ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ ಪ ಸೃಷ್ಟಿವಂದಿತ ಪಾದಪದುಮ ಶ್ರೀ ಹರಿಯೇ ಅ.ಪ. ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪಚಿನ್ನದ ಹರಿವಾಣದಲಿ ಭೋಜನಘನ್ನ ಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ-ದನ್ನ ಕಾಣದೆ ಬಾಯ್ಬಿಡಿಸುವೆಯೋ ಹರಿಯೇ 1 ಕೆÀಂಪಿಲಿ ಪೊಳೆವ ಪೀತಾಂಬರ ಉಡಿಸುವಿಸೊಂಪಿನಂಚಿನ ಶಾಲು ಹೊದಿಸುವಿಯೋಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆಕಪರ್ದಕ ಕೌಪೀನವು ದೊರೆಯದೋ ಹರಿಯೇ 2 ಚಂದ್ರಶಾಲೆಯಲ್ಲಿ ಚಂದ್ರಕಿರಣದಂತೊಪ್ಪುವಚಂದದ ಮಂಚದೊಳ್ಮಲಗಿಸುವಿಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮಮಂದಿರದೊಳು ತೋಳ್ತಲಗಿಂಬು ಹರಿಯೇ 3 ನರಯಾನದೊಳು ಕ್ಷಣ ನರವರನೆನಿಸುವಿವರಛತ್ರ ಚಾಮರ ಹಾಕಿಸುವಿಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆಚರಣರಕ್ಷೆಯು ದೊರೆಯದು ಶ್ರೀಹರಿಯೇ 4 ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರಸಂಗವಿರಲಿ ದುಷ್ಟರ ಸಂಗ ಬ್ಯಾಡಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ 5
--------------
ಶ್ರೀಪಾದರಾಜರು