ಆವಾವಯ್ಯ ಇಹದ ಕುಲಗಳುಆವಾವಯ್ಯ ಇಹದ ಕುಲಗಳುಅಷ್ಟಮದಗಳನ್ನೇ ಗೆದ್ದುಭಾವಶುದ್ಧಿಯಿಂದ ಮುಕ್ತಿಭಾಮಿನಿಯನ್ನು ಸೇರಿದವಗೆ ಪ
ಮೂರನಳಿದು ಏಳ ಕಳೆದು ಮೂರ ಖಂಡಿಸಿಏಳ ಮುರಿದು ಆರ ಮೂರ ಮೀರಿದವಗೆ 1
ನಾಕ ಕಳೆದು ಎರಡ ಮರೆತು ನಾಲ್ಕು ಮರೆತು ಎರಡ ತಿಳಿದುನಾಲ್ಕು ಎಂಟು ಎಂಬ ಜರೆದು ನಾಲ್ಕರಲ್ಲಿ ನಿಂತವನೆ2
ಹತ್ತನಟ್ಟಿ ನವವ ಮೆಟ್ಟಿ ಹರಿಯ ಕೋಟಿ ಕಿರಣವೆಂಬತತ್ವ ಚಿದಾನಂದ ತಾನೆ ತಾನೆ ಆದವಗೆ 3