ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಬಂಧನ ಹರಿಯದು ಕರುಣಕಟಾಕ್ಷಗಳಿಲ್ಲದೆ ಪ ಮಾಟಮರವೆ ಯಂತ್ರ ಮಂತ್ರವು ಪರಸತಿ ನೋಟವು ದಿವಾರಾತ್ರಿ ದುರ್ಜನರೊಡನಾಟ ಕಾಲವಕಳೆವ ಕಾಟಕರಿಗೆ 1 ಪಾತಕವ ಮಾಳ್ವರಿಗೆ ನಿತ್ಯ ಕಪಟ ಕಲ್ಮಷರಿಗೆ 2 ಬಡಲಿದು ನಿಶ್ಚಯವಲ್ಲ ನೀರಿನಗುಳ್ಳೆ ಒಡೆದಂತೆ ತನುವಿದೆಂದರಿತು ಸತ್ಕರ್ಮದಿ ನಡೆದು ಶ್ರೀ ಹರಿಯ ಭೀಮನಕ್ಷೋಣೆ ಲಕ್ಷ್ಮೀಶ ನುಳಿದರ್ಗೆ 3
--------------
ಕವಿ ಪರಮದೇವದಾಸರು
ಲೋಕನೀತಿಯ ಪದಗಳು ಚರಣಕಮಲ ಭಜಿಸೋ ಗೋಪಾಲಕೃಷ್ಣನ ಪ ತರುಣಿಯರ ಮನವನು ಮರುಳುಗೊಳಿಸಿದ ಪರಮ ಸುಂದರನ ಧರಿಯೊಳಗೆ ಭಾಸ್ಕರಪುರ ಸುಮಂದಿರನೆಂದು ಕರೆಸುವನ ಕರಿರಾಜವರದನ ಅ.ಪ ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ ವೇಣುಗೋಪಾಲನ 1 ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ ಸಿಂದೂರವರದನ 2 ಕೃಷ್ಣಾ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ ಸೃಷ್ಟೀಶನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಠಗರಿಯುವನಾ ಪರಮೇಷ್ಠಿ ಜನಕನ 3 ಗರಿಯೆ ಗೋಗಳನಾ ಗಿರಿಯ ಧರಿಸಿದನಾ ಇದ ಕೃಷ್ಣನ್ನ ಪೂಜಿಸಲು ಒಲಿದನ 4 ಶರಣಾಗತ ಜನರ ಪೊರೆಯಲು ಬಂದುನಿಂತಿಹನಾ ಕಾ ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು ತುರುಪಾಲ ಕೃಷ್ಣನ 5
--------------
ಕಾರ್ಪರ ನರಹರಿದಾಸರು
ಸಿಕ್ಕ ಸಮಯ ನಿಜ ತಿಳಿಯದಲೆ ಬರಿ ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು ಬಾಳುವೆ ಧನಸಿರಿ ನಿನಗಿಲ್ಲ ನಾಳೆ ಬಂದೊದಗಲು ಯಮಶೂಲ ಹಿಂ ಬಾಲಿಸಿ ನಿನಗೊಂದು ಬರೋದಿಲ್ಲ 1 ಬಂಧುರ ಬುವಿಯಧಿಕಾರ ನಿಖಿಲ ಮಹ ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ ತಂದೆ ತಾಯಿ ಬಂಧು ಬಳಗೆಲ್ಲ ನಿನ ಗೊಂದುಕೊಂದು ಸಂಬಂಧವಿಲ್ಲ 2 ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ ಮತಿಗೆಟ್ಟು ಪೊಂದದಿರತಿ ದು:ಖ ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3 ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ ಆನೆ ಕುದುರೆ ಒಂಟೆ ನಿನ್ನದಲ್ಲ ಕಾಣುವುದೆಲ್ಲ ಮಾಯಭವಜಾಲ ಮತ್ತು ಮನುಷ್ಯಜನುಮ ಸೀಗೋದಲ್ಲ 4 ನಾನು ನೀನೆಂಬುವ ದುಷ್ಟಮದ ಸುಟ್ಟು ಜ್ಞಾನದೊಡನೆ ಗೆಲಿ ಭವಬಾಧೆ ಧ್ಯಾನದಾಯಕ ಶ್ರೀರಾಮಪಾದ ನಿಜ ಧ್ಯಾನವಿಡಿದು ಪಿಡಿ ಮುಕ್ತಿಪದ 5
--------------
ರಾಮದಾಸರು