ಗುಣನೆಂದು1
ತ್ರಯಂಬಕ ನುರಿಗಣ್ಣ ಲುಳಿದವರುಂಟೆ
ಬಲಿಬಂಧನ ನರಹರಿ ಎಂದು 2
ಕುಳಿಶಕಳುಕದ ಪರ್ವತವುಂಟೆ ಚಲುವ
ನಳಿನ ಮಿತ್ರನ ಮುಂದೆ ತಮವುಂಟೆ
ಕಾಮ ಚೆಲುವ
ಜಲಜಮಿತ್ರ ಕುಲಲಲಾಮನೆ ಎಂದು 3
ಹರಿಯೆ ರಕ್ಷಿಸಲು ಕೊಂದವರುಂಟೆ ಮನ
ಮುರಿದು ಕೊಂದರೆ ಕಾವವರುಂಟೆ
ಮುರಹರ ನಾರಾಯಣ ನರಹರಿ
ಕರಿವರದ ಪಾಲಿತ ಸುರನರರ ಸೇವಿತನೆಂದು 4
ಹುತಾಶನನಿಗಳುಕದ ಕಾನನವುಂಟೆ
ವನರುಹಾಂಬಕ ವಾಯುತನಯ ಕೋಣೆಯ ಲಕ್ಷ್ಮಿರಮಣ
ಸನಕ ಸುತ ಚಿನುಮಯಾತ್ಮಕನೆಂದು 5