ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆನೊ ಕಂಗಳಲಿ ಭೂ | ಮಂಡಲಾಬ್ಧಿಗೆ ಸೋಮನೆನಿಪ ಅ | ಖಂಡ ಮಹಿಮಾ ವಾದೇಂದ್ರ ಗುರುಗಳ ಪ ನಸುನಗಿಯ ಮೊಗ | ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ | ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ ಹಸನಾದ ಎಳೆ ತುಲಸಿ ಶೋಭಿಸಿ | ಬೆಸಸುವ ಒಂದೊಂದು ಮಾತಾ | ಲಿಸಿದರದು ವೇದಾರ್ಥತುಲ್ಯಾ | ಲಸವ ಗೈಯಿಸದೆ ಬರುವ ಗುರುಗಳ1 ಮೊಸಳಿವಾಯಪಲಕ್ಕಿ ಸುತ್ತಾ ಭಾ | ರಿಸುವ ನಾನ ವಾದ್ಯಾದಾ ಘೋಷಾ | ಪುಸಿಕರೆದೆದಲ್ಲಣರು ಎಂಬಾ | ದಶ ದಿಕ್ಕಿನೊಳು ಕೀರ್ತಿ ತುಂಬಿರೆ | ಶಿಶುವು ಮೊದಲಾದವರು ತಮ ತಮ | ಬೆಸನೆ ಪೇಳಲು ಕೇಳಿ ಅವರು | ಋಷಿಕುಲೋತ್ತಮರಾದ ಗುರುಗಳ2 ಶ್ವಶನ ಮತ ವಾರಿಧಿಗೆ ಪೂರ್ಣ | ಶಶಿ ಎನಿಸಿಕೊಂಬ ಧೀರುದಾರರೆ | ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ | ಲೋಕೇಶ ಇವರನ್ನ ವಸುಧಿ ಅಮರರು | ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ | ರಸಭರಿತರಾಗಿ ನೋಡುತ್ತ ಮಾ | ಸನದಿ ಹರಿಪದ ಭಜಿಪ ಗುರುಗಳ3 ಕುಸುವಶರನ ಬಾಣವನು ಖಂಡ್ರಿಸಿ ಬಿಸುಟ ಸಂಪನ್ನ ವಿದ್ಯಾ | ವಸುವಿನಲಿ ಆವಾಗ ತಲೆ ತೂ | ಗಿಸುವರು ಪಂಡಿತರ ಮೆಚ್ಚಿಸಿ | ವಶವೆ ಪೊಗಳಲು ಎನಗೆ ಇವರ ದ | ರುಶನದಿಂದಲಿ ಗತಿಗೆ ಪಥನಿ | ವಿಷದೊಳಗೆ ಇದು ಸಿದ್ಧವೆಂದು ವಂ | ದಿಸಿದಿರೊ ಮರಿಯದೆ ಈ ಗುರುಗಳಾ 4 ಮಿಸುಣಿ ಮಂಟಪದೊಳಗೆ ರಂ | ಜಿಸುವ ರಾಮನÀ ಕುಳ್ಳಿರಿಸಿ ಅ | ರ್ಚಿಸುವ ಚಿತ್ತೇಕಾಗ್ರದಲಿ ವೊ | ಲಿಸುವ ತಂತ್ರ ಸಾರೋಕ್ತ ಬಗೆಯನು | ಕುಶಲರಾದ ಉಪೇಂದ್ರ ಮುನಿಕರ | ಬಿಸಜದಿಂದಲಿ ಜನಿಪ ಭಕುತಿಲಿ | ಸಿರಿ ವಿಜಯವಿಠ್ಠಲನ್ನ | ಪೆಸರುಗಳು ಎಣಿಸುವ ಗುರುಗಳ 5
--------------
ವಿಜಯದಾಸ
ಪರಮಪಾವನ್ನನಾಮ ಭಳಿರೆ ಸಂಗರ ಭೀಮ ಸರಸಗುಣಾಭಿರಾಮ ತರಣಿವಂಶ ಲಲಾಮ ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ. ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು ದಕ್ಕಲೆನುತ ಪೋಗಿ ದಂಡಕಾರಣ್ಯವ ಭೂರಿ ದಾನವಹಿಂಡ ಚಕ್ಕಂದದಲಿ ಕೊಂದ ಜಾಣ ನೀನಹುದೊ 1 ಭುವನೇಶ ಶಬರಿಯ ಪೂಜೆಯ ಕೈಕೊಂಡು ಪವನಾತ್ಮಜನ ಕಂಡು ಬರಹೇಳಿ ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ ಹವಣರಿಯದಸುವ ಕೊಂದು ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ- ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2 ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ- ಗಾರವಾದ ಸಾಕೇತಪುರಕೆ ಭರದಿ ಬಂದು ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ ಧರೆ ಆಳಿದ ಪರಿಣಾಮದಿ ಹಯವದನ ರಾಮ3
--------------
ವಾದಿರಾಜ
ಪಾಲಿಸೋ ಫಂಡರಿಪುರಾಯಾ ಪಾವನ ಕಾಯಾ ಪ ಶ್ಲೋಕÀ : ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ ಶರಧಿ ತನಯಲೋಲಾ ಶಕ್ವರೀಕಾರಿ ಫಾಲ ಶಿರಿ ಅಜಭವ ಮೂಲಾ ಶುದ್ಧ ಕಾರುಣ್ಯ ಲೀಲಾ ವೈಜಯಂತಿ ಮಾಲಾ ಕುಂಡಲ ಕೇಯೂರ ಕೌಸ್ತ್ತುಭ ಲೋಕದಿ ವ್ಯಾಪ್ತಾ ದೋಷ ಸಿರ್ಲಿಪ್ತ ದೇವರ ದೇವಾ ಧರುಮಾದ್ಯರ ಭಾವಾ 1 ಅಮಿತ ಸುಗುಣಧಾಮಾ ಆತ್ಮಭೂಪೂರ್ಣ ರಾಮಾ ಅಮರಕುಲಲಲಾಮ ಅಬ್ಜಧಾಮಾಭಿರಾಮಾ ಯಮಿಕುಲೋದಧಿ ಸೋಮ ಯಜ್ಞ ಭೃದ್ಯಜ್ಞ ನಾಮಾ ಕರ್ಮ ಸಂರಕ್ಷಿತ ಸರ್ವ ಲೋಕಾ ವಿತತ ಮಹಿಮ ವಿಶ್ವನಾಟಕ ವತ್ಪ್ರ ಘೋಟಕಾ ಶೋ ನಳಿನ ಜಾಂಡೋದರಾ ಸರ್ವರಾಧಾರಾ ಸಂತತ ನಿರ್ವಿಕಾರಾ ಮತಿ ಮಂದನಾಗಿ ನಿನ್ನನು ಬಿಟ್ಟೆ ಮ ಬಟ್ಟೆ 2 ಶ್ಲೋಕ : ಜನನ ಮರಣ ದೂರ ಜಂಗಮಾಚಾg ವಿಹಾರಾ ದನುಜವನ ಕುಠಾರಾ ದೀನಮಂದಾರ ಧೀರಾ ಪ್ರಣತ ಭಯ ವಿಹಾರಾ ಪ್ರಾಕೃತಾತೀತ ಸಾರಾ ದಿನಪನಿಭ ಶರೀರಾ ದುಃಖವಾರಿಹ ಸಮೀರಾ 3 ವನಧಿ ಜಿತಾಸುರಯೂಥ ನಿರ್ಮಲ ಶ್ರುತಿಗಾಥಾ ಎನ್ನ ಸಂತತ ಸಂಪ್ರಸನ್ನಾ ಜೀಯ ಕರಣಾದಿ ಪಿಡಿಕಯ್ಯಾ ಗೋಪಕುಮಾರಾ 3 ಕಮಠ ಕೋಲಾ ಶತ್ರುಕಾಶ್ಯಪಿಬಾಲಾ ನೃಪಕುಲ ಈರವಾಳಾ ನೀಲಕಂಠಾಸ್ತ್ರಕಾಲಾ ದ್ರುಪದತನಯ ಪಾಲಾ ದುರವರ್ಜಿತದುಕುಲಾ ನಿರ್ಮಲ ಓಂಕಾರಾ ಪರಮ ಪ್ರೀಯ ಜಾಮಿ ಕಳೆದ್ಯೊ ತಾಪವಾ 4 ಶ್ಲೋಕ : ನಗಧರ ನಳಿನಾಕ್ಷ ನಾಕನಾಥಾದ್ಯ ಪಕ್ಷ ನೃಗ ನಗಪತಿ ಶಾಪಾ ನಿರ್ವಹಕಾರ ಶ್ರೀಪಾ ಭೃಗು ಮುನಿಗೇಯಾ ಭೂತನಾಥ ಸಹಾಯ ಅಗಣಿತ ಅಹಿತರನಳುಹಿದಾ ತೋರಿದೆ ಸತ್ಪುತ್ರರಾ ವಒತ್ತಿ ಕುಂತಿನಂದನಾ ಖಂಡ್ರಿಸಿದ್ಯೊ ಕೃಪಾಳು 5 ಶ್ಲೋಕ :ಶುಭತಮ ಸುಖತೀರ್ಥಾರಾಧ್ಯ ಸದ್ದಾನಪಾತ್ರಾ ಇಭವರರಿಪು ಹತಾನ ವಿಶ್ವಜನ್ಮಾವಿಕರ್ತಾ ಯುಗ್ಮ ಪ್ರಸಾದಾ ತರುಜನ್ಮ ವಿದೂರಾ ನಿರ್ಗುಣ ನಿರಂಜನಾ ಗೋಪರೊಡಗೂಡಿ ಮೆದ್ದೆ ತೋರಿದೆ ದಯಸಿಂಧೂ 6 ಶ್ಲೋಕ :ಅತಿವಮಲಸುಗಾತ್ರ ಅಖಿಳಲೋಕೈಕ ಪಾತ್ರಾ ಷತತಿಜದಳನೇತ್ರಾ ವೃತ್ತಹಾದ್ಯ ಮರಮಿತ್ರಾ ಶ್ರುತಿಕಮಂಜ ಸೂತ್ರಾ ಸ್ತುತ್ಯ ಪಾವನ ಪವಿತ್ರಾ ಕಳತ್ರ ನಿನ್ನಯ ದಿವ್ಯ ಖ್ಯಾತಿ ಈ ನಿತ್ಯ ಸುಖಿಸೋರು ಆನಂದಾಬ್ಧಿ ಸದ್ಗತರೋ ಮಾನವ ಜನಕ್ಲೇಶ ಭಂಜನಾ ಭಾಷಾ ಎನ್ನಯ ಅಭಿಲಾಷಾ 7 ಶ್ಲೋಕ :ವನರುಹಭವತಾತಾ ವೀತ ತನ್ಮಾತ್ರಭುತ ದ್ಯುನದಿ ಜಲವಿಧೂತ ದಿವ್ಯ ಪಾದಾಂಬುಜಾತಾ ಅನಿಲತನಯ ಪ್ರೀತಾ ಅತ್ರಿಸದ್ವಂಶಜಾತಾ ಅನಿಮಿಷಜಯಸೂತಾ ಆನತೇಷ್ಟಪ್ರದಾತಾ ಮಂಗಳಶ್ರೇಣಿ ಲೋಕೈಕಸತ್ರಾಣಿ ಶರಣು ಹೊಕ್ಕರ ಕಾಯುವ ಛಲದಂಕಾ ಕಾಳಿಂಗನ ಬಿಂಕಾ ಬಿಡಿಸಿದ್ಯೊ ನಿಷ್ಕಳಂಕಾ ಮುರ ದಂತವಕ್ತ್ರಾದ್ಯರ ಹಿಂಸಾ ಬಿಡಿಸಿದೆಯೋ ಓಜಿಷ್ಠಾ 8 ಶ್ಲೋಕ :ಹನುಮನತ ಪಾದಾಬ್ಜಹಂಸ ಸಂವಕ್ತ್ರುಕುಬ್ಜಾ ತನುವಿಕೃತ ವಿನಾಶಂ ಕಾಳಿ ಜಿಹ್ವಾಶುದೇಶಂ ದನುಜವಿಕರಾಳ ಮತ್ತೆ ಪೌಂಡ್ರೇ ಶೃಗಾಲಂ ಮೋದ ಸುಪದ ಮೂರುತಿಯನ್ನು ತೋರು ಮಾತಾ ಲಾಲಿಸು ಜಗನ್ನಾಥ ನಿನ್ನವರಿಗೀಯೋ ಶ್ರೀಶಾ 9
--------------
ಜಗನ್ನಾಥದಾಸರು
ಮಾಧವ ಗುರುವರ ಬೋಧಿಸು ಸುಖಸಾರ ಪಾದವ ಸ್ತುತಿಪೆನು ದಯವಾಗೊ ಸುಖಕರ ಪ ನಶಿಸಿಪೋಗುವ ಈ ವಿಷಮಸಂಸಾರದ ವಿಷಯದಾಸ್ಹರಿಸೆನಗೆ ಅಸಮಸುಖದ ಮಾರ್ಗ 1 ಅನುದಿನ ತ್ರಿಮಲಮೋಹಂಗಳ ಕ್ರಮದಿ ಖಂಡ್ರಿಸಿ ಮಹ ವಿಮಲಪದವಿ ಮಾರ್ಗ 2 ಮರವೆ ಮಾಯವ ತರಿದು ಅರಿವಿನಾಲಯದಿರಿಸಿ ಪರಮ ಶ್ರೀರಾಮನ ಚರಣಕಮಲಭಕ್ತಿ 3
--------------
ರಾಮದಾಸರು
ಸಿರಿ ಮನುಜಕೇಸರಿ ಧರಣಿ ಸುಮನಸಗೇಯ | ಮೊರೆಹೊಕ್ಕೆ ನಿನ್ನನು ತರಣಿ ಸನ್ನಿಭಗಾತ್ರ | ಕೀರಾಬ್ಧಿಶಯ್ಯ ಪ ಸರಸಿಜಾನನ ನಜಕ ತವಪದ ಮರೆದ ಪಾಮರನಾಗಿ ನಾ ಭವ ಶರಧಿಯೊಳು ಬಿದ್ದು ಪರಿದು ಪೋಗುವೆ ಎರಗರಿಪುಧ್ವಜನಾಗಿ ನೀ ಬಂದು ಸೂನು | ಸರ್ವೇಶ ರಾಘವ ಭಜಕಜನ ಸುರಧೇನು | ಸ್ವರತ ಸುಖಮಯ ಸುಜನ ವಾರಿಜ ಭಾನು ಖಳವನ ಕೃಶಾನು ತ್ರಿಜಗ ಪೋಷಕ ಪರಮ ಸುಲಭ ನೀ ನಿಜದಯದಿ ಹರಿಮದವ ಖಂಡ್ರಿಸಿ ವೃಜದ ತುರುಗಳ ಕಾಯ್ದ ಸಜನುತ ದ್ವಿಜಪ ಸುತೆ ಪತಿಧ್ವಜನ ಸುತನೆ 1 ಪತಿತ ಪಾವನ ರಂಗ | ಸಂತತದಿ ನಿನ್ನನು ಸ್ತುತಿಪ ಸುಜನರ ಸಂಗ | ನೀನಿತ್ತು ಪಾಲಿಸು ದಿಜ ತತಿ ಮಾತಂಕ ಮರಿಗಳಿಗೆ ಸಿಂಗ ಸಿತ ತುರಂಗನ ರಥದಿ ಶೋಭಿಪ ಅತುಳ ಮಹಿಮನ ಜನನಿ ಅನುಜನಿಗೆ ಹಿತದಿ ಭ್ರಾತದಿ ಭೀತಿ ಬಿಡಿಸಿದ ಶೃತಿಗೆ ನಿಲುಲದ ಚ್ಯುತ ವಿದೂರನೆ 2 ಸಾಮಗಾನ ವಿಲೋಲ ಸುರರಾಜ ಪೂಜಿತ ಕಾಲ | ಕರಿದನುಜ ಹರನುತ ಸ್ವಾಮಿ ಶ್ರೀವನಮಾಲಧರ ಸುಗುಣಶೀಲ ಕಾಮಪಿತ ಹಿಮಧಾಮ ವದನ ಸು ಧಾಮಸಖ ಸುರಸ್ತೋಮ ವಂದಿತ ಯಾಮಿನೀ ಚರವೈರಿ ವಾಮನ ಶ್ರೀಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ
ಗಣೇಶ ಸ್ತುತಿ1ಗಜಮುಖ ಸಲಹೆನ್ನ ದಯದಿ ಪಗಜಮುಖ ಸಲಹೆನ್ನತ್ರಿಜಗದಿ ಪೂಜ್ಯನೆ ನಿಜಮತಿ ಪಾಲಿಸಿ ಅ.ಪವಿಘ್ನನಾಯಕ ಎನ್ನ ಅಜ್ಞಾನ ಖಂಡ್ರಿಸಿವಿಘ್ನವ ತಾರದೆ ಸುಜ್ಞಾನ ಕರುಣಿಸು 1ಅಮರಾದಿವಿನುತಹಿಮಸುತೆಸಂಜಾತವಿಮಲಸುಚರಿತನೆ ಸುಮನಸಪ್ರೀತ 2ವರದ ಶ್ರೀರಾಮನ ಚರಣಸ್ಮರಣೆಯೆನ್ನಹೃದಯದಿ ಸ್ಥಿರಗೈ ಕರಿಮುಖ ಸ್ಮರಿಸುವೆ 3
--------------
ಶ್ರೀರಾಮದಾಸರ ಕಥನಾತ್ಮಕ ಕೃತಿಗಳು
ಚರಣಕಮಲವನ್ನು ನೆನೆವೆ ನಾಸುರದ್ವಿಜವೇಷದಿಂದುದಿತನ್ನ ತ್ರಾಣಿಪರಮತಗಳನು ಖಂಡ್ರಿಸಿದನ್ನ ಸತ್ಯಪರಿಪರಿ ವ್ರತಾಚರಿಸಿದನ್ನ ಮನೋಶುದ್ಧಾದ ಸಂಪ್ರದಾಯಕನನ್ನ ತತ್ವಪರಸತಿ ಪರಧನ ತೊರೆದನ್ನ ತನ್ನದೂರದರ್ಶಿ ಸರ್ವಕಂಡನ್ನ ನಿಜವೈಷ್ಣವ ಸಿದ್ಧಾಂತ ಒರೆದನ್ನ ಆತಪಸೆ ಸಂಗರವೆಂದರಿದನ್ನ ತನ್ನವಿಜಯವಿಠಲದಾಸನ್ನ ತನ್ನ
--------------
ಗೋಪಾಲದಾಸರು