ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ ಶಂಭೋ ಪಾಲಿಸಭವ ಧೀರ ಶ್ರೀಹರಿಸಖನೆ ಪರಶಿವ ಪ ಮೂರು ಪುರವ ಗೆಲಿದ ಮಹಿಮ ಮೂರು ಕರಣ ಶುದ್ಧನೆನಿಸಿ ಮೂರು ಗುಣಗಳ ಹಾರೈಸೆನಗೆ ಪಾದ ಭಕ್ತಿ 1 ಪಂಚಮುಖನೆ ಪದಕೆ ನಮಿಪೆ ಪಂಚಕ್ಲೇಶಗಳಳಿದು ಎನ್ನ ಪಂಚಕತ್ವ ನೀಗಿಸಿ ವಿ ರಂಚಿಪಿತನ ದಿವ್ಯಧ್ಯಾನ 2 ಕಾಮದಹನ ನೀಲಕಂಠ ಸ್ವಾಮಿ ನಿಮ್ಮನು ನಂಬಿ ಬೇಡ್ವೆ ಕ್ಷೇಮವಿತ್ತು ಪ್ರೇಮದೆನಗೆ ಭೂಮಿಪತಿ ಶ್ರೀರಾಮನೊಲುಮೆ 3
--------------
ರಾಮದಾಸರು
ಮನ್ಮಥನಯ್ಯನ ಮನದಲಿ ಸ್ಮರಿಸಿರೊ ಮನ್ಮಥ ನಾಮ ಸಂವತ್ಸರದಿ ಪ ಸುಮ್ಮನೆ ಕಾಲವ ಕಳೆಯುವದೇತಕೆ ಬ್ರಹ್ಮನಪಿತ ನಂಘ್ರಿಗಳ ಭಜಿಸುತ ಅ.ಪ ಬಂಧು ಬಳಗ ಮಂದಿಮಕ್ಕಳೆಲ್ಲರು ಕೂಡಿ ಒಂದೆ ಸ್ಥಳದಿ ಭಜನೆಯಮಾಡಿ ಇಂದಿರಾರಮಣನ ಚಂದದಿ ಪೊಗಳಲು ಬಂದ ದುರಿತಗಳ ಪೊಂದಿಸನೆಂದೆಂದು 1 ಮಾಕಮಲಾಸನ ಲೋಕದ ಜನರಿಗೆ ತಾಕಾಣಿಸಿ ಕೊಳ್ಳದೆ ಇಹನು ಶ್ರೀಕರ ಸಲಹೆಂದು ಏಕ ಭಕುತಿಯಲಿ ಲೋಕವಂದ್ಯನ ಸ್ತುತಿಗೆ ನೂಕುವ ಅಘಗಳ 2 ಅತಿಶಯದಿಂದಲಿ ಸತಿಸುತರೆಲ್ಲರು ಪತಿತಪಾವನನ ಕೊಂಡಾಡುತಲಿ ಗತಿ ನೀನಲ್ಲದೆ ಮತ್ತೆ ಹಿತರ್ಯಾರಿಲ್ಲವೆನೆ ಸತತ ಸುಕ್ಷೇಮವಿತ್ತು ಪಾಲಿಸುವಂಥ 3 ಶ್ರಮವ ಪರಿಹರಿಸೆಂದು ನಮಿಸಿಬೇಡುವ ಭಕ್ತ ಜನರನು ಸಂತೈಸುತಲಿಹನು ಹನುಮ ಭೀಮ ಮಧ್ವಮುನಿಗಳ ಸೇವಿಪ ಮನುಜರ ಮನೋರಥಗಳನೆ ಪೂರೈಸುವೊ 4 ವತ್ಸರ ಆದಿಯಲಿ ಅಕ್ಷರೇಡ್ಯನ ಪಾದ ಕ್ಷಿಪ್ರದಿಂದಲಿ ಸೇವಿಪ ನರನ ಭಕ್ತವತ್ಸಲ ತನ್ನ ಭಕ್ತರ ಸಂಗದೊಳಿಟ್ಟು ಸಂತೈಸುವ ಸತ್ಯಸಂಕಲ್ಪ ಶ್ರೀ5 ತಾಳ ತಂಬೂರಿ ಸುಸ್ವರಗಳಿಂದಲಿ ಬಹು ನೇಮದಿಂದಲಿ ಸರುವರು ಕೂಡಿ ಗಾನಲೋಲನ ಭಜನೆಯ ಮಾಡುತ ಸತ್ಯ ಸ್ವಾಮಿಯ ಗುಣಗಳ ಪೊಗಳುವ ಸುಜನರು 6 ಸಡಗರದಿಂದಲಿ ಕಡಲೊಡೆಯನ ಗುಣ ಪೊಗಳುತ ಹಿಗ್ಗುತ ಅಡಿಗಡಿಗೆ ಕಡಲ ಶಯನ ಕಮಲನಾಭ ವಿಠ್ಠಲನೆಂದು ತೊಡರು ಬಿಡಿಸುವ ಶ್ರೀ 7
--------------
ನಿಡಗುರುಕಿ ಜೀವೂಬಾಯಿ
ಶ್ರೀನರಹರಿ ಕರುಣಾಜಲಧೆ ತವಚರಣವ ನಂಬಿದೆ ಪ ದೀನಜನರು ಪ್ರತಿದಿನ ಮೊರೆಯಿಡುತಿರೆ ನಿಕರ ಕುಲಿಶಾಯುಧ ಧುರಧೀರಾ ಶೂರಾ ಹಿರಣ್ಯ ಕಶಿಪು ಪುರಂದರ ಸನ್ಮುನೀಂದ್ರ ನುತಿ ಪಾತ್ರಸುಚರಿತ 1 ಉಗ್ರರೂಪ ಸಕಲಗ್ರಹಭಯ ಪರಿಹಾರೀ ಶೌರೀ ಮುರ ವೈರಿ ಜಲಜನಾಭ ನಿನ್ನಯ ಚಿಂತನೆ ಕೊಡು 2 ಕ್ಷುದ್ರರೋಗಗಳುಪದ್ರಪಡಿಸುತಿಹದೈಯ್ಯ | ಜೀಯಾ ಕ್ಷೇಮವಿತ್ತು ನಿನ್ನವರ ದಾಸನೆನಿಸೈಯ್ಯಾ ರುದ್ರಾಂತರ್ಗತ ಗುರುರಾಮ ವಿಠಲ ಭದ್ರಮೂರುತಿ ಘಟಿಕಾಚಲನಿಲಯ 3
--------------
ಗುರುರಾಮವಿಠಲ