ಗೋವಿಂದ ಈ ವಿಧ ಸಂಭ್ರಮ ನೋಡುವುದಾನಂದ ಪ
ನೋಡಿ ಈ ವಿಧ ಚಂದ ನೋಡಬಾರದೊ ಬೇರೊಂದ ಅ.ಪ
ಉತ್ತಮ ಕಲ್ಪದ ಮುತ್ತುರತ್ನಗಳು
ಹತ್ತಾರೆಡೆಗಳಲಿ
ಉತ್ತಮ ತೀರ್ಥರ ಚಿತ್ತದ ಮೂರುತಿ
ಪುತ್ಥಲಿ ರೂಪದಿ ಮತ್ತೆಲ್ಲಿರುವುದೊ 1
ಕಾಲ ನಿಯಾಮಕ ಕಾಲದ ಗತಿಯನು
ಪಾಲಿಸುವುದೇ ತರವು
ಮೂಲೆ ಮೂಲೆ ಕ್ಷೇತ್ರಗಳನೆ ಬಿಟ್ಟು ಈ
ಮೂಲ ಮಂದಿರಕೆ ಬಂದಿರುವಂತಿದೆ 2
ಚಂದ್ರನ ಕುಲದಲಿ ಜನಿಸಿದ ದೇವಗೆ
ಚಂದ್ರಿಕೆಯಲ್ಲವೆ ಪ್ರಿಯತಮವು
ಚಂದ್ರಿಕಾ ಸೊಬಗಿಲಿ ಮೆರೆದು ನಲಿದ ಶ್ರೀ
ಚಂದ್ರಿಕಾಚಾರ್ಯ ಪ್ರಸನ್ನನ ವೈಭವ 3