ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ
ಕಳೆಕಳೆ ರೂಪ ನೋಡುವೆ ಮುಕುಂದ ಪ.
ಭಕ್ತರ ಭಯ ನಿವಾರಣನೆ
ಭಕ್ತಿಲಿ ಕರೆವೆ ಗೋವಿಂದ ನಿನ್ನನೆ
ಭಕ್ತವತ್ಸಲ ನೀನಲ್ಲವೇ ಸ
ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1
ಶ್ರೀ ತುಳಸಿಯ ವನಮಾಲ
ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ
ಶ್ರೀಶನೆ ಬಯಸುವೆ ದೇವ
ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2
ಒಮ್ಮೆಯಾದರೂ ತೋರೊ ರೂಪ ಎನ್ನ
ಕರ್ಮ ಖಂಡನವಹ ತೆರೆದೊಳು ಶ್ರೀಪ
ಬೊಮ್ಮನೈಯ್ಯ ನಿನ್ನ ನೋಡ್ವೆ
ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3