ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ ಪ ದಯವನಧಿ ಗೋಪಾಲಗೈಸು ಅಹಂ ನಾಶ ಅ.ಪ ಉಂಡು ಉಣಿಸುವಿ ನೀನು ದಣುವಿಕೆಗೆ ನಾನಯ್ಯ ಥಂಡ ಥಂಡದಿ ನಿನ್ನ ಲೀಲ ಜಾಲ ಕಂಡರೂ ಕಾಣದಲೆ ಬೆಂಡಾದೆ ಬಹುನೊಂದು ಮಂಡೆ ತಾಗಿದರು ಮನಕೆಚ್ಚರಾಗದು ಸ್ವಾಮಿ 1 ನಾಯಿಯಂದದಿ ವಿಷಯಕ್ಹಾರುವುದು ಈ ಮನಸು ದಾಯಾದಿಗಳ ವಶದಿ ಸಿಕ್ಕಿ ಸತತ ಕಾಯಜಾಪಿತ ನಿನ್ನ ರೂಪ ಧ್ಯಾನಕೆ ಬರದು ಮಾಯೇಶ ಮಾರಮಣ ಕಾಯೆನ್ನ ಕರುಣಾಬ್ಧಿ 2 ತೆಗಿ ನನ್ನ ಭೋಗ ಬಲೆ ನಗೆ ಮುಖವ ತೋರಯ್ಯ ನಿಗಮ ವೇದ್ಯ ಜಯೇಶವಿಠಲರಾಯ ಖಗಧ್ವಜ ಪರೆ ತೆಗೆದು ಜ್ಞಾನ ಚಕ್ಷುಸು ನೀಡು 3
--------------
ಜಯೇಶವಿಠಲ
ಧುರ ಧೀರಾ ಉದಾರಾ ಗಂಭೀರ ಕುಮಾರ ಪ ಕಂದರ್ಪ ರೂಪಾರ್ಧ ಚಂದ್ರಫಾಲಾ ಗುಣಮಾಲಾ ಜನಲೋಲಾ ಉಮೆ ಬಾಲಾ ಸುಶೀಲ 1 ನಿಗಮಾಳಿ ಪೊಗಳುವ ಖಗಧ್ವಜ ಮಿತ್ರಾ | ಜಗಪಾವನ ಶಶಿಮೊಗ ಕಂಜನೇತ್ರಾ ತ್ರಿನೇತ್ರಾ ಪ್ರಿಯಮಿತ್ರಾ ಸುಚರಿತ್ರಾ ಪವಿತ್ರಾ 2 ಪಾವನ ಮೂರುತಿ ಪಾವಂಜೆ ವಾಸಾ | ಕೋವಿದರೊಡೆಯ ರಕ್ಷಕ ದಾಸಾ ಗುಹೇಶಾ ಸರ್ವೇಶಾ ಸೇನೇಶಾ ಜಗದೀಶಾ 3
--------------
ಬೆಳ್ಳೆ ದಾಸಪ್ಪಯ್ಯ
ಎಂದಿಗೆಂದಿಗೆ ತೀರದು ನಮ್ಮಪ್ಪನ ಮಹಿಮಿನ್ನೆಂದಿಗೆಂದಿಗೂ ತೀರದು ಪ.ಎಂದೆಂದಂದದಿ ಸಂಧಿಸಿ ಪೊಂದಿದಾಇಂದಿರೆಸುಂದರೆ ಬಂದಾನೆಂದೆಂತೆಂದಳುವೃಂದಾರಕಾರವಿಂದಜಾಹೀಂದ್ರರು ನಿಂದರೂತಂದೆ ಮುಕುಂದ ಆನಂದನಂದನ ಮಹಿಮೆ 1ನಿಗಮಗಳು ಗುರುತ ಪೊಗಳಲು ಮಿಗೆ ತಪಸಿಗಳೆಣಿಕೆಗೆ ಮೈಯಗೊಡದೆ ನಗುವನಖಗಧ್ವಜ ಮೃಗಮುಖ ತ್ರಿಗೇಹ್ಯ ಪನ್ನಗಶಾಯಿಅಘದೂರ ಸುಗುಣಗಣನ ಮಹಿಮೆ 2ಉನ್ನತಕುನ್ನತ ಇನ್ನಣುಗಿನ್ನಣುಘನ್ನಕೆ ಘನ್ನ ಜಗನ್ನುತ ಸನ್ನಿದತನ್ನವನೆನ್ನಲು ಮನ್ನಿಪ ಚಿನ್ಮಯಚೆನ್ನ ಪ್ರಸನ್ವೆಂಕಟನಾಥನ ಮಹಿಮೆ 3
--------------
ಪ್ರಸನ್ನವೆಂಕಟದಾಸರು