ಗೋಪಾಲ ಪಾಲಿಸೊ
ನಿನ್ನ ಪಾದಸೇವಕನಿವನೆಂದು ನೀ ಭಾವಿಸಿ
ಗೋಪಾಲ ಪಾಲಿಸೊ ಪ
ನಾರಿಜನರುಟ್ಟ ಸೀರೆ ಸೆಳೆದು ತಾ
ಭಾರಿ ಮರವನ್ನೇರಿ ವಿನೋದವ
ತೋರಿದ ಸುರರಿಪು ವೈರಿಯೇ ಎನ್ನಯ
ಕೋರಿಕೆ ನಡಸಲಿನ್ಯಾರಿಗೆ ಬೇಡಲೊ 1
ತುಂಗಫಣಿಫಣ ಶೃಂಗದೊಳು ಚರ
ಣಂಗಳ ಕುಣಿಸು ಭುಜಂಗಮವರನಿಗೆ
ಭಂಗಪಡಿಸಿ ಕೃಪಾಪಾಂಗದಿ ಸಲಹಿದ
ಮಂಗಳಮಹಿಮ ರಥಾಂಗಧರ ಬಾಲ 2
ಬಂಧು ಬಳಗ ನೀನೆಂದು ತಿಳಿದು ಮ
ತ್ತೊಂದನೆಣಿಸದೆ ಇಂದಿರಾರಮಣನೆ
ಎಂದೆಂದಿಗೂ ಸಲಹೆಂದು ನಾ ಬೇಡುವೆ
ಸಿರಿ 3
ಖಿನ್ನ ನಿಜ ಜನರನ್ನು ಸಲಹುವ
ಪನ್ನಗಶಯನ ಪ್ರಸನ್ನ ಹೃದಯನಾಗಿ
ಎನ್ನ ಮನೋರಥವ ಪೂರೈಸುವ
ರನ್ಯರು ಯಾರಯ್ಯ ಚಿನ್ಮಯ ಮೂರುತಿ 4
ಕಾಮಜನಕನೆ ನಾಮಗಿರಿ ಸಿರಿ
ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ
ಕಾಮಧೇನು ಚಿಂತಾಮಣಿ ಎನ್ನಯೋಗ
ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ 5