ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದರೊಳಾರೈಯ್ಯ ನೀನು ಆತ್ಮಾ ವದಗಿ ನಾನೆಂದ ಹಂಕರಿಸಿ ಓಯಂದೆಂಬೆ ಪ ನೋಡುವವನೊಬ್ಬ ತಾ ಕೇಳಲರಿಯನು ನುಡಿಯ ನೋಡಲರಿಯನು ಕೇಳುವವ ರೂಪವಾ ಆಡುವವ ನುಡಿಯೊಬ್ಬ ಪರಿಮಳಂಗಳ ತಿಳಿಯಾ ಅಡಲರುವಿಲ್ಲ ಘ್ರಾಣೇಂದ್ರಿಯವನೆ 1 ಕೊಡುವವಗೆ ನುಡಿಯಿಲ್ಲ ನಡೆವವಗೆ ಕರವಿಲ್ಲಾ ಬಿಡದೆ ಚೇಷ್ಟಿಸುವವಗ ರೂಪವಿಲ್ಲಾ ಒಡನಾರು ಮೂರು ಇಪ್ಪತ್ತೈದು ಕೂಟದಲಿ ಗಡಣದಿಂದಿಹ ಮನೆಗೆ ಕ್ಷೇತ್ರಜ್ಞನೊಬ್ಬನಿಹ 2 ತನ್ನ ನಿಜ ತಾನರಿಯ ಧನ್ಯ ತಾನೆಂತೆಂಬೊ ನಿನ್ನ ಬಲ್ಲವಿಕಿಗಿದು ನೋಡುಚಿತವೆ ಇನ್ಯಾರೆ ತಂದೆ ಮಹಿಪತಿ ಬೋಧವನು ಸವಿದು ಕಣ್ಣದರೆದಚ್ಯುತನ ನೆನೆದು ತಿಳಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬದುಕಲು ಪ್ರಾರ್ಥಿಸಿರೊ ಬಹುದಿನ ಬದುಕಲು ಪ್ರಾರ್ಥಿಸಿರೊ ಪ ಬದುಕಿ ಬಾಳುವಂಥ ಹದವತಿ ಸುಲಭವು ಬುಧಜನ ತೋರುವರದನು ಸಂತೋಷದಿ ಅ.ಪ ನಾನಾ ಯೋನಿಗಳಲ್ಲಿ ಬಂದು ಈ ಮನುಷ್ಯ ಜನ್ಮವು ಏನು ಪುಣ್ಯವೊ 1 ಕಾಲವು ಕೆಟ್ಟಿತು ಬಾಳಲಾಗದೆಂದು ಬಾಲಭಾಷೆಗಳ ಪೇಳದೆ ದ್ಯೆರ್ಯದಿ2 ರಾಜಶಾಸನವು ಈ ಜಗಕಲ್ಲವೆ ಮೂರ್ಜಗದೊಡೆಯನ ಶಾಸನ ಮೀರದೆ 3 ಕ್ಷೇತ್ರ ತೀರ್ಥಗಳು ವ್ಯರ್ಥಗಳಾದರೂ ಕ್ಷೇತ್ರಜ್ಞನ ಕೃಪಾ ಮಾತ್ರವಿದ್ದರೆ ಸಾಕು 4 ಜ್ಞಾನಿಗೆ ಹರಿ ಪ್ರಿಯ ಜ್ಞಾನಿ ಹರಿಗೆ ಪ್ರಿಯ ಜ್ಞಾನವ ಪಡೆದು ಪ್ರಸನ್ನ ಮಾನಸರಾಗಿ5
--------------
ವಿದ್ಯಾಪ್ರಸನ್ನತೀರ್ಥರು