ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೆ ಬಗಳಾಶ್ಚರ್ಯವ ಕಂಡಿರೇ ಬಗಳಾಶ್ಚರ್ಯವದಿಂಡೆಯರಾದವರನ್ನೆಲ್ಲ ತುಂಡು ಮಾಡಿಶುಂಭ ನಿಶುಂಭರಸುವ ಕೊಂಡವಳ ಪ ಕ್ರೂರ ಧೂಮ್ರಾಕ್ಷ ಶುಂಭರಾಜನ ನೇಮದಿಂದಸಾರಿ ದೇವಿಯನ್ನು ಮುಂದಲೆ ಹಿಡಿದು ಎಳೆವೆನೆನಲುವೀರಳೀಗ ಕೇಳಿ ಅವಡುಗಚ್ಚಿ ಕಣ್ಣು ತೆರೆಯೆಹಾರಿದನು ಧೂಮ್ರಾಕ್ಷನುರಿದು ಭಸ್ಮವಾದನು1 ಚಂಡ ಮುಂಡಗಪ್ಪಣೆಯನುದ್ದಂಡ ಶುಂಭನೀಗ ಕೊಡಲುಖಂಡೆಯವನೆ ಹಿರಿದು ಮುಂಕೊಂಡು ದೇವಿ ಬಲಕೆ ನಿಂದುಗುಂಡೆಯರ ಕೂದಲು ಹಿಡಿದು ತುಂಡು ಮಾಡಿಯೆ ತಿಂದುಚಂಡ ಮುಂಡರ ತಲೆಯ ಖಂಡಿಸಿದ ವೀರಳ 2 ರಕ್ತ ಬೀಜನ ರಕ್ತದಿಂದ ರಕ್ತಬೀಜರಾಗೆರಕ್ತನಯನಿ ಹಾಸಿದಳು ನಾಲಿಗೆಯ ಭೂಮಿಗೆರಕ್ತ ಬೀಜರನ್ನು ಕಡಿದು ನುಣ್ಣಗೆ ನುಂಗಿ ಆದಿ-ರಕ್ತ ಬೀಜನನ್ನು ಶೂಲದಿಂದ ತಿವಿದು ತಿಂದಳು 3 ಅಂಬನ ಮೇಲೆ ನಿಶುಂಭನೆರಡು ಹಸ್ತ ಹೋಗಿಎಂಬೆನೇನು ಒದಯಲಾಗ ಅಂಬುಜಾಕ್ಷಿ ತೊಡೆಯ ಕಡಿಯೆತುಂಬಿ ಕೋಪದಿಂದಲವನು ತಿಂಬೆನೆಂದು ಮುಂದೆ ಬರಲುಅಂಬಿನಿಂದ ತಲೆಯ ಕಳೆದಳಂಬರದಲುಘೇ ಎನಲು 4 ತಕ್ಕೆಯಲ್ಲಿ ಬಿದ್ದು ದೆಕ್ಕಬುಕ್ಕಿಯಾಡೆ ಶುಂಭನನ್ನುನಕ್ಕು ಶಿವನ ಶೂಲದಿಂದಲಿಕ್ಕಿದಳು ಖಳನ ಎದೆಯಉಕ್ಕಿ ಹರುಷ ದೇವತೆಗಳು ಓಲಗವನೆ ಮಾಡಿದರುದುಃಖಾತೀತ ಚಿದಾನಂದ ತಾನಾದ ಬಗಳೆಗೇ5
--------------
ಚಿದಾನಂದ ಅವಧೂತರು
ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ ಇಂದ್ರಾಕ್ಷಿ ಸಲಹೆ ಬಂದು ಪ ಚಂದ್ರಶೇಖರನಂಕ ಸಂಸ್ಥಿತೆ ಚಂದ್ರ ಬಿಂಬಾನನೆ ದಯಾನ್ವಿತೆ ಇಂದ್ರ ಮುಖ ಸುರಗಣ ಸಮರ್ಚಿತೆ ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ. ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ ಶರಣ ಜನರನು ಪೊರೆವೆನೆನ್ನುತ ಕರದಿ ಪಿಡಿದಿಹೆ ಬಿಡದೆ ಉನ್ನತ ದರವಿಯನು ಸಿದ್ದಾನ್ನ ಪಾತ್ರೆಯ ಕರುಣಿ ತ್ರಿಜಗಜ್ಜನನಿ ಸುಗುಣಿಯೆ 1 ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ ನಿತ್ಯಮಂಗಳೆ ಭೃತ್ಯವತ್ಸಲೆ ಸತ್ಯರೂಪಿಣಿ ಮೃತ್ಯುನಾಶಿನಿ ನಿತ್ಯತ್ವತ್ಪದ ಭಜಿಪ ಸಂಪದ- ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ 2 ಭೀಮಾ ಭೈರವನಾದಿನಿ | ಕುಮಾರ ಜನನಿ ಕಾಮನಿಗ್ರಹನ ರಾಣಿ | ವರವರ್ಣಿನಿ ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ ಚಾಮುಂಡೇಶ್ವರಿ ಕೋಲರೂಪಿಣಿ ಭ್ರಮರಿ ಶಾಕಾಂಬರಿ ನೃಸಿಂಹಿಣಿ ಅಮಿತರೂಪಿಣಿ ಅಹಿತ ಮಾರಿಣಿ 3 ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ ಶರ್ವಬ್ರಹ್ಮರ ವರದಿ ಕೊಬ್ಬಿ ಸು- ಪರ್ವರನು ಕಂಗೆಡಿಸೆ ದನುಜರು ಸರ್ವಶಕ್ತಳೆ ಮುರಿದು ಖಳರನು ಉರ್ವಿಭಾರವ ನಿಳುಹಿ ಪೊರೆದೌ 4 ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ ಭಜಿಪರ ಪೊರೆವಳೆಂದೆ | ನಾನಿಂದು ಬಂದೆ ಕುಜನಮರ್ಧಿನಿ ಕುಟಿಲ ಹಾರಿಣಿ ಗಜಗಮನೆ ಗಂಭೀರೆ ಗುಣಮಣಿ ವೃಜಿನ ಪರಿಹರೆ ವಿಘ್ನಸಂಹರೆ ನಿಜ ಪದಾಂಬುಜ ಭಜಕನೆನಿಸಿ 5 ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ ಭುವನ ಮೋಹಿನಿ ದೈತ್ಯನಾಶಿನಿ ತಾಪ ಜ್ವರ ನಿವಾರಿಣಿ ಕವಿಭಿರೀಡಿತೆ ದೇವ ಪೂಜಿತೆ ವಿವಿಧ ಫಲಗಳ ಒಲಿದು ಕೊಡುವಳೆ 6 ಶೃತಿ ಸ್ಮøತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ ವಿತತ ಮಹಿಮಳೆ ವಿಶ್ವತೋಮುಖೆ ಅತುಳ ಭುಜಬಲೆ ಭದ್ರಕಾಳಿಯೆ ಪಾವನಿ ಸತ್ವಶಾಲಿನಿ ಸತಿ ಶಿವಪ್ರಿಯೆ ನೀಡಿ ಸುಮತಿಯ 7 ಅರಿದರಾಂಕುಶ ಮುಸಲ | ಮುದ್ಗರಚಾಪ ಮಾರ್ಗಣ ಪಾಶ ಪರಶು ಘಂಟಾ ಶಕ್ತಿ ಪಾತ್ರೆಯು ವರಗದಾಭಯ ಕರದೊಳೊಪ್ಪುತ ದುರುಳರನು ಸಂಹರಿಸಿ ಸಂತತ ಸುರನರೋರಗರನ್ನು ಪೊರೆಯುವ 8 ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು ಘೋರ ರೂಪದಿ ಬಂದು ಪೋರರ ಗಾರುಗೊಳಿಸುತ್ತಿರಲು ತವಪದ ಸಾರಿ ನೆನೆದರೆ ತೋರಿ ಹಿಮ್ಮಡಿ ದೂರ ಸರಿವರು ಮುಗಿದು ಕರಗಳ 9 ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ ತಾಪಸಾರಾಧಿತ ಪದಾಂಬುಜೆ ಶ್ರೀಪತಿಯ ಸೊದರಿಯೆ ನೀ ನಿಜ- ರೂಪುದೋರಲು ಪಾಪತಾಪ ಪ್ರ- ಳಾಪ ಮಾಡದೆ ರಾಪುಗೈವುದೆ 10 ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ ದುರ್ಗದಿಂತಾರಿಸುವೆ ಭಕ್ತರ ದುರ್ಗೆ ನಾಮಾಂಕಿತದಿ ಎಂಬರು ಕರವ ಸು- ಮಾರ್ಗ ತೋರಿಸೆ ದುರ್ಗೆ ಜನನಿಯೆ 11 ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ ಹರಿಯ ರೂಪಾಂತರದಿ ತೃಣವನು ಧರೆಯೊಳಿರಿಸುತ ಬಲ ಪರೀಕ್ಷಿಸಿ ಸುರರು ಜಯಿಸದೆ ಮರುಳರಾಗಲು ಬರದೆ ಪರತತ್ವವನು ಕರುಣದಿ 12 ಕಿಂಕರ ಶಂಕರಿಯೆ | ಶತ್ರು ಭಯಂಕರೆ ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ ಪಂಕಜಾಂಬಕಿ ರಕ್ತನಯನ ಕ ಳಂಕಮುಖಿ ಅತ್ಯುಗ್ರವದನೆ ನಿ ಶ್ಯಂಕ ಬಿಂಕದಿ ಬಂದೆ ಕಾಲದಿ ಮಂಕುಹರೆ ಸಂಕಟದೆಯೆನಿಸುವೆ 13 ರಕ್ತಬೀಜಾಸುರನ | ರಕ್ತವನು ಹೀರಿದ ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ ಉಕ್ತಿಲಾಲಿಸಿ ಒತ್ತಿ ವಿಘ್ನವ ಇತ್ತು ಜ್ಞಾನ ವಿರಾಗ ಭಕ್ತಿಯ ಮುಕ್ತಪಾವನ ಮಾಡಿ ಸಂತತ ಮುಕ್ತಿಕಾಂತನ ಸ್ಮರಣೆ ಪಾಲಿಸಿ14 ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ ಮಹಿಪತಿಗಳಾದಿಯಲಿ ಸರ್ವರಿಂ ಅಹರಹರ್ ಸೇವೆಯನು ಕೊಳುತ ಮಹಿಮೆ ತೋರುತಿರುವೆ ಪ್ರತಿದಿನ ಅಹಹ ಬಣ್ಣಿಸಲೊರೆವೆ ನರರಿಗೆ 15 ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ ಖಂಡೆಯವನು ಝಳಪಿಸಿ | ಪುಂಡರನು ವಧಿಸಿ ಖಂಡ ಪರುಶುವಿನಂತೆ ಅದÀಟರ ರುಂಡಮಾಲೆಯ ಕೊಂಡು ಭೂತಗ- ಳ್ಹಿಂಡು ಡಿಂಡಿಮ ಡಂಡೆಣಿಸಲು ತಾಂಡವಾಡಿದ ಚಂಡಕಾಳಿಯೆ 16 ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ ಸುರರು | ಕುಂದುಭಿಯ ಹೊಡೆಯೆ ಡೊಂಬ ಕೊಳಾಸುರನ ಸೂಕರ ಡಿಂಬ ತಾಳುತ ಸೀಳಿ ದೈತ್ಯ ಕ- ದಂಬವೆಲ್ಲಕೆ ಕಂಭ ಸಂಭವ ನಿಂಬು ರೂಪವ ನಂಬಿ ತೋರಿದೆ 17 ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ ಪ್ರಕಟಳಾಗುತ ಖಳರ | ಕಟಕವನು ತರಿದು ಭಕುತವರ್ಗಕೆ ಬಂದ ಸಂಕಟ ನಿಕರ ಪರ್ವತ ವಜ್ರವೆನಿಸುತ ಮುಕುರದಂದದಿ ಪೊಳೆದು ಪೊರೆಯುವೆ ವಿಕಟನಾಮದಿ ನಿಕಟದಿರುತ 18 ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ ಆನತಿಸಿದವರಿಗೆ | ಪ್ರಸನ್ನಳಾಗಿ ಮಾನ ಸತಿಸುತ ಧ್ಯಾನ ಧನಮನೆ ಜ್ಞಾನ ಭಕ್ತಿ ವಿರಕ್ತಿ ಮುಂತವ ದೇನು ಬೇಡಲು ಕೊಡುವೆ ನಿನ್ನ ಸಮಾನರಾರನು ಕಾಣೆ ಜಗದೊಳು 19 ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು ರಂಗುಮಾಣಿಕದ್ಹಸೆಯ ಪೀಠದಿ ಮಂಗಳದ್ರವ್ಯಗಳಿಂದೊಪ್ಪುತ ಮಂಗಳೇಕ್ಷಣದಿಂದ ಕುಳಿತಿಹೆ 20 ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ- ಗಾಧ ಗ್ರಂಥಗಳನು | ನಿಜಪತಿಯ ಮುಖದಿ ಸಾಧಿಸಿದೆ ಸಜ್ಜನರಿಗೋಸುಗ ಬೋಧಿಸಿದೆ ಗುಹ ಗಣಪ ಮುಖರಿಗೆ ಆದಿದೇವನ ಒಲಿಮೆ ಪಡೆಯಲು ಹಾದಿ ತೋರಿದೆ ಹೇ ದಯಾನಿಧೆ 21 ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ ಶಿಷ್ಟ ನಾಲ್ಮಡಿ ಕೃಷ್ಣ ಭೂಪನ ಇಷ್ಟದೇವತೆಯಾಗಿ ನೆಟ್ಟನೆ ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ ಕೊಟ್ಟಭೀಷ್ಟವ 22 ಸಂತರ ನುಡಿಗಳು | ನಾನಾಂತು ನಿನ್ನಯ ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು ಇಂತು ತುತಿಸಿದೆನರಿಯೆನನ್ಯಯಥ ಪಂಥವನು ಎನ್ನಂತರಂಗವ ನಂತು ತಿಳಿದಿಹೆ ಜನನಿ ಕೊಡು ಶ್ರೀ- ಕಾಂತ ಭಕ್ತಿಯ ಮುಂತೆ ಕರುಣದಿ 23
--------------
ಲಕ್ಷ್ಮೀನಾರಯಣರಾಯರು
ಮುನಿದ ಭಾವುನದಂಡು ಕಂಡು ನಿನ್ನ ಮನೆಮಾರಿ ನಾಸೆಯನು ನೀಡಾಡು ಪ ಲಂಬಾಣಿ ಜನ ಬಂತು ನೋಡು ನೀನು ದಿಬ್ಬವ ಹತ್ತಿ ಕಾನಿಗೆ ಓಡು ತಂಬಿಗೆಗಳ ಜೊತೆಮಾಡು ತಲೆ ಚಂಬಿಗೆ ಬಂತು ಮಾನವರಿಗೆ ಕೇಡು 1 ಕಂಡ ಕಂಡವರನು ಹಿಡಿದು ಕರ ಚೆಂಡಾಡಿ ಹೊಯ್ದು ಕೆಡಹಿ ಮೆಟ್ಟಿ ತಿವಿದು ಖಂಡೆಯದೊಳು ಘಾಯ ಗರೆದು ಮೈ ರೊಂಡಿ ಮುರಿದು ಗಂಟಿಗೆ ನೀರನೆರೆದು 2 ಕತ್ತಿಯ ಕಿತ್ತು ಕೈಯೆತ್ತು ಗೋಣ ಕುತ್ತಿ ಹಸ್ತಕೆ ಹಸ್ತವನು ತರಿದೊತ್ತಿ ರಕ್ತ ಮಾಂಸದ ಕರುಳೊತ್ತಿ ಹಾ ರಿತು ಗೂಡಿಂದ ಜೀವನು ಕಣ್ಣ ಕುತ್ತಿ 3 ಹಂತಕಾರಿಗಳೊಂದೆ ರೂಪು ಪಾಪ ವಂತರಿಗಿನಜ ತೋರಿಸುವ ವಿದೂಪ ನರ ಕಂತೆಯ ಬಿಡದೆ ಸುಲಿಯಲಿಕೆ ಸಾಪು 4 ಶೀಲವಂತರು ಶೀಲಗೆಟ್ಟರು ದುಃ ಶೀಲರು ಶೀಲದಾಚಾರವ ಸೊಟ್ಟರು ಕೀಳು ಮೇಲೊಂದಾಯಿತಷ್ಟು ಲಕ್ಷ್ಮೀ ಲೋಲ ಮಾಡಿಸುವ ಕುಚೇಷ್ಟೆ ಇವಿಷ್ಟು 5
--------------
ಕವಿ ಪರಮದೇವದಾಸರು
ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ಪಾಪಿಗೇತಕೆ ಪರಮಾತ್ಮಬೋಧ <?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕೋಪಿಗೇತಕೆ ಸುಗುಣ - ಶಾಂತ ಬುದ್ಧಿ ಪ.ಹಂದಿಗೆ ಗಂಧವೇಕೆ ಅಂಧಕೆ ಕನ್ನಡಿಯೇಕೆಮಂದಮತಿ ಮನುಜರಿಗೆ ಮಂತ್ರವೇಕೆತಂದೆ - ತಾಯಂದಿರಿಗೆಕುಂದು ತರುವ ಮಗಳೇಕೆನಿಂದುವಾದಿಸುವಂಥ ಸತಿಯು ತಾನೇಕೆ1ಕತ್ತೆಗಮ್ರತವೇಕೆ ಎತ್ತಿಗೆ ಕರೆಹವೇಕೆತೊತ್ತಿಗೆ ಛತ್ರದ ನೆರಳೇತಕೆಕುತ್ತಿಗೆ ಕೊಯ್ಯುವನ ಸೊಗಸು ಮಾತುಗಳೇಕೆಸತ್ಯವಿಲ್ಲದೆ ನುಡಿವ ಯೋಗಿಯೇಕೆ 2ಷಂಡಗೆ ಹೆಂಡತಿಯೇಕೆ ತೊಂಡಿರಿಗೆ ಖಂಡೆಯುವೇಕೆಮುಂಡೆಮೋಳಿಗೆ ಮುತ್ತಿನ ದಂಡೆಯೇಕೆಮಂಡಳದೊಳಗೆ ಶ್ರೀ ಪುರಂದರವಿಠಲನಕಂಡು ಭಜಿಸದ ಮನುಜರಿದ್ದೇತಕೆ 3
--------------
ಪುರಂದರದಾಸರು