ಭಾಗ್ಯವಂತರಾರು ಪೇಳಿರೈ ಸದ್ಭಕ್ತರೆಲ್ಲರು ಪ
ಭಾಗ್ಯವೊ ವೈರಾಗ್ಯವೊ ನಿಮ್ಮ
ಯೋಗ್ಯತಾನುಸಾರ ಶ್ಲಾಘ್ಯವೆಂದರಿತವರು ಅ.ಪ
ಧನಿಕನು ಪರರನು ಗಣಿಸದೆ ತ-
ಹಣವುಯಿಲ್ಲದ ಸುಗುಣವಂತನು ತಾ
ವನಜಾಕ್ಷನನೆನದೂ ಅನುದಿನದಿ ಸುಖಿಸುವನು1
ಭಾಗವತ ಜನ ವಿ-
ರಾಗ ವೈಭೋಗದಿ ತ್ಯಾಗಿಗಳೆನಿಪರು 2
ತಾಮನೆಯೆನಿಸಿ ಧಾಮರಾಗಿಹರ್
ಕ್ಷೇಮವುಳ್ಳ ಸಾಧುಗಳು ನಿರತ ಗುರು-
ರಾಮವಿಠಲನ ನಿಷ್ಕಾಮದಿ ಭಜಿಸುವರು 3