ನಿನ್ನಪಾದ ದೊರಕುವುದು ಎಂತೆನಗೆ ರಂಗ
ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ
ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ
ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ
ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು
ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1
ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ
ಬನ್ನ ಬಡಿಸಿದೆನಯ್ಯ ನನ್ನನಂಬಿದವರ
ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ
ನಿನ್ನ ಧ್ಯಾನದ ಖೂನವನ್ನರಿಯೆ ದೇವ 2
ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು
ಪರರಿಗೊಂದಿಕ್ಕಿ ನಾನುಂಡಿರುವೆನೊಂದು
ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ
ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3