ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ ಪ ಪುರುಹೂತ ಪ್ರಮುಖ ಸುರ ವ್ರಾತವಿನುತ ಶಿರಿನಾಥನ ನಿನ್ನೊಳು ಪ್ರೀತಿಲಿ ತೋರಿಸಿ ನೀತ ಜ್ಞಾನವಿತ್ತು ಮಾತು ಲಾಲಿಸೊ ಎನ್ನ ಮಾತೆಯ ತೆರದಿ ಅ.ಪ ಪ್ರಾಣಾದಿ ಪಂಚರೂಪಕನೆ ಜಗ ತ್ರಾಣ ಭಾವಿ ವಿರಿಂಚನೆ ಮಾಣದೆ ತವ ರೂಪ ಕಾಣಿಸೊ ಮನದಲ್ಲಿ ಪಾಣಿಯುಗವ ಮುಗಿವೆ ಕ್ಷೀಣಪಾಪನ ಮಾಡೊ ರೇಣು ಭಜನೆಯ ಗೈದು ಸರ್ವದ ವೀಣೆ ಪಿಡಿದತಿ ಗಾನ ಮಾಡುತ ಜಾಣನೆನಿಸಿ ಕ್ಷೋಣಿ ಪಾಲಿಪೆ 1 ಮೂಲರಾಮನ ಪಾದಕಮಲಾ ಯುಗಕೆ ನೀಲಷಟ್ಟದ ವರಬಾಲಾ ವಾಲಿಯಾನುಜ ಕಪಿ ಜಾಲಪಾಲಕನನ್ನು ಆಲಿಸಿ ಭೂಮಿಜ ಲೋಲರಾಮನ ಮೈತ್ರ್ಯ ಪಾಲಿಸೀ ಶರಧಿಯನು ನೀನೆ ಲೀಲೆಯಿಂದಲಿ ದಾಟಿ ಸೀತೆಗೆ ಬಾಲರೂಪದಿ ರಾಮವಾರ್ತೆಂiÀi ಪೇಳಿ ವನವನು ಹಾಳುಮಾಡಿದಿ 2 ಪಾತಕÀ ರಾವಣ ಮಗನಾ ರಣದಿ ಘಾತಿಸಿ ಯಮಗಿತ್ತವನಾ ತಾತಗುರು ಜಗನ್ನಾಥವಿಠಲ ನಿಜ ಪೋತನಾಗಿ ಜಗದಿ ಖÁ್ಯತಿಯ ಪಡೆದಿ ರೀತಿ ಏನಿದು ನಿನ್ನ ಪದಯುಗ ದೂತನಾಲ್ಪರಿವ ಮಾತನು ಯಾತಕೇ ಕಿವಿ ಕೇಳದೋ ಕಪಿ ನಾಥ ಪಾಲಿಸೊ ಎನ್ನ ತಾತಾ 3
--------------
ಗುರುಜಗನ್ನಾಥದಾಸರು