ಮಂಗಳನಾಮಾ ನಮೋ ನಮೋ ಪ
ಮಾಂಗಿರಿಧಾಮಾ ನಮೋ ನಮೋ ಅ.ಪ
ಅಂಗಜಾತ ಪಿತ ಸುರಪತಿವಿನುತಾ
ತುಂಗ ಕೃಪಾಂಬಕ ನಮೊ ನಮೋ 1
ರಂಗನಾಥ ನೀಲಾಂಗ ಮಹಾದ್ಭುತ
ಸಿಂ[ಗಾನ]ನ ಹರೇ ನಮೋ ನಮೋ 2
ನಾಗಾಲಂಕೃತ ಸರೋಜ ಭೂಷಿತ
ಕಮಲಭವಾನತ ನಮೋ ನಮೋ 3
ತಾರಕ ನಾಮ ನಮೋ ನಮೋ
ರಘುರಾಮಾ ನಮೋ ನಮೋ 4
ಸುರಮುನಿ ನಾರದ ಗೌತಮ ಪ್ರೇಮಾ
ಧರೆಗಭಿರಾವೂ ನಮೋ ನಮೋ 5
ಗಿರಿಜಾಧವನುತ ಗುಣ ಮಣಿಧಾಮಾ
ರಾಕ್ಷಸ ಭೀಮಾ ನಮೋ ನಮೋ 6
ರಾಮಾ ರಘುರಾಮ ಕ್ಷೀರಾಬ್ಧಿಶಾಯಿ
ಸೋಮಾ ಮಾಂಗಿರಿವರ ನಮೋ ನಮೋ7