ಒಟ್ಟು 28 ಕಡೆಗಳಲ್ಲಿ , 20 ದಾಸರು , 27 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ಎಲ್ಲಿರಲಾರನು ಚೆಲುವ ಗೋಪಾಲ ಮೆಲ್ಲುಲಿಗೊಲಿವನು ಇಲ್ಲಿರಲಾರನೆ ಪ ಕ್ಷುಲ್ಲಕರಿರುವೆಡೆ ನಿಲ್ಲಲಾರನು ದಿಟ ಎಲ್ಲ ಭಕ್ತರ ಮನೆಯಲಿ ನಲಿವನಿವ ಅ.ಪ ಸಕಲ ತೀರ್ಥಂಗಳ ಸಕಲಕ್ಷೇತ್ರಂಗಳ ಸಕಲೋತ್ಸವಗಳ ದರ್ಶನಯಾತ್ರೆ ಭಕುತಿಗೆ ಸಾಧನ ಮಂತ್ರವು ಮಾನವ ಭಕುತಿಯ ಭಜನೆಯೆ ಮುಕುತಿಯ ಮಾರ್ಗವು 1 ಮಲಗಿ ಪಾಡಲು ಅವ ಕುಳಿತು ಕೇಳುವನಂತೆ ಕುಳಿತು ಪಾಡಲು ಅವ ನಿಲ್ಲುವನಂತೆ ನಿಲುತ ಪಾಡಲು ಅವ ನಲಿಯುವನಂತೆ ನಲಿದರೆ ಒಲಿವ ಮಾಂಗಿರಿಪತಿಯಂತೆ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡು ಕಂಡು ನಾನು ಹೇಗೆ ಸುಮ್ಮನಿರಲಿ ಪ ಯಲ್ಲಮ್ಮ ಎಕನಾತಿ ಮೊದಲಾದ ಚಿಲ್ಲರೆ ದೇವರುಗಳಲ್ಲಿ ನಿಷ್ಠೆ ಇಟ್ಟು ||ನಿಲ್ಲದೇ ಭಜಿಸಿ ಸಂತತಾಪುಲ್ಲನಾಭನ ಬಿಟ್ಟು ಕ್ಷುಲ್ಲಕರನ 1 ದೇವರೆಲ್ಲಾ ಸಮ್ಮತವೆಂದುಬೇವಿನ ಉಡಿಗೆ ಊಟಾನಿಟ್ರು ||ಜೀವ ಹರಿಗೆ ಐಕ್ಯವ ಪೇಳುವಕೇವಲ ತಾಮಸ ಜೀವಿಗಳನ 2 ಅಹಂಕಾರದಿಂದಲಿ ಕೆಟ್ಟುದೇಹಿ ಎಂಬೋ ವಾಕ್ಯವ ಬಿಟ್ಟು ||ರಹಸ್ಯದಿಂದಲಿ ಶ್ರೀ ಹರಿಯ ಬಿಟ್ಟುಮೋಹನ್ನ ವಿಠಲನ ಸೋಹಂ ಎಂಬರ 3
--------------
ಮೋಹನದಾಸರು
ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ಪ. ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು 1 ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು 2 ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು3 ಕರ್ಮ ಶ್ರೀಹರಿಗೆ ಅರ್ಪಿತವೆಂದು 4 ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು 5
--------------
ಗೋಪಾಲದಾಸರು
ಕಾಯೋ - ಕಾಯೋ ಪ ಕಾಯೋ ಕಾಯೋ ಗುರು - ರಾಯನೆ ತವ ಪದ ತೋಯಜ ಯುಗ ಎನ್ನ ಕಾಯದಲಿಟ್ಟು ಅ.ಪ ಕ್ಷುಲ್ಲಕ ಮನುಜರ - ಸೊಲ್ಲನೆ ನೀಗಿಸಿ ಹಲ್ಲನೆ ಮುರಿಯುವ - ಬಲ್ಲಿದ ನೀನೇ 1 ಭದ್ರ ಭಕುತಿಯ - ಉದ್ರೇಕವಿತ್ತು 2 ತ್ವತ್ಸೇವಾ ಜನರಲಿ - ಮತ್ಸರ ಮಾಡುವ ಕುತ್ಸಿತ ಜನತÀÀತಿ - ವಿಚ್ಛೇದ ಮಾಡುವ 3 ನಿನ್ನಯ ಜನರನ - ಮನ್ನಣೆ ಮಾಡದೆ ಬನ್ನವ ಬಡಿಪರ - ಖಿನ್ನರ ಮಾಡೀ 4 ದೂತರ ನಿಚಯಕೆ - ಈ ತೆರ ಚಿಂತೆಯು ಯಾತಕೆ ಗುರು ಜಗನ್ನಾಥ ವಿಠಲ ದೂತಾ 5
--------------
ಗುರುಜಗನ್ನಾಥದಾಸರು
ಜೋ ಜೋ ಜೋ ಜೋ ದೇವರದೇವನೆ ಜೋ ಜೋ ಪ ಶರಣ ಹೃತ್ಕು ಮುದನಿಶಾಮಣ ಜೋ ಜೋ ದುರಿತಾವಳಿತಮದ್ಯುಮಣೀ ಜೋ ಜೋ ಸುರಮುನಿಜನ ಚಿಂತಾಮಣಿ ಜೋ ಜೋ ಚೂಡಾಮಣಿ ಜೋ ಜೋ 1 ಬಾಲಕಲೀಲಾಲೋಲನೆ ಜೋ ಜೋ ಮೂಲೋಕಜೀವನಪಾಲನೆ ಜೋ ಜೋ ಕ್ಷುಲ್ಲಕರಿಪುಕುಲ ಶಾಲನೆ ಜೋ ಜೋ ತಿಲಕಸ್ತೂರಿ ಬಾಲನೆ ಜೋ ಜೋ 2 ಮೋಹನ ಮಾನಸ ಮೂರ್ತಿಯೆ ಜೋ ಜೋ ಮಹಿಮನುಪಮ್ಯದ ಕೀರ್ತಿಯೆ ಜೋ ಜೋ ಇಹಪರದಲಿ ಭಕ್ತ ಸಾರ್ಥಿಯೆ ಜೋ ಜೋ ಮಹಿಪತಿನಂದ ನಿಷ್ಟಾರ್ಥಿಯೆ ಜೋ ಜೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸರ ಸಖ ಮಾಡಂದೆ ಎನ್ನ ಧ್ಯಾಸದಿರಗಲದೆ ಶ್ರೀಹರಿ ತಂದೆ ಪ ಕನಕರಾಯನು ನಿಜದಾಸ ನಿನ್ನ ಘನತರ ಪ್ರಸನ್ನತೆ ಪಡೆದನುಮೇಷ ಅನುದಿನ ನಿಮ್ಮಯ ಘನಮಹಿಮೆಯನು ತೋರಿ ಮುನಿವ್ಯಾಸರಾಯರ ಮನವ ತಣಿಸಿದಂಥ 1 ಘನ ಸತ್ಯ ಕಬೀರದಾಸ ತನ್ನ ತನುಮನಧನವನ್ನು ನಿನಗರ್ಪಿಸೀತ ವನಿತೆಯನೊತ್ತಿಟ್ಟು ತನುಜಾತನನು ಕೊಂದು ಉಣಿಸಿ ಸಂತರಿಂ ಸುತನ ಪ್ರಾಣವ ಪಡೆದಂಥ 2 ವಾಸನಳಿದು ಪುರಂದಾಸ ತನ್ನ ನಾಶಬುದ್ಧಿಗೆ ನಾಚಿ ನೀಗಿ ಮನದಾಸೆ ಸೋಸಿಲಿಂ ತವಪಾದಧ್ಯಾಸ ಬಲಿಸಿ ಜಗದೀಶ ಹೇಸದೆ ನಿಮ್ಮನು ಗಿಂಡಿಲ್ಹೊಡೆದಂಥ 3 ವರನಾಮದೇವ ನಿಜದಾಸ ತನ್ನ ಪರಮಸಂತರಿಗೆಲ್ಲ ಪಾಲಿಸಿ ಭಾಷ ಸಮ ಗೌಪ್ಯದಿಂ ಪಂಪಾಪುರಿಗೈದಿರಲು ನಿನ್ನ ತಿರುಗಿ ಕರೆದೊಯ್ದು ಇರವ ಪೂರೈಸಿದಂಥ 4 ಬಲ್ಲಿದ ತುಕಾರಾಮದಾಸ ಬಲು ಕ್ಷುಲ್ಲಕರುಪಟಳ ಸಹಿಸಿ ಮನದಕ್ಲೇಶ ಎಲ್ಲವ ನೀಗಿ ಹರಿ ಪುಲ್ಲನಾಭನ ಪಾದ ದಲ್ಲೆ ಮನ ನಿಲ್ಲಿಸಿ ಉಲ್ಲಾಸದಿರುವಂಥ 5 ಬಗೆಯ ತಿಳಿದು ಜಗನ್ನಾಥ ನಿಮ್ಮ ಸುಗುಣದರಿದು ವ್ಯಾಧಿ ಕಳೆದುಕೊಂಡು ಪ್ರಮಥ ನಿಗಮಗೋಚರ ನಿನ್ನ ಬಗೆಬಗೆ ಪೊಗಳುತ ಜಗದಮಾಯವ ಗೆಲಿದು ಸೊಗಸಿನಿಂ ನಲಿವಂಥ 6 ಉದಧಿಜಿಗಿದ ಹನುಮಂತ ಮಹ ಪದುಮಾಕ್ಷಿಯಳ ಕಂಡು ನಮಿಸಿದ ಬಲವಂತ ಸದಮಲಾಂಗಿಗೆ ತನ್ನ ಹೃದಯಸೀಳಿದ್ಹಟದಿಂ ಪಾದ ತೋರಿಸಿದಂಥ 7
--------------
ರಾಮದಾಸರು
ನಿನ್ನಪಾದ ದೊರಕುವುದು ಎಂತೆನಗೆ ರಂಗ ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ 1 ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ ಬನ್ನ ಬಡಿಸಿದೆನಯ್ಯ ನನ್ನನಂಬಿದವರ ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ ನಿನ್ನ ಧ್ಯಾನದ ಖೂನವನ್ನರಿಯೆ ದೇವ 2 ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು ಪರರಿಗೊಂದಿಕ್ಕಿ ನಾನುಂಡಿರುವೆನೊಂದು ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ 3
--------------
ರಾಮದಾಸರು
ಮಂಗಳ ಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ ಪ ಮಂಗಳ ಮಾಧವನನು ದಿನ ಪಾಡುವಾನಂದತೀರ್ಥ ಸುರವಂದ್ಯನಿಗೆಅ.ಪ. ತರುಣಿ ರೂಪದಿ ಮೋಹಿಸುತಗರಡಿ ಮನೆಯೊಳು ಬಾರೆನುತದುರುಳನ ಮುಂದಲೆಗುರುಳನು ಪಿಡಿದುಧರೆಯೊಳು ಕೆಡಹಿದಿ ನೀ ತ್ವರಿತಾ 1 ಎಲ್ಲರು ಬಂದರು ಕೀಚಕರುಫುಲ್ಲಾಕ್ಷಿಯ ಚಿತಿಕ್ಹಾಕಿದರುವಲ್ಲಭೆ ಚೀರುವ ಕೇಳುತಕ್ಷುಲ್ಲಕರ ಹೆಡೆ ಖಂಡಿಸಿ ನೂರಾರು 2 ಸೈಂಧವ ವೇಷದಿಯನು ಪಿಡಿಯೆಸುಂದರಿ ನಿನ್ನಗೆ ಅಲ್ಪರಿಯೆತಂದು ಅವನ ಅವಳಿಂದ ವಧಿಸಿದೆಇಂದಿರೇಶನ ಪ್ರಿಯ ಸುರದೊರೆಯೆ 3
--------------
ಇಂದಿರೇಶರು
ಮಧ್ವರಾಯರ ಚರಿತೆ ಕೇಳಲು ಶುದ್ಧವಾಯಿತು ಜನತೆ ಪ ತಿದ್ದಿತೆಲ್ಲರ ನಡತೆ ಸುಲಭದಿ ಲಬ್ಧವಾಯಿತು ಘನತೆ ಅ.ಪ ಉತ್ತಮ ದಿವಿಜರ ಸತ್ಸಭೆಗಳಲಿ ನಿತ್ಯ ಪಾಡುವ ಕಥೆ ಮರ್ತ್ಯಲೋಕದ ಮದ ಮತ್ಸರ ರೋಗಕೆ ಪಥ್ಯಮಾಡುವವರಿಗೆ ಉತ್ತಮವೀ ಕಥೆ 1 ಇಲ್ಲಿಯ ಜೀವನ ಅಲ್ಲಿಗೆ ಸಾಧನ ಎಲ್ಲಿಯು ಭೇದವ ತೋರಿದರು ಕ್ಷುಲ್ಲಕ ಮತಗಳ ಬೆಲ್ಲದ ವಚನವು ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ 2 ಹರಿ ಗುರು ಕೃಪೆಯಿದು ಮರುದಂಶರ ಮೈ ಮರೆಸುವ ಚರಿತೆಯು ಹರಿದುದು ಶ್ರವಣದೊಳ ದುರಿತವು ತೊಲಗಿತು ಪರಮ ಪ್ರಸನ್ನನ ಪರಮ ಪದದ ರುಚಿಯರಿತರು ಸುಜನರು 3
--------------
ವಿದ್ಯಾಪ್ರಸನ್ನತೀರ್ಥರು
ಮರೆತು ಇರುವರೆ ಸರ್ವಜ್ಞನೆನಿಸಿ ಪ ಮರೆತು ಇರುವರೇನೋ ಕರುಣಾ ವಾರಿಧಿ ನರಹರಿಯೆ ಬಾಲನ ದುರುಳತನಗಳೆಣಿಸಿದೊಡೆ ನೀ ಕರೆದು ಮುಂದಕೆ ಪೊರೆವರ್ಯಾರು 1 ಕಲ್ಲು ಕೊಟ್ಟ ಬಿಲ್ಲಿಲಿಟ್ಟ ಕ್ಷುಲ್ಲಕ ಮಾತಾಡಿ ಬಿಟ್ಟ ಕಳ್ಳ ಸುಳ್ಳ ಜಾರನೆಂದ ಗೊಲ್ಲತಿಯರನೆಲ್ಲ ಪೊರೆದಿ 2 ತರಳ ನಿನ್ನ ಪೂಜಿಸಲಾರದೆ ಕರವ ಶಿರದಿ ಇರಿಸೆ ಕೂತು ಕರದಿ ಗುಂಜವಿರಿಸಿ ಸಿರಿಯ ಮರೆತು ಇರುವವರಂತೆ 3 ವರ ಸುಮೌನೀಗಣಕೆ ಬಲ ನಾ ನರಿಯಿರೆಂದು ಬೀರಿ ಚರಣ ಚರಣದರ ಮನೆಯೊಳಿರಿಸಿ ಪೊರೆವಿ ತರಳನ ನೀ ಜರಿವರೇನೊ 4 ಧರಣಿಯೊಳಗೆ ಇರುವ ಕ್ಷೇತ್ರದಿ ವರ ಸುಕ್ಷೇತ್ರವಿದೆಂದು ಅರುಹಿ ಬರುವ ಸಜ್ಜನರನು ಪೊರೆವಿ ಭಾರ ನಾನೊಬ್ಬನೇ ಪೇಳೋ 5 ಶ್ರೀ ನರಹರಿಯೆ ಇನಿತು ಜ್ಞಾನ ಶೂನ್ಯನ ಮಾಡಿ ನಿನ್ನ ಕಾಣಿಸುವರೊಡನೆ ಮಾಧವ 6
--------------
ಪ್ರದ್ಯುಮ್ನತೀರ್ಥರು
ಯಾವಲ್ಲಿ ಅಡಗಿರುವಿ ಯಾವಲ್ಲಿ ಹುಡುಕಲಿಭಾವದ ಮೂಲೆಯ ರಾವನು ಬಿಟ್ಟು ಅ.ಪ. ಕಣ್ಣುಮುಚ್ಚಾಲೆಯಾಟ ಬೇಡಯ್ಯ ಈಬಣ್ಣದ ನುಡಿಯ ಬೇಟಕಣ್ಣು ಮುಚ್ಚಲು ಕೊಟ್ಟಿ ಟಣ್ಣನೆ ಜಿಗಿದೋಟಅಣ್ಣಾ ಹುಡುಕಿ ಹುಡುಕಿ ಹಣ್ಣಾಗಿ ಹೋದೆನೋ 1 ಎಲ್ಲೆಲ್ಲೂ ತುಂಬಿರುವೆ ಹುಡುಕಲು ನೀನೆಲ್ಲೆಲ್ಲ್ಯೂ ಸಿಗದಿರುವೆಕ್ಷುಲ್ಲಕನೆನ್ನನ್ನು ಚಲ್ಲದೆ ನನ್ನೆದುರುಚೆಲ್ವರೂಪದೆ ಬಂದು ನಿಲ್ವುದನ್ನು ಬಿಟ್ಟು 2 ಕಡುಕಷ್ಟ ಹುಡುಕುವದು ಹಿಡಿದು ಹಿಡಿದು ತಂದುಒಡಲಲ್ಲಿಡಲು ಮತ್ತೇಒಡನೆ ನುಸುಳಿಕೊಂಡುಬಿಡವಲೋಡೋಡಿ 3 ಇದೀಗ ನಡೆದು ತಂದು ನೆನೆಯಲು ನಿನ್ನಸದಾವಕಾಲಕೆಂದು ಹೃದಯದ ಗವಿಯೊಳುಮುದದಿ ಕೂಡಿಸಿ ಮೇಲೆಬದಿಗೆ ಕಾವಲವಿಟ್ಟು ಮನವ ಟೊಣೆದು ನೀ 4 ಬದರಿ ಕಾಶಿ ಕಂಚಿಯೋ ನೀನಿರುವುದುಮಥುರೆ ಪಂಢರಪುರವೊಪದುಮಾವತಿ ಗಿರಿಯೋ ಉಡುಪಿ ದ್ವಾರಕೆಯೊಗದುಗೋ ನೀ ಹೇಳಯ್ಯ ವೀರನಾರಾಯಣ 5
--------------
ವೀರನಾರಾಯಣ
ವಸ್ತು ತಾ ಬೇರೆ ಅದೆ | ನಿಜವಸ್ತು ಅರಿತವ ಬಲ್ಲಾ ಪ ಮಣಿ ಎಣಿಸುವದಲ್ಲ ||ಹೊನ್ನು ಹೆಣ್ಣಿಗೆ ಮೆಚ್ಚಿ ಬಣ್ಣದ ಮಾತಾಡಿ |ಚೆನ್ನಿಗ ತನದಿಂದ ತಿರುಗುವದಲ್ಲ 1 ಮಾನ ಮನ್ನಣೆಗಾಗಿ ಜ್ಞಾನದ ಮಾತುಗಳಾಡಿ |ಧ್ಯಾನ ಮೌನವನು ತೋರುವರು |ಮನ್ನಣೆಯಾಗದಿರೆ ಛಾನಸತನದಿಂದ ಜನರ ದೂರುವರಲ್ಲ 2 ಮನವ ಸ್ವಸ್ಥವ ಮಾಡದೆಅನೇಕ ವ್ಯಥೆ ಕೂಡಿ ಕನಕದಾಶೆಗಾಗಿ ಕೆಡಬೇಡ |ಬಲ್ಲ ರಾಯರ ಪ್ರಭು ರುಕ್ಮಭೂಷಣ ಕೂಡಿಕ್ಷುಲ್ಲಕ ತನವ ಬಿಟ್ಟು ಸುಖಿಸಿರಯ್ಯ 3
--------------
ರುಕ್ಮಾಂಗದರು
ಶುಂಠನಿಗೆ ಉಂಟೆ ವೈಕುಂಠಾ | ಬಂಟನಿಗೆ ಉಂಟೆ ಒಡತನವು ಪ ಕಳ್ಳನಿಗೆ ಉಂಟೆ ಪರರು ಒಡವೆ ಗಳಿಸಿದ ಕಷ್ಟ | ಸುಳ್ಳನಿಗೆ ಉಂಟೆ ಮಿತಿಯಾದ ಭಾಷೆ|| ಕೊಲ್ಲುವನಿಗೆ ಉಂಟೆ ದಯಾದಾಕ್ಷಿಣ್ಯದ ಮಾತು | ಕ್ಷುಲ್ಲಕನಿಗೆ ಉಂಟೆ ಗುಣ ಭಾರಿ ಬುದ್ಧಿಗಳು 1 ಉಪವಾಸಿಗೆ ಉಂಟೆ ಅನ್ನ ಆಹಾರದ ಚಿಂತೆ | ತಪಸಿಗೆ ಉಂಟೆ ಇಹದ ವ್ಯಾಕುಲ || ಕೃಪಣನಿಗೆ ಉಂಟೆ ದಾನ-ಧರ್ಮದ ಚಿಂತೆ | ಚಪಳನಾರಿಗೆ ಉಂಟೆ ತನ್ನ ಮನೆವಾರ್ತೆ 2 ರುಚಿ | ಹಾದಿ ಬಿಟ್ಟವಗುಂಟೆ ಮನದ ಧೈರ್ಯ || ವೇದನೆಬಡುವಗುಂಟೆ ಅನ್ನಿಗರ ಸಂಧಾನ | ಕ್ರೋಧದವಗುಂಟೆ ಬಲು ಶಾಂತ ನೀತಿ 3 ಕಾಮಾತುರಗೆ ಉಂಟೆ ಭವಕುರಿತ ಲಜ್ಜೆಗಳು | ನೇಮ ನಿತ್ಯಗೆ ಉಂಟೆ ಮನದರೋಗ || ಹೇಮಾತುರಗೆ ಉಂಟೆ ಗುರು ಬಾಂಧವ ಸ್ನೇಹ | ತಾಮಸಿಗೆ ಉಂಟೆ ಶುಭಕರ್ಮ ಸದ್ಭಕ್ತಿ 4 ದಾನಿಗೆ ಉಂಟೆ ಇಂದಿಗೆ ನಾಳಿಗೆಂಬೋದು | ಜ್ಞಾನಿಗೆ ಹತ್ಯಾದಿ ದೋಷ ಉಂಟೆ | ಸಿರಿ ವಿಜಯವಿಠ್ಠಲ ಸ್ವಾಮಿಯ ಧೇನಿಸುವಗುಂಟೆ ದಾರಿದ್ರ್ಯ ದುಷ್ಕರ್ಮ5
--------------
ವಿಜಯದಾಸ
ಶ್ರೀ ವಾಯುದೇವರ ಸ್ತುತಿ ಪವಮಾನ ಪವಮಾನ ತವನವ ಪದ ಪಲ್ಲವ ಜವ ತೋರಿಸೊ ಪ ಪಿನಾಕ ಹರಿಪಾದ ಕೋಕನದ ಮಧುಪ ಕೃಪಾಕರ ಗುರುವರ 1 ಕ್ಷುಲ್ಲಕ ಮಲ್ಲಕ ಸು ದಲ್ಲಣ ದ್ರೌಪದಿ ವಲ್ಲಭ ಬಲ್ಲಿದ ಬಲ್ಲವರೂಪಿ 2 ಯತಿಕುಲಪತಿ ದಿತಿ ಸುತ ಮಥನನೆ ಪತಿ ಕಥೆಯಲಿ ರತಿ ನೀಡ್ಹಿತದಲಿ 3 ಪ್ರೇಮದ ಕಾಮದ ರಾಮನ ಕ್ಷೇಮವ ಭೂಮಿಜೆ ಗರುಪಿದ ವ್ಯೋಮಕೇಶನುತಾ 4 ಪತಿ ತಾಮಸ ಕೌರವ ಸ್ತೋಮವಳಿದ ಸುತ್ರಾಮಜ ಪ್ರೀಯ ನಮೋ 5 ಕ್ಷುದ್ರಾ ದ್ವೈತರ ಸದ್ದಳಿದಾಮಲ ಪದ್ಧತಿಗೈದ ಪ್ರಸಿದ್ಧ ಮಧ್ವಮುನಿ 6 ಸಿಂಧು ದಾಟಿ ಕುರು ವೃಂದ ವಳಿದ ಕರ್ಮಂದಿಯ ಶಿರಿಗೋವಿಂದ ವಿಠಲಸುತ 7
--------------
ಅಸ್ಕಿಹಾಳ ಗೋವಿಂದ