ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಖಗಗಮನ ಜಗದ ಜೀವನ ರಘುವಂಶೋದ್ಧಾರಣ ನಗಧರನೆ ನಿಗಮಗೋಚರ ನಾಗಶಯನ ಮುರಮರ್ದನ ಪ ವನಜಸಂಭವವಿನುತ ಮನುಮುನಿವಂದಿತ ಜನಕಜೆಯ ಪ್ರಾಣಪ್ರಿಯ ವನಮಾ ಲನೆ ಭವಮೋಚನ ಜಯವಾಮನ ಸುಖಧಾಮನೆ ಇನಕೋಟಿಪ್ರಭಾಮಯ ವನಜಾಕ್ಷನೆ 1 ಸತಿಯ ಪಾಷಾಣಸ್ಥಿತಿವಿಮೋಚನ ಪತಿತಪಾವನ ಸತ್ಯಭಾಮೆರಮೆಯ ನಾಥ ನುತಕಿಂಕರ ಹಿತಮಂದಿರ ಜಿತದಶಶಿರ ಹತಮುಪ್ಪುರ ನತಿಹಿತ ರತಿ ಪತಿಪಿತ ಕ್ಷಿತಿಧವ 2 ದಾಮೋದರ ಶ್ರೀರಾಮ ಭಕುತಪ್ರೇಮ ನಿಸ್ಸೀಮ ಸ್ವಾಮಿ ನೀಲಮೇಘಶ್ಯಾಮ ಭೂಮಿಜ ವರಸ್ಮರಣೀಕರ ಕಾಮಿತ ವರವೀಯುವ ಸ್ಥಿರವಿಮಲಚರಿತ ಕರುಣಾಕರ 3
--------------
ರಾಮದಾಸರು
ನಂಬಿದೆನು ನಿನ್ನ ಅಂಬುಜನಯನ ಬೆಂಬಿಡದೆ ಕಾಯೆನ್ನ ಶಂಬರಾರಿಪಿತನೆ ಪ ಇಂದು ನೀ ಗೆಲಿಸಯ್ಯ ಮಂದರಧರಗೋವಿಂದ ಎರಗುವೆ ಪದಕೆ 1 ಜಡಜಾಕ್ಷ ನಿಮ್ಮಡಿಗೆ ದೃಢದಿಂದ ಬೇಡುವೆನು ತಡೆಯೆನ್ನನು ಕಡೆಹಾಯ್ಸು ದುರಿತದಿಂ 2 ಜಗದೊಳಗೆ ಎನ್ನನು ನಗೆಗೇಡು ಮಾಡದೆ ಮಗನನ್ನ ಸಲಹಯ್ಯ ಖಗಗಮನ ಶ್ರೀರಾಮ 3
--------------
ರಾಮದಾಸರು
ಭಾರ್ಗವಿ ಪ ಮಹಾಲಕುಮಿ ಶ್ರೀಪತಿಗೆ ಸಮಾಸಮಳೆನಿಸಿರಲು ಅ.ಪ ಮಡುವ ಸೇರಿದ ಒಡೆಯ ಬಿಡದೆ ಮಂದರಗಿರಿಯ ಪೊಡವಿಬಗೆದು ಒಡೆದು ಕಡುಕ್ರೂರನಾದ ಬಡವನಂತೆ ಬೇಡಿ ಕೊಡಲಿ ಪಿಡಿದಿಹ ಕೆಡುಕ ಮಡದಿಯಾ ಕಳಕೊಂಡು ಕಡಹನೇರಿದ ಕ್ರಿಯಕೆ 1 ಮುಗುಧರನ ಮಾಡಿದ ಶುದ್ಧಸ್ತ್ರೀಯರನೆಲ್ಲಾ ಖಗಗಮನ ತಾ ತುರುಗವನು ಹತ್ತಿದಾಯೋಗ ಭೃಗುಮುನಿಯ ಅಪಚಯಕೆ ಕರವೀರಪುರದಲಿರೆ ನಾಗಗಿರಿಗಿಳಿದ ಪತಿಯ ಪರಿಣಯವನೆಸಗಿದೆ2 ನಾಗರಾಜನ ಕೂಗ ಕೇಳಿದಾಗ್ಹೇಳದಲೆ ಬೇಗ ಸಾಗಿಬಂದಾ ಸರಸಿನಾ ಬಳಿಗೇ ಅಂಗಜನ ವೈರಿಯ ಇಂಗಿತವನರಿತು ಹೆಂಗಳಾರೂಪದಲಿ ಮೋಹಿಸಿದ ಮಾಯಕ್ಕೆ 3 ಕ್ಷಮೆಯಸಾಗರಳೆ ನಿನ್ನ ಅನುಪಮ ಸನ್ಮಹಿಮೆ ಅಮಿತವಾಗಿಹುದು ಜಗಕಾರ್ಯದಿ ಅಮಮ ನೀನಿರಲು ನಾಭಿಕಮಲದಲಿ ಬ್ರಹ್ಮನ ಜ- ನುಮ ತೋರಿದ ಹರಿಯ ಸ್ವರಮಣನ ಕಾರ್ಯಕೆ4 ಗುಣತ್ರಯಂಗಳಭಿಮಾನಿ ಶ್ರೀ ವೇಂಕಟೇಶನರಾಣಿ ಎಣೆಯಂಟೆ ಹರಿಗುಣವನೆಣಿಸುವ ಪ್ರವೀಣೆ ಘನ್ನ ಉರಗಾದ್ರಿವಾಸವಿಠಲನ ಕರುಣ ಪೂರ್ಣಪಾತ್ರಳೆ ಹರಿಯ ವಕ್ಷಸ್ಥಳನಿವಾಸಿನಿಯೇ5
--------------
ಉರಗಾದ್ರಿವಾಸವಿಠಲದಾಸರು
ಭ್ರಷ್ಟ ಸಂಕಲ್ಪನ್ನ | ಮಾಡದಿರೆಲೋ |ಇಷ್ಟ ದೈವವೆ ಎನ್ನ | ಕಷ್ಟದೊಳು ಹಾಕಿ ಪ ಖಗ ವರಧ್ವಜ ದಾಸಮಿಗಿಲಾಗಿ ಪೇಳ್ವೆನೆಂದ | ವಘಡಿಸೀ ನುಡಿಸೀಹಗರಣದಿ ಹರಿದಿನದಿ | ಸುಗುಣ ತಾ ಬರದಿರಲುಖಗಗಮನ ನಿನ್ವಚನ | ಲಘುವಾಗಲಿಲ್ಲೇ 1 ಅಪ್ಪ ವಿಜಯಾರ್ಯ ಪದ | ವಪ್ಪಿ ಪೂಜಿಸಿ ಪೋಗಿಚಿಪ್ಪಗಿರಿಯಲಿ ನೋಡೆ | ಒಪ್ಪಿದವ ಬರದೇಅಪ್ಪಾರ ಮನನೊಂದು | ಅರ್ಪಿಸಿಹೆ ನಿನ್ನಡಿಗೆಕೃಪ್ಪೆಯಿಂ ಬರಮಾಡೊ | ಗೊಪ್ಪ ಶಿಷ್ಯನ್ನಾ 2 ಮಾನಾಪಮಾನಗಳು | ಯೇನೊಂದು ನಿನ್ನೊಳಗೊಮಾನನಿಧಿಯೆ ಕೇಳೊ | ಮೌನಿ ವರದಾದೀನ ಜನಪಾಲ ಗುರು | ಗೋವಿಂದ ವಿಠ್ಠಲನೆಮಾನ್ಯ ಮಾನದನೆಂಬ | ಸೂನೃತವ ಸಲಿಸೋ 3
--------------
ಗುರುಗೋವಿಂದವಿಠಲರು
ಹರಿ ಗೋವಿಂದ ಮುಕುಂದ ಮನುವಂದ್ಯ ಮಾಧವ ಹರ ಅಜನುತ ಪರಮಾನಂದ ಪ ದೇವ ಗಿರಿಧರ ಸುರನರ ಮುರಹರ ಪರತರ ಶರಧಿಜಾ ವರ ನರಹರಿ ಕೇಶವ ಸ್ಮರಿಪರ ಸುರತರು ಪರಮಪ್ರಕಾಶನೆ ಪುರಹರವರಸುಖ ಸುರೇಶ 1 ಈಶ ಮುನಿಕುಲ ವಸುಕಾಲ ತನುಶೀಲ ವನಮಾಲ ಜನಕಜೆಪತಿ ಭಕ್ತರಾನಂದ ವನಜಾಕ್ಷ ದಿನಕರ ಘನಪ್ರಭೆತನುಶೋಭ ವಿನಮಿತ ಸನಕಾದಿಸಾನಂದ 2 ಜಗದೀಶ ಅಘಪೋಷ ಮೃಗನಾಶ ಲಕುಮೀಶ ಖಗಗಮನ ದಶಶತನಾಮ ಬಗೆಬಗೆ ಪೊಗಳುವ ನಿಗಮ ಆಗಮನುತ ಶ್ರೀರಾಮ 3
--------------
ರಾಮದಾಸರು
ಪ್ರಸನ್ನವದನ ಹಯಸೂದನ ಪಾಲಿಸು ಹಯವದನ ಪ.ಚಂದ್ರಮಂಡಲ ಗ್ರಹಮಾಲಾನಂದ ವಿಶಾಲಇಂದಿರೆರಮಣ ಖಗಗಮನಸ್ಯಂದನಾಂಗದರರವಿಂದ ಗದಾಕರಸುಂದರಗಾತ್ರಧಿ ವಂದ್ಯವಿಧಾತ್ರ 1ನಿಗಮೋದ್ಧಾರಕಾಘ ವಾರಕ ತ್ರಿಜಗರಕ್ಷಕಮೃಗಮುಖನೃದೇಹಿ ಧಾರ್ಮಿಕದ್ಯುಗಶಶಿ ಸಮತೇಜ ದೃಗಯುತ ಗಜರಾಜನಿಗಡ ಶಿಥಿಲಕಾರಿ ಬಿಗಡರ ಭಾರಿ 2ಗುರುವಿನ ಬಾಲ ಪಾಲನಶೀಲ ಸಾಗರಸುತೆಲೋಲಗುರುವಾದಿರಾಜಾರ್ಚಿತ ಪಾದಾಬ್ಜವರಸೋದೆ ಮಠವಾಸ ಸುರಮುನಿ ಪರಿತೋಷಪರಸನ್ನವೆಂಕಟೇಶಹರಿತುರಗಾಸ್ಯ3
--------------
ಪ್ರಸನ್ನವೆಂಕಟದಾಸರು