ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿತ್ರಾಪುರದ ದುರ್ಗಾ) ಚಿತ್ರಾಪುರ ನಾಯಕಿ ಪಾಲಿಸು ನಮ್ಮ ಗೋತ್ರ ವೃದ್ಧಿದಾಯಕಿ ಭ್ರಾತ್ರವ್ಯ ಭಯದಿಂದ ಭಜಿಸಿದ ವಿಧಿಯ ಸ್ತೋತ್ರಕೊಲಿದ ಮೊದಗಾತ್ರದೇವನ ರಾಣಿ ಪ. ಸರ್ವಮಂಗಲೆ ನಿನ್ನನು ಕಾಣಲು ಕಷ್ಟ ಪರ್ವತ ಪುಡಿಯಾದುದು ಶರ್ವ ಸುರೇಂದ್ರಾದಿ ಗೀರ್ವಾಣವಂದ್ಯೆ ನೀ ನಿರ್ವಹಿಸುವುದೆನ್ನ ಸರ್ವಕಾರ್ಯಗಳನ್ನು 1 ಕ್ಷುದ್ರರ ಮೋಹಿಸಲು ಹರಿಯು ನಿದ್ರಾ ಮುದ್ರೆಯ ಧರಿಸಿರಲು ರೌದ್ರ ರಕ್ಕಸ ಮಧುಕೈಟಭರನು ಕರು- ಣಾದ್ರ್ರ ಹೃದಯದಿಂದ ಕೊಲಿಸಿದ ಪತಿಯಿಂದ 2 ವಹಿಸಿದೆ ಸಕಲವನ್ನೂ ಸಹಿಸದ ಶತ್ರು ಪುಂಜಗಳನ್ನು ತ್ವರಿತದಿ ದಹಿಸು ದಾಸನೆಂದು ಗ್ರಹಿಸೆನ್ನ ಪಾಲಿಸು 3 ಚಂಡಮುಂಡರ ಶಿರವ ಕತ್ತರಿಸುತ ಚಂಡನಾಡಿದ ಭರವ ಕಂಡು ಮನಕೆ ರೋಷಗೊಂಡು ದೈತ್ಯರ ರಕ್ತ ಹಿಂಡಿ ದೇಹವ ತುಂಡು ತುಂಡು ಮಾಡಿದ ಧೀರೆ 4 ತಪ್ಪುಗಳೆಣಿಸದಿರೇ ಶೇಷಾದ್ರೀಶ- ನೊಪ್ಪಿದ ಗುರುವ ತೋರೆ ಅಪ್ಪಿಳಿಸರಿಗಳ ಚಿಪ್ಪನುಳಿಯದಂತೆ ತಪ್ಪಿಸು ಭಯವ ತಿಮ್ಮಪ್ಪನ ರಾಜನ ನೀರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ ಕ್ಷಿತಿಪತಿದಾಸರೆ ಅ.ಪ ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ | ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ ನುದ್ಧರಿಸಿದ ಕರುಣೀ 1 ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ || ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ ಶುಭಗರೆವ ದಯಾನಿಧೇ 2 ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ ಧಾಮವೆಂದೆನಿಸಿ ಸುಸ್ತಂಭದೊಳಿಹರೇ 3
--------------
ಶಾಮಸುಂದರ ವಿಠಲ
ಶ್ರೀನರಹರಿ ಕರುಣಾಜಲಧೆ ತವಚರಣವ ನಂಬಿದೆ ಪ ದೀನಜನರು ಪ್ರತಿದಿನ ಮೊರೆಯಿಡುತಿರೆ ನಿಕರ ಕುಲಿಶಾಯುಧ ಧುರಧೀರಾ ಶೂರಾ ಹಿರಣ್ಯ ಕಶಿಪು ಪುರಂದರ ಸನ್ಮುನೀಂದ್ರ ನುತಿ ಪಾತ್ರಸುಚರಿತ 1 ಉಗ್ರರೂಪ ಸಕಲಗ್ರಹಭಯ ಪರಿಹಾರೀ ಶೌರೀ ಮುರ ವೈರಿ ಜಲಜನಾಭ ನಿನ್ನಯ ಚಿಂತನೆ ಕೊಡು 2 ಕ್ಷುದ್ರರೋಗಗಳುಪದ್ರಪಡಿಸುತಿಹದೈಯ್ಯ | ಜೀಯಾ ಕ್ಷೇಮವಿತ್ತು ನಿನ್ನವರ ದಾಸನೆನಿಸೈಯ್ಯಾ ರುದ್ರಾಂತರ್ಗತ ಗುರುರಾಮ ವಿಠಲ ಭದ್ರಮೂರುತಿ ಘಟಿಕಾಚಲನಿಲಯ 3
--------------
ಗುರುರಾಮವಿಠಲ
ರಂಗ ನೀ ಎನ್ನೊಡೆಯನಾಗಿ ಅಮಂಗಳಾತ್ಮರ ಮನೆಗೆ ಹೋಗ್ಯೆನ್ನಿಂಗಿತವನುಸುರಿದರೆ ಕುಂದಿನ್ನಾರಿಗೆಲೆ ತಂದೆ ಪ.ಹಂಚಿನೆದುರಲಿ ಹಲ್ಲು ತೆರೆದರೆಮಿಂಚುಕನ್ನಡಿಯಾಗಬಲ್ಲದೆವಂಚಕರ ಅನುಸರಿಸಿ ಒಡಲಾಸೆಯಲಿ ಬಳಲಿದರೆಕಿಂಚಿದಭಿಮಾನಿಲ್ಲೆ ನಿನಗೆ ಪ್ರಪಂಚ ಸೂತ್ರಿ ಮುರಾರಿ ಎನ್ನಯಸಂಚಿತಾರಬ್ಧಾಗಮವ ನೂಕುವರು ದಾರುಂಟೈ 1ಅರಸು ಮುಟ್ಟಿದ ನಾರಿ ಮಾನ್ಯಳುಪರಸುಹೊಂದಿದ ಲೋಹ ಪ್ರಿಯಪರಮಪುರುಷ ನಿನ್ನವನೆನಿಸಿ ಕ್ಷುದ್ರರ ವಶವ ಮಾಡುವರೆಅರಿದುದಾವುದಘಟಿತಘಟಕನೆಶಿರಿವಿರಿಂಚಿ ಶಿವೇಂದ್ರರೊಡೆಯನೆಪರಮಪಾತಕಿಯಾದರೇನ್ಮ್ಮುದ್ರಾಂಕಿತನು ಕಾಣೈ ರಂಗ2ಮಧ್ವರಗಣನೆ ನಿನ್ನ ಶರಣರುಒದ್ದು ಭವಸಾಗರವ ದಾಟಿದರುದ್ಧಟರು ನಾಕೇಳಿಕಕುಲತೆಯಿಂದ ಮೊರೆ ಹೋಗುವೆಅದ್ದು ವಿಷದೊಳಗೆ ಸುಧೆಯೊಳುಅದ್ದು ನಿನ್ನ ನಂಬಿದವನು ನಾಶುದ್ಧ ಭಟಜನಪಾಲ ಪ್ರಸನ್ವೆಂಕಟಾದ್ರೀಶ 3
--------------
ಪ್ರಸನ್ನವೆಂಕಟದಾಸರು