ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬನ್ನಿ ಮಹಂಕಾಳಿ ಜಯವ ನೀಡಮ್ಮ ಮನ್ನಿಸಿ ಬಾಲಗೆ ಪ ನಿನ್ನ ನಂಬಿಕೊಂಡು ಕೆನ್ನೆಯೋಳ್ಮುಡಿವರ ಬನ್ನ ಕಳೆದು ಜಯವನ್ನು ಕೊಟ್ಟು ನೀ ಭಿನ್ನವಿಲ್ಲದೆ ಮನ್ನಿಸಿ ಸಲಹು ಪನ್ನಂಗವೇಣಿಯೆ ಉನ್ನತ ಕರುಣಿ 1 ಪರಮ ಪವಿತ್ರಳೆಂದು ಪರಮ ಪ್ರೀತಿಯಿಂದ ಹರನು ಬಿಡದೆ ನಿನ್ನ ಶಿರದಿ ಧರಿಸಿಕೊಂಬ ಪರಮಮಹಿಮ ನಿನ್ನನರಿನು ಪೇಳುವೆನಾ ತರಳನ ಮೊರೆ ಕೇಳೆ ಕರುಣಿ ಶುಭಕರಿ2 ನೇಮದಿ ಭಜಿಪೆ ನಿಸ್ಸೀಮೆ ನಿರಾಮಯೆ ಕ್ಷೇಮಶರಧಿ ತ್ರಿಭೂಮಿಜಯಂಕಾರಿ ಈ ಮಹಭವನಿಧಿ ಕ್ಷೇಮದಿ ಗೆಲಿಸು ಶ್ರೀ ರಾಮನಾಮ ಪ್ರಿಯೆ ಕೋಮಲಹೃದಯೆ 3
--------------
ರಾಮದಾಸರು