ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಕೈಯ ಮುಗಿದೊಮ್ಮೆ | ಕೈ ... ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಮನದಲಿನ್ನೊಮ್ಮೆ ಧ್ರುವ ಪುಣ್ಯಕ್ಷೇತ್ರವಹುದಿದು ಸಾರವಾಡಗ್ರಾಮ | ಸಾ... ಕಣ್ಣಾರೆ ಕಂಡು ಯಾತ್ರೆಗೆ ಬಾಹುದು ಬ್ರಹ್ಮಸ್ತೋಮ | ಬಾ... ಸಣ್ಣ ದೊಡ್ಡವರಿಗೆಲ್ಲ ಭಾಸುದು ಸಂಭ್ರಮ | ಭಾ... ದಣಿವು ಹಿಂಗಿ ದೋರುತಿಹುದು ಆನಂದೊಬ್ರಹ್ಮ 1 ಧರೆಯೊಳಧಿಕವಾದ ಕ್ಷೇತ್ರವಿದೆ ಕಾಶಿ | ಕ್ಷೇ... ಹರಿಯುತಿಹುದು ನೋಡಿ ಙÁ್ಞನ ಗಂಗೆಯು ಸೂಸಿ | ಙÁ್ಞ... ಸ್ಮರಣಿಯಿಂದ ಹರಿ ಸೇವ್ಯಾಹುದು ಪಾಪದರಾಶಿ | ಪಾ... ಗುರು ವಿಶ್ವೇಶ್ವರ ತಾರಿಸುತಿಹ ಕರುಣಿಸಿ 2 ಸರ್ವ ತೀರ್ಥ ಮಿಂದ ಫಲ ಬಾಹುದಿಲ್ಲೆ ನೋಡಿ | ಬಾ... ಪೂರ್ವ ಕರ್ಮಾದಿಗಳೆಲ್ಲ ಹೋದವಿಲ್ಲೆ ನೋಡಿ | ಹೋ... ಸರ್ವರು ಅರಿತು ನೀವು ಇದೆ ಯಾತ್ರೆಯ ಮಾಡಿ | ಇ... ನಿರ್ವಾಣ ಪರ್ವಣೀಯ ಫಲ ಬಾಹುದು ಕೈಗೂಡಿ3 ಪುಣ್ಯಗೈದ ವಿಶ್ವನಾಥ ಸತಿಸಹಗೂಡಿ | ಸ... ಜನುಮಾಂತ್ರದ ದೋಷಗಳದಿಲ್ಲೆ ನೋಡಿ | ಗ... ಘನ ಸುಖ ಪಡೆದುನುಮಾನ ಈಡ್ಯಾಡಿ | ಈ... ವರ್ಣಿಸಲಾಗುದು ಸ್ತುತಿ ಸ್ತವನ ಪಾಡಿ 4 ಮನವಿಟ್ಟು ಕೇಳಿ ಸ್ತುತಿ ಭಾವ ಭಕ್ತಿಯಿಂದ | ಭಾ... ಪುಣ್ಯಗೈತೆನ್ನ ಜೀವ ಅನುಭವದಿಂದ | ಅ... ಉನ್ಮನವಾಗಿ ದೋರಿತು ಬ್ರಹ್ಮಾನಂದ | ದೋ... ಧನ್ಯವಾದ ಮಹಿಪತಿ ಗುರು ಕೃಪೆಯಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮರೆತು ಇರುವರೆ ಸರ್ವಜ್ಞನೆನಿಸಿ ಪ ಮರೆತು ಇರುವರೇನೋ ಕರುಣಾ ವಾರಿಧಿ ನರಹರಿಯೆ ಬಾಲನ ದುರುಳತನಗಳೆಣಿಸಿದೊಡೆ ನೀ ಕರೆದು ಮುಂದಕೆ ಪೊರೆವರ್ಯಾರು 1 ಕಲ್ಲು ಕೊಟ್ಟ ಬಿಲ್ಲಿಲಿಟ್ಟ ಕ್ಷುಲ್ಲಕ ಮಾತಾಡಿ ಬಿಟ್ಟ ಕಳ್ಳ ಸುಳ್ಳ ಜಾರನೆಂದ ಗೊಲ್ಲತಿಯರನೆಲ್ಲ ಪೊರೆದಿ 2 ತರಳ ನಿನ್ನ ಪೂಜಿಸಲಾರದೆ ಕರವ ಶಿರದಿ ಇರಿಸೆ ಕೂತು ಕರದಿ ಗುಂಜವಿರಿಸಿ ಸಿರಿಯ ಮರೆತು ಇರುವವರಂತೆ 3 ವರ ಸುಮೌನೀಗಣಕೆ ಬಲ ನಾ ನರಿಯಿರೆಂದು ಬೀರಿ ಚರಣ ಚರಣದರ ಮನೆಯೊಳಿರಿಸಿ ಪೊರೆವಿ ತರಳನ ನೀ ಜರಿವರೇನೊ 4 ಧರಣಿಯೊಳಗೆ ಇರುವ ಕ್ಷೇತ್ರದಿ ವರ ಸುಕ್ಷೇತ್ರವಿದೆಂದು ಅರುಹಿ ಬರುವ ಸಜ್ಜನರನು ಪೊರೆವಿ ಭಾರ ನಾನೊಬ್ಬನೇ ಪೇಳೋ 5 ಶ್ರೀ ನರಹರಿಯೆ ಇನಿತು ಜ್ಞಾನ ಶೂನ್ಯನ ಮಾಡಿ ನಿನ್ನ ಕಾಣಿಸುವರೊಡನೆ ಮಾಧವ 6
--------------
ಪ್ರದ್ಯುಮ್ನತೀರ್ಥರು
ವೃಂದಾವನ ಪ್ರವೇಶಿಸಿದಂದವ ಚಂದದಿ ಪೇಳುವೆ ಪಾಲಿಪುದು ಪ ಇಂದಿರೆಯರಸನ ಪ್ರೇರಣೆಯಿಂದ ಯತಿ ವೃಂದ ತಿಲಕ ರಾಘವೇಂದ್ರರಾನಂದದಿ ಅ.ಪ ಒಂದು ದಿನವು ಶ್ರೀ ರಾಯರು ಶಿಷ್ಯರ ವೃಂದಕೆ ಪಾಠವ ಹೇಳುತಿರೆ ಅಂದು ವಿಮಾನದಿ ಕೃಷ್ಣದ್ವೈಪಾಯನ ಪ ರಂಧಾಮಕೈದಲು ನೋಡಿ ಕೈ ಮುಗಿದು 1 ಎಷ್ಟು ದಿನವು ನಾವಿಲ್ಲಿರಬೇಕೆಂದು ಶಿಷ್ಟ ಗುರುವರರು ಕೇಳಿದೊಡೆ ಕೃಷ್ಣದ್ವೈಪಾಯನರೆರಡು ಬೆಳಗುಳ ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು 2 ನೆರೆದ ಶಿಷ್ಯರದರರ್ಥವೇನೆನುತ ಗುರುಗಳನ್ನು ತಾವ್ ಕೇಳಿದೊಡೆ ಎರೆಡು ವರ್ಷ ತಿಂಗಳು ದಿನವೆರಡೆರಡು ಇರುವುದು ಧರೆಯೊಳಗೆಂದರು ರಾಯರು 3 ಆದವಾನಿಗೆ ಗುರು ಸಂಚಾರ ಪೋಗಿರೆ ಆ ದಿವಾನ ವೆಂಕಣ್ಣ ಬಲು ಆದರಿಸಿದ ಬಳಿ ತಾ ನವಾಬನಿಂದ ಮೋದದಿ ಕೊಡಿಸಿದ ಮಂಚಾಲೆಯನು 4 ಹಿಂದೆ ಪ್ರಹ್ಲಾದರು ಯಾಗವ ರಚಿಸಿದ ಸುಂದರ ಕ್ಷೇತ್ರವಿದೆಂಬುದನು ತಂದು ಮನಕೆ ಗುರುರಾಯರೀ ಕ್ಷೇತ್ರವ ನಂದು ಪಡೆದು ತಾವಿಲ್ಲಿಯೇ ನಿಂತರು 5 ಉತ್ತಮ ನೀಲವರ್ಣದ ಶಿಲೆಯಪಳಿರಿಸಿ ಕೆತ್ತಿಸಿ ವೃಂದಾವನತರಿಸಿ ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು 6 ವೃಂದಾವನದಲಿ ಸ್ಥಾಪಿಸಲೇಳ್ನೂರು ಚಂದದ ಸಾಲಿಗಾಮಗಳ ತಂದಿಟ್ಟರೆ ಸಿದ್ಧತೆಗಳು ಸಕಲವು ಕುಂದಿಲ್ಲದಂದೆ ನಡೆದಿರಲಾಗಲೆ 7 ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ ಸಂದಿಪ ವಿರಹದಿ ನೊಂದಿದ ಶಿಷ್ಯರ ವೃಂದವ ಬಲು ಸಂತೈಸಿದರಾಗಲೇ8 ನಲವತ್ತೇಳು ಸಂವತ್ಸರ ನಾಲ್ಕು ತಿಂ ಗಳು ಇಪ್ಪತ್ತೊಂಭತ್ತು ದಿನಕಾಲ ನಲವಿನಿಂದ ವೇದಾಂತ ಸಾಮ್ರಾಜ್ಯವ ಸಲಹಿ ಸುಕೀರ್ತಿಯ ಗಳಿಸಿದ ಬಳಿಕ 9 ಸಾವಿರದೈನೂರು ತೊಂಭತ್ಮೂರನೆ ಕ್ರತು ಸಂವತ್ಸರದ ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ ವಾಸರ ಮುಹೂರ್ತದಿ ಗುರುವರ 10 ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ ಹಸ್ತಲಾಘವವ ಸ್ವೀಕರಿಸಿ ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ ಅರ್ಥಿಯಲಿ ವೃಂದಾವನವ ಪ್ರವೇಶಿಸಿ 11 ಪದ್ಮಾಸನದಲಿ ಮಂಡಿಸಿ ಎದುರಲಿ ಮುದ್ದುಪ್ರಾಣೇಶನ ನೋಡುತಲಿ ಪದ್ಮನಾಭನ ಧ್ಯಾನದೊಳಿರೆ ಜಪಸರ ಬಿದ್ದು ಬಿಡಲು ಮುಚ್ಚಳಿಕೆಯನಿಡಲು 12 ನೆರೆದಿಹ ವಿಪ್ರರು ಜಯ ಜಯವೆನ್ನುತ ಪರಿಪರಿ ರಾಯರ ಪೊಗಳಿದರು ಕರಿಗಿರೀಶನ ಕರುಣ ಪಡೆದ ನಮ್ಮ ಗುರುಸಾರ್ವಭೌಮನ ಸರಿಯಾರಿಹರು 13
--------------
ವರಾವಾಣಿರಾಮರಾಯದಾಸರು