ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ಕ್ಷೇತ್ರವರ್ಣನೆ (1) ಮೇಲುಕೋಟೆ ಹರಿಯೇ ದೈವಶಿಖಾಮಣಿ ಹರಿಯೇ ಸದ್ಭಕ್ತ ಬಂಧು ಹರಿಯೇ ಪೂಜ್ಯಂ ಹರಿಪೂಜೆಯೆ ಪಾಪಕ್ಷಯ ಹರಿಪೂಜೆಯೆ ಪರಮಪುಣ್ಯದಾಲಯಮದರಿಂ ಕಂದ ಹೃದಯದೊಳರ್ಚಿಸುವೆ ಪ ಪರಮಸುಗತಿಯನು ಬೇಡುವೆಸಂತತ- ಮರೆಯದೆ ಪಾಲಿಸು ವರಗಳನು ಅ.ಪ ಹರುಷದಿ ಪರಮನೆ ನೀನೆಂದು ಉರುತರ ಸೌಖ್ಯಗಳನು ಕೊಡುವ 1 ಮನ್ನಿಸಿಭಕ್ತರಪೊರೆಯುವಧೀರನೆ ಅನ್ಯರಕಾಣೆನುನಾನಿನ್ನು ನಿನ್ನನೆ ನಂಬಿದೆ ನರಹರಿಮೂರ್ತಿಯೆ ಇಂದೀ ಸಂಸೃತಿ ಜಾರಿಸುವ 2 ಲೋಕದ ವಾಸನೆ ಶಾಸ್ತ್ರದವಾಸನೆ- ಸಾಕೈದೇಹದ ವಾಸನೆಯ ಈ ಕಡುವಾಸನೆ ಹೆಚ್ಚಿಸುತ 3 ಮಂಗಳ ಯದುಗಿರಿವಾಸ ಪರಮಗುರು ರಂಗನೆ ನಿಜಕೃಪೆದೋರುತಲಿ ಮಂಗಳಶಾಸನ ಗೈವುತ ಸಜ್ಜನ ಸಂಗದೊಳೆನ್ನನು ಸೇರಿಸುವ 4
--------------
ರಂಗದಾಸರು
(ಊ) ಕ್ಷೇತ್ರವರ್ಣನೆ ಹುಲಿಗನಮೊರಡಿ ಶೇಷಾದ್ರಿಯನು ನೋಡಿರೋ ಸೇವಕಪರಿ ತೋಷಾದ್ರಿಯನು ಕಾಣಿರೊ ಪ ಶೇಷಾದ್ರಿಯನು ನೋಡಿ ದೋಷಾದ್ರಿ ಹುಡಿಮಾಡಿ ಶೇಷಾದ್ರೀಶನ ಪರಿತೋಷದಿಂ ಪಾಡಿ ಅ.ಪ ಚಿನ್ನದಗಿರಿಯಂದದಿ ರಂಜಿಸುವುದು ಬಣ್ಣದೊಳತಿ ದೂರದಿ ಸಣ್ಣದಾಸರು ಗಿರಿ ರನ್ನಪೋಲು ವರ್ಣಹ ಶಯನನ ಕಣ್ಣಲಿ ಕಾಣಿಪ 1 ಬಗೆ ಬಗೆ ವೃಕ್ಷಗಳು ಬನಂಗಳು ಬಗೆ ಬಗೆ ಪಕ್ಷಿಗಳು ಬಗೆ ಬಗೆ ಮೃಗಗಳು ಸೊಗಸಿನೊಳಿರೆ ಬಹು ಬಗೆ ಬಗೆ ಧಾತುಗಳಿಗೆ ನೆಲೆಯಾಗಿಹ 2 ಯುಗಗಳ ಸಂಖ್ಯೆಯೊಳು ನಾಮಂಗಳು ಯಗಳದ್ವಯ ಮೆನಲು ಯುಗಮೊದಲೊಳಗೆ ಪನ್ನಗಗಿರಿಯನೆ ತ್ತೇತಾ ಯುಗದಲ್ಲಿ ಹೇಮದ ನಗವೆಂಬ ಪೆಸರಿನ 3 ದ್ವಾಪರಯುಗದೊಳಗೆ ವೆಂಕಟನಾಮ ವೀ ಪರ್ವತತಕ್ಕೊದಗೆ ಶ್ರೀಪುಲಗಿರಿಮುಖ ರೂಪನೀಯುಗದೊಳು ಶ್ರೀಪತಿಯುತ್ತ ನಿರೂಪದೊಳೊಪ್ಪುವ 4 ದೂರದಿ ಶೋಭಿಸುವ ದುರ್ಜನರಿಗೆ ದೂರವೆ ಮಂದಿರವು ಚಾರುವಿಮಾನ ಪ್ರಾಕಾರವ ತೋರಿಪ ವಾರಿಜಾಸನ ಪಿತ ವರದ ವಿಠಲನಿಹ 5
--------------
ವೆಂಕಟವರದಾರ್ಯರು
(ಋ) ಕ್ಷೇತ್ರವರ್ಣನೆ (1) ಮೇಲುಕೋಟೆ ಯತಿರಾಜ ಸಂಪತ್ಕುಮಾರಾ ಸ ತ್ಕøತದೊಳಗಿರಿಸೆನ್ನ ಧೀರಾ ಪ ಸತತ ಶ್ರೀಮದ್ವೈಷ್ಣವರನಾ ನುತಿಸುವಾನಂದ ದೊಳಗಿರಿಸೈ ಪತಿತಪಾವನ ಕಂಕಣಾಧ್ರುತ ಕ್ಷಿತಿಯ ಪಾಲ ಮಹಾನುಭಾವನೆ 1 ನೋಡಲಿಚ್ಚೈಸಿ ನಾಂ ಬಂದೆ ನನ್ನ ಮೂಢಾಕೃತದೊಳು ನಿಂದೆ ಕೇಡುಗಳು ಬಂದೆನ್ನ ವಿಧ ವಿಧ ಬಾಧೆ ಪಡಿಸುತ್ತಿರುವದಿದೆಕೊ ನೋಡಿ ಸುಜನರ ಕೂಡಿ ಭಜನೆಯ ಮಾಡುವೆನು ಶ್ರೀಮಾಧವಾಗ್ರಣಿ 2 ತುಲಶಿಮಣಿಹಾರ ಲೀಲಾ ಸ ತ್ಫಲತಂತ್ರ ದಾಸಾನುಕೂಲಾ ಕಾಲಕಲನಹುದೊ ಶ್ರೀಮನ್ ಬಾಲಬ್ರಹ್ಮಚಾರಿ ಮದ್ಗುರು ಮೇಲುಕೋಟೆಯೊಳಿರುವೊ ನಿಜವರ ಲೀಲಾಮಾನುಷವಿಗ್ರಹನೆ ನಿಜ ಯತಿರಾಜ ಸಂಪತ್ಕುಮಾರಾ 3
--------------
ಚನ್ನಪಟ್ಟಣದ ಅಹೋಬಲದಾಸರು