ಮುನಿದ ಭಾವುನದಂಡು ಕಂಡು
ನಿನ್ನ ಮನೆಮಾರಿ ನಾಸೆಯನು ನೀಡಾಡು ಪ
ಲಂಬಾಣಿ ಜನ ಬಂತು ನೋಡು ನೀನು
ದಿಬ್ಬವ ಹತ್ತಿ ಕಾನಿಗೆ ಓಡು
ತಂಬಿಗೆಗಳ ಜೊತೆಮಾಡು ತಲೆ
ಚಂಬಿಗೆ ಬಂತು ಮಾನವರಿಗೆ ಕೇಡು 1
ಕಂಡ ಕಂಡವರನು ಹಿಡಿದು ಕರ
ಚೆಂಡಾಡಿ ಹೊಯ್ದು ಕೆಡಹಿ ಮೆಟ್ಟಿ ತಿವಿದು
ಖಂಡೆಯದೊಳು ಘಾಯ ಗರೆದು ಮೈ
ರೊಂಡಿ ಮುರಿದು ಗಂಟಿಗೆ ನೀರನೆರೆದು 2
ಕತ್ತಿಯ ಕಿತ್ತು ಕೈಯೆತ್ತು ಗೋಣ
ಕುತ್ತಿ ಹಸ್ತಕೆ ಹಸ್ತವನು ತರಿದೊತ್ತಿ
ರಕ್ತ ಮಾಂಸದ ಕರುಳೊತ್ತಿ ಹಾ
ರಿತು ಗೂಡಿಂದ ಜೀವನು ಕಣ್ಣ ಕುತ್ತಿ 3
ಹಂತಕಾರಿಗಳೊಂದೆ ರೂಪು ಪಾಪ
ವಂತರಿಗಿನಜ ತೋರಿಸುವ ವಿದೂಪ ನರ
ಕಂತೆಯ ಬಿಡದೆ ಸುಲಿಯಲಿಕೆ ಸಾಪು 4
ಶೀಲವಂತರು ಶೀಲಗೆಟ್ಟರು ದುಃ
ಶೀಲರು ಶೀಲದಾಚಾರವ ಸೊಟ್ಟರು
ಕೀಳು ಮೇಲೊಂದಾಯಿತಷ್ಟು ಲಕ್ಷ್ಮೀ
ಲೋಲ ಮಾಡಿಸುವ ಕುಚೇಷ್ಟೆ ಇವಿಷ್ಟು 5