ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಮಂತ್ರದ ನೆನಪು ಮನಕಂಟಬೇಕು ರಾಮನಾಮದಿ ರಸನೆ ನಲಿಯುತಲಿರಬೇಕು ಪ ರಾಮಮೂರ್ತಿಯ ಕಣ್ಣು ಕಾಣುತಲಿರಬೇಕು ರಾಮಕಥೆಯ ಕಿವಿ ಕೇಳುತಲಿರಬೇಕು ಅ.ಪ ರಾಮಪಾದದ ತೀರ್ಥ ಕಂಠಕಿಳಿಯಬೇಕು ರಾಮ ಪ್ರಸಾದವು ತುಳಸಿಯಾಗಿರಬೇಕು ರಾಮನ ನಿಲಯವೇ ಕ್ಷೇತ್ರವೆನಿಸಬೇಕು ರಾಮನ ಭಜನೆಯೆ ದಿನಚರಿಯಾಗಬೇಕು 1 ರಾಮನಯೋಧ್ಯೆಯೆ ಹೃದಯವಾಗಲಿಬೇಕು ರಾಮಮಂತ್ರದ ಜಪ ಚಿತ್ತದಿ ನಿಲಬೇಕು ರಾಮನೇ ಮಾಂಗಿರಿರಂಗನೆನಲಿಬೇಕು ರಾಮಗೆ ಸಕಲವ ಅರ್ಪಿಸಬೇಕು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್