ಪಾರ್ವತೀದೇವಿಯ ಸ್ತುತಿ
(ಮಂಗಳೂರು ಮಂಗಳಾದೇವಿ)
ಮಹಾಮಾಯೆ
ದಯದೋರೆಲೆ ತಾಯೆ ಪ.
ಸದರದೊಳೆಬ್ಬಿಸುತಿದಿರಾದ
ಮದನಾಂಬಾ
ಮುದ ದಾಯಿ
ಶುಭಪದದಾಯಿ 1
ದೇವತೆಗಳ ಸೇರಿರುವಾ
ಮನೋಹರ ತನುವಾಗಿ
ನಿಕರ ಮಹಿಷಾಸುರನಾ
ಮೃಗಪತಿಗಮನಾ 2
ಖಂಡ್ಯಧಾರೆಯೊಳ್ದಿಂಡರಿದೂ
ಖಂಡಿಸುತಾ
ರಣ ಮಂಡಲದಿ
ಬ್ರಹ್ಮಾಂಡ ನಿದಾನಿ 3
ತ್ರಿಗುಣಜಮಲವು
ದಾನವಾರಿಗಳ ಮಾನಿಸಿ ದಿತಿಜರ ಹಾನಿಗೊಳಿಸುವದು
ಹರಿಪರವು
ಮಹಭರವು
ಮನದಿರವೂ 4
ರಕ್ಷಿಸು ಪುರುಕರುಣಿ
ಕ್ಷಮೆಯಿಂದಂ ಭರಣಿ
ಖೂಳ ವೈರಿಗಳನೇಳದಂತೆ ಪಾತಾಳಕೆ ಕೆಡಹಿಸು ಮಮ ಜನನಿನೀಲ ಮೇಘ ನಿಭ ವೆಂಕಟರಾಜನ ಲೋಲಕಟಾಕ್ಷಸದಾಕರುಣಿ 5