ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದನ ತೂಗಿದಳು ಯಶೋದೆ ಕಂದನ ತೂಗಿದಳು ಪ ಇಂದಿರಾರಮಣನ ಅಂದವದನದಲಿ ಮಂದಹಾಸವ ನೋಡಿ ನಂದದಿ ಹಿಗ್ಗುತ ಅ.ಪ ತಾಮರಸಾಕ್ಷನ ಕೋಮಲಾಂಗವ ನೋಡಿ ಆ ಮಹಿಳೆಯು ಬಲು ಪ್ರೇಮಭರಿತಳಾಗಿ 1 ಜಗಜಗಿಸುವ ನವಮಣಿಯ ತೊಟ್ಟಿಲಲಿ ಜಗದೀಶನು ತನ್ನ ಮಗನೆಂದು ತಿಳಿಯುತ 2 ಪದಮನಾಭನನು ಹೃದಯದಿ ನೆನೆಯುತ ಮದದಿಂದಲಿ ದಿವ್ಯ ಪದಗಳ ಪಾಡುತ 3 ಲಕ್ಷ್ಮೀಶನು ಇತ್ತ ಪುತ್ರಭಿಕ್ಷೆಯೆಂದು ಅಕ್ಷಿಗಳಲಿ ಸುಖಬಾಷ್ಪವ ಸುರಿಸುತ 4 ತನ್ನ ಸೌಭಾಗ್ಯವು ಅನ್ಯರಿಗಾವುದೆಂದು ಸತಿ 5
--------------
ವಿದ್ಯಾಪ್ರಸನ್ನತೀರ್ಥರು
ಕೋಲು ಕೋಲೆ ಕೋಲು ಕೋಲನ್ನ ಕೋಲೆ ಮೂಲೆ ಮೂಲೆಯ ಹೊಕ್ಕು ಅಡಗಿರ್ದ ಕೋಲೆ ಪ ಕೆಂಜಿಗ ಉಡನು ಬಂದು ಮುಂಚಿಕವಲ ಕೊಟ್ಟು ಅಂಚೆಡೆಗಳನೆಲ್ಲ ಸುಲಿದರ್ದ ಕೋಲೆ 1 ಆನೆ ಕುದುರೆಯಿಲ್ಲ ಸೇನೆ ಬಹಳವಿಲ್ಲ ಏನೆಂದು ಬೆಸಗೊಂಬರಿಲ್ಲದ ಕೋಲೆ 2 ಮುನಿಯ ಭಾವನದಂಡು ಮನೆ ಮನೆಗಳ ಹೊಕ್ಕು ಧನಕನಕಂಗಳ ಸುಲಿದಿರ್ದ ಕೋಲೆ 3 ಮಕ್ಕಳು ಮರಿಗಳು ವೃದ್ಧ ಜವ್ವನರನ್ನು ದಿಕ್ಕುದಿಕ್ಕಿನ ಕಾನಿಗಟ್ಟಿದ ಕೋಲೆ 4 ಜನರನ್ನು ತರಿದು ಸುಲಿದು ಕರುಗಳ ತರುಗಳ ಹಿಂಡನು ಹೊಡೆದಿರ್ದ ಕೋಲೆ 5 ಕೊಟ್ಟ ಕಣ್ಣಿಯನೆಲ್ಲ ಕಿತ್ತೊಯ್ದು ಸೂಸ್ಯಾನು ಪಟ್ಟೆ ಪೀತಾಂಬರಗಳ ನೊಯ್ದ ಕೋಲೆ 6 ಕಾಣಿ ಜೀವರನೆಲ್ಲ ಹಾಡಿ ಹಿಳಿದು ಹಿಪ್ಪೆಹೀರಿದ ಕೋಲೆ 7 ಇಟ್ಟವಡವೆ ವಸ್ತು ಇಟ್ಟಲ್ಲಿ ಇಲ್ಲದೆ ಕೆಟ್ಟು ಜನರು ಹೊಟ್ಟೆ ಹೊಡಕೊಂಬರು 8 ಉಟ್ಟು ತೊಟ್ಟುದನೆಲ್ಲ ಸುಲಿದುಬೆತ್ತಲೆ ಮಾಡಿ ಬಿಟ್ಟು ಮನೆಗೆ ಬೆಂಕಿ ಕೊಟ್ಹೋದ ಕೊಲೆ 9 ಕೆಲರ ತಲೆಯ ಕುಟ್ಟಿ ಕೆಲರು ಸುಲಿದು ಬಿಟ್ಟು ಕೆಲರಿಗೆ ಮುರುವಾಳ ವಿಕ್ಕಿದ ಕೋಲೆ 10 ಅಟ್ಟಡಿಗೆಯ ನುಂಡು ಇಟ್ಟೊಡವೆಯ ಕೊಂಡು ಕುಟ್ಟಿ ಖಂಡವ ಚೂರು ಮಾಡಿದ ಕೋಲೆ 11 ಉಪ್ಪಿನಕಾಯಿ ಕೊಡ ತುಪ್ಪ ತೈಲದ ಪಾತ್ರೆ ಜಪ್ಪಿ ವಡೆದು ನೆಲ ಕುಣಿಸಿದ ಕೋಲೆ 12 ಚಿನ್ನ ಚಿಗುರು ಬೆಳ್ಳಿ ಕಂಚು ತಾಮ್ರಗಳನ್ನು ನುಣ್ಣಗೆ ಹೊರೆಗಟ್ಟಿ ಹೊತ್ತೊಯ್ದ ಕೋಲೆ 13 ಉಣ್ಣ ಉಡಲಿಕ್ಕಿಲ್ಲ ಹೊನ್ನು ಕೈಯೊಳಗಿಲ್ಲ ಎಣ್ಣೆ ಬೆಣ್ಣೆಗೆ ಬಾಲ ನಳಿಸಿದ ಕೋಲೆ 14 ಮುಂಜ ಮುಚ್ಚಲಿಕಿಲ್ಲ ಗಂಜಿಗೆ ಲವಣಿಲ್ಲ ಸಂಜೆ ದೀಪಕೆ ತೈಲವಿಲ್ಲದೆ ಕೋಲೆ 15 ಅತಿಥಿಗಿಕ್ಕಲಿಲ್ಲ ಪ್ರತಿಮೆ ಪೂಜೆಗಳಿಲ್ಲ ವ್ರತನೇಮಗಳನು ಕಟ್ಟಿರಿಸಿದ ಕೋಲೆ 16 ತೆಪಕಾರನ ಪದಾರ ಕಾಲಟದೊಳು ಜಪ ತಪಗಳಿಲ್ಲದೆ ಕೊಳ ತನ್ನಿಸಿದ ಕೋಲೆ 17 ನಗರದ ಕೋಲೆದ್ದು ತೆಪರಾರ ಮೇಲ್ಬಿದ್ದು ಜಿಗಿದು ಹಿಂದಕೆ ಜಾರಿ ಜುಣುಗಿದ ಕೋಲೆ 18 ಹಿಂದಣ ಬೆಳೆಮಣ್ಣ ಕೂಡಿತು ಕುಳಿಯಲಿ ಮುಂದಣ ದುದುರಿತು ಹಣ್ಣಾಗಿ ಕೋಲೆ 19 ಕೆಳಗು ಮೇಲಕು ದಂಡು ಬಳಪ್ರಾಂತ ದೊಳುದಂಡು ನೆಲೆಗೊಂಡು ಜನರು ತಲ್ಲಣಿಪರು ಕೋಲೆ 20 ಸುಬ್ಬರಾಯನ ವೀರಭದ್ರನ ಪ್ರಸಾದ ಸರ್ವಜನರ ಬಾಯ್ಗೆ ಬಿತ್ತಣ್ಣ ಕೋಲೆ 21 ನರರೂಪ ಧರಿಸಿ ಲಕ್ಷ್ಮೀಶನು ಹೊಯ್ಸೂವ ಕೋಲೆ 22
--------------
ಕವಿ ಪರಮದೇವದಾಸರು
ಮಾಡಿದರಿಲ್ಲವೋ ಪ ಆಸೆ ಮಾಡಿದರಿಲ್ಲ ದೇಶ ತಿರುಗಿದರಿಲ್ಲ ಘಾಸಿ ಮಾಡಿದರಿಲ್ಲ 1 ಮೊಟ್ಟೆಯನು ಹೊತ್ತರಿಲ್ಲ ಕಷ್ಟ ಮಾಡಿದರಿಲ್ಲ ಘಟ್ಟ ಬೆಟ್ಟವ ಹತ್ತಿ ಕುಟ್ಟಿ ಕೊಂಡರು ಇಲ್ಲ 2 ಟೊಂಕ ಕಟ್ಟಿದರಿಲ್ಲ ಲಂಕೆಗೆ ಹೋದರೂ ಇಲ್ಲ ಬೆಂಕಿ ಬಿಸಿಲೊಳು ತಿರುಗಿ ಮಂಕು ಮರುಳಾದರಿಲ್ಲ 3 ಪರ ಊರಿಗೆ ಹೋದರಿಲ್ಲ ಆರಿಗ್ಹೇಳಿದರಿಲ್ಲವಾರಸೇರಿದರಿಲ್ಲ 4 ವಾತಸುತನ ಕೋಣೆ ಲಕ್ಷ್ಮೀಶನು ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ 5
--------------
ಕವಿ ಪರಮದೇವದಾಸರು
ಸಂಸಾರ ಸುಖವಿಲ್ಲ ನಾ ಹಿಂಸೆಯ ತಾಳಲಾರೆ ಪ ಮಾತೆಯ ಮಾಂಸದ ಹೇಸಿಗೆ ಕೋಶದೊಳ್ ಮಾಸ ಒಂಭತ್ತನು ಕ್ಲೇಶದಿಂದ ತಳ್ಳಿದೆ ಈಶ ಲಕ್ಷ್ಮೀಶನು ಕೋಪದಿಂದ ಬೀಸಲು ಕೂಸಾಗಿ ಭೂಮಿಗೆ ವಾಸಕ್ಕೆ ಬಂದೆನು 1 ನಡೆ ನುಡಿಯ ಕಲಿಯುತಲಿ ಹರುಷದಲಿ ಕುಣಿಯುತಲಿ ಹುಡುಗತನ ಕಳೆಯುತಿರೆ ಹರುಷಗಳು ತೊಲಗಿದವು ದುಡಿಕಿನಲಿ ಭ್ರಮಿಸಿದೆನು ಮಡದಿಯಳ ಸಡಗರಕೆ ಭವ ಕಡಲೊಳಗೆ ಮುಳುಗಿ 2 ಕಡುಬಡತನ ಕೊರೆಯುತಲಿದೆ ಕಿರಿಕಿರಿಗಳು ಉರಿಸುತಲಿವೆ ತನುಮನಗಳು ಜರಿಯುತಲಿವೆ ಅಣಕಿಸುವರು ನಿಜ ಜನಗಳು ಪರಮ ಪುರುಷ ಸಿರಿಯರಸನೆ ಮರೆಯದಿರುವೆ ಉಪಕೃತಿಗಳ ದಡಕೆಳೆಯೊ ಪ್ರಸನ್ನ ಹರೇ 3
--------------
ವಿದ್ಯಾಪ್ರಸನ್ನತೀರ್ಥರು
ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ ಪ ದೃಢಭಕ್ತ ಸಮೂಹವ ಸಿರಿ ಯೊಡೆಯನು ಕೈಬಿಡನೆಂದು ಅ.ಪ ವಿಧಿಸೃಷ್ಟಿಯೊಳಿಲ್ಲದರೂ- ಪದಿ ಬಂದು ನಖದಿ ಅಸುರನ ಉದರ ಬಗೆದು ಕರುಳ ತೆಗೆದು ಮುದದಿ ಗಳದಿ ಧರಿಸಿದನೆಂದು 1 ಪರರು ತನ್ನ ಹಿಂಸೆಗೈ ದರು ಸಹಿಸಿ ಸಮಾಧಾನದಿ ಸಿರಿಯರಸನ ನೆನೆವಗೆ ಭಯ ವಿರದಿರದಿರದಿರದೆಂದು 2 ದ್ವೇಷಿಗಳನುದಿನ ಯೋಚಿಪ ಮೋಸಗಳನು ತಿಳಿಯುತ ಲ- ಕ್ಷ್ಮೀಶನು ಪರಿಹರಿಸಿ ತನ್ನ ದಾಸರಿಗೊಶವಾಗುವನೆಂದು 3 ತಿಳಿಯಗೊಡನು ಸತ್ಯವಿದೆಂದು 4 ಕಾಮಾದಿಗಳನು ಗೆದ್ದು ಮ- ಹಾಮಹಿಮರೆನಿಸುವರ ಯೋಗ- ಕ್ಷೇಮವನ್ನು ವಹಿಸಿಹ ಗುರು- ರಾಮವಿಠಲ ನರಹರಿಯೆಂದು 5
--------------
ಗುರುರಾಮವಿಠಲ