ಯಾತಕೊ ಭಯ ಭೀತಿ ಚಪಲತೆಯು ನಿನ
ಗ್ಯಾತಕೊ ಮೂಢಮಾನವ ಪ
ಪಾತಕವಳಿ ಗುರುನಾಥನ ಕೃಪೆಯೊಳು
ಭೂತಳದತಿಶಯದಾತನು ಕಾಣುವಾ ಅ.ಪ
ಈತರದಿ ನೀ ಬಾರದಿರುವಿಯಲ ಮೂಢಮಾನವ
ರಾತ್ರಿ ಬೆಳಕಿನೊಳೇಕವಾಗೋ ಭಲಾಸಿ
ಶೀತೆಯ ಕೊಂಡೊಯ್ದಾತನ ತಮ್ಮಗೆ
ಪ್ರೀತಿಲಿ ಸ್ಥಿರಪದವಿತ್ತನು ಚೀ ಚೀ ನಿನಗ್ಯಾತಕೋ 1
ಯಾತ್ರೆ ಮಾಡೆಲೊ ಕ್ಷೇತ್ರವನ್ನರಿತು ಮೂಢಮಾನವ
ಸೂತ್ರ ಪಿಡಿದಲ್ಲಿ ಪಾತ್ರನಾಗೆಲೊ
ಧಾತ್ರಿಯೊಳು ತುಲಶೀರಾಮನು ಮಾತ್ರ ತಾ ನಿಜ
ಧೋತ್ರವ ತೊಡಿಸುವ ಯಾತಕೊ 2